ಫೆ.24: ಕಲ್ಪಣೆ ರಾಜರಾಜೇಶ್ವರಿ ದೇವಸ್ಥಾನದ ಭಜನಾ ಮಂಡಳಿಯ 63ನೇ ವಾರ್ಷಿಕೋತ್ಸವ, ದೈವಗಳ ನೇಮೋತ್ಸವ-ಆಮಂತ್ರಣ ಪತ್ರ ಬಿಡುಗಡೆ

0

ಪುತ್ತೂರು: ಸರ್ವೆ ಗ್ರಾಮದ ಕಲ್ಪಣೆ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಭಜನಾ ಮಂಡಳಿಯ ವಾರ್ಷಿಕೋತ್ಸವ ಪ್ರಯುಕ್ತ 63ನೇ ವರ್ಷದ ಅರ್ಧ ಏಕಾಹ ಭಜನೆ, ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಪರಿವಾರ ದೈವಗಳ ನೇಮೋತ್ಸವ ಫೆ.24ರಂದು ನಡೆಯಲಿದ್ದು ಅದರ ಆಮಂತ್ರಣ ಪತ್ರ ಬಿಡುಗಡೆ ಕಾರ್ಯಕ್ರಮ ದೇವಸ್ಥಾನದ ವಠಾರದಲ್ಲಿ ನಡೆಯಿತು.


ದೇವಸ್ಥಾನದ ಆಡಳಿತ ಮೊಕ್ತೇಸರ ಎಂ ಚಂದು ಗೌಡ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಅಮರನಾಥ ರೈ ಸೊರಕೆ, ಎಸ್‌ಸಿಡಿಸಿಸಿ ಬ್ಯಾಂಕ್ ಅಲಪೆ ಮಂಗಳೂರು ಇದರ ಶಾಖಾ ಪ್ರಬಂಧಕರಾದ ಲತಾ ಅಮರನಾಥ್, ಮೋಹನ್ ಕುಮಾರ್ ಕಲ್ಪಣೆ, ಚೇತನ್ ಕುಮಾರ್ ಕಲ್ಪಣೆ, ಯದುಕುಮಾರ್ ಕಲ್ಪಣೆ, ಶ್ರಿಧರ್ ಕಡ್ಯ, ಪುರುಷೋತ್ತಮ ನೆಕ್ಕಿಲು, ಮಧುಚಂದ್ರ ನೆಕ್ಕಿಲು, ಮಾಧವ ಗೌಡ ಕಲ್ಪಣೆ, ಯಮುನಾ ಕಲ್ಪಣೆ, ನೀಲಪ್ಪ ಕಟ್ಟತ್ತಡ್ಕ, ರವಿ ಬಾಳಾಯ ನೀಲಮ್ಮ ಕಲ್ಪಣೆ, ಭವೀಷ್ ಕಲ್ಪಣೆ, ಹಾರ್ದಿಕ್ ಕಲ್ಪಣೆ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here