ವಿಟ್ಲ: ಎರಡು ಕಾರುಗಳ ನಡುವೆ ಡಿಕ್ಕಿ, ಓರ್ವ ಮೃತ್ಯು: ನಾಲ್ವರಿಗೆ ಗಾಯ

0

ವಿಟ್ಲ: ಎರಡು ಕಾರುಗಳ ನಡುವೆ ಪರಸ್ಪರ ಡಿಕ್ಕಿಯಾಗಿ ಬೆಂಗಳೂರು ನಿವಾಸಿಯೊಬ್ಬರು ಮೃತಪಟ್ಟು, ನಾಲ್ವರು ಗಾಯಗೊಂಡ ಘಟನೆ ಮಾಣಿ ಸಮೀಪ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ನಡೆದಿದೆ. ಬೆಂಗಳೂರು ಜೆ.ಪಿ ನಗರದ ಕುರುಬಹಳ್ಳಿ ನಿವಾಸಿ ಲಕ್ಷ್ಮಣ ಆಚಾರಿ (65) ಮೃತ ಪಟ್ಟಿದ್ದು, ಚಾಲಕ ಪ್ರಜ್ವಲ್ (22) ಸಹಿತ ನಾಲ್ವರು ಗಾಯಗೊಂಡಿದ್ದಾರೆ.

 

ಬೆಂಗಳೂರಿನಿಂದ ಬರುತ್ತಿದ್ದ ಕಾರನ್ನು ಪ್ರಜ್ವಲ್ ಚಲಾಯಿಸಿದ್ದು, ಲಕ್ಷ್ಮಣ ಆಚಾರಿ ಅವರು ಪುತ್ರಿಯ ವಿವಾಹ ಆಮಂತ್ರಣ ನೀಡುವ ನಿಟ್ಟಿನಲ್ಲಿ ಊರಿಗೆ ಆಗಮಿಸುತ್ತಿದ್ದರೆನ್ನಲಾಗಿದೆ,

ಮಂಗಳೂರಿನಿಂದ ಮೈಸೂರಿಗೆ ಹೋಗುತ್ತಿದ್ದ ಕಾರಿನವರು ಮಾಣಿ ಜಂಕ್ಷನ್ ನಲ್ಲಿ ರಸ್ತೆ ತಪ್ಪಿ ಬೆಂಗಳೂರು ಮಾರ್ಗದಲ್ಲಿ ಮುಂದುವರಿದ್ದಾರೆ. ಈ ಸಮಯ ಬುಡೋಳಿ ಎಂಬಲ್ಲಿ ಈ ಅಪಘಾತ ನಡೆದಿದೆ. ಈ ಬಗ್ಗೆ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here