ಫೆ.3-12: ಗಾಳಿಮುಖ ಪುದಿಯವಳಪ್ಪ್ ಮಖಾಂ ಉರೂಸ್

0

ಪುತ್ತೂರು: ದ.ಕ ಜಿಲ್ಲೆಯ ಪ್ರಸಿದ್ಧ ಝಿಯಾರತ್ ಕೇಂದ್ರಗಳಲ್ಲಿ ಒಂದಾಗಿರುವ ಗಾಳಿಮುಖ ಪುದಿಯವಳಪ್ಪ್ ಮಖಾಂ ಉರೂಸ್ ಕಾರ್ಯಕ್ರಮ ಫೆ.3ರಿಂದ ಫೆ.12ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ಧಾರ್ಮಿಕ ಮತಪ್ರಭಾಷಣ ಕಾರ್ಯಕ್ರಮ ಪ್ರತಿದಿನ ರಾತ್ರಿ 8 ಗಂಟೆಗೆ ಪ್ರಾರಂಭಗೊಳ್ಳಲಿದೆ.

ಫೆ.3ರಂದು ಟಿ.ವಿ ಹಕೀಂ ತಂಙಳ್ ಆದೂರು ಅಧ್ಯಕ್ಷತೆ ವಹಿಸಲಿದ್ದು ಸಯ್ಯದ್ ಪೂಕುಂಞಿ ತಂಙಳ್ ಆದೂರು ಉದ್ಘಾಟಿಸಲಿದ್ದಾರೆ. ಪುದಿಯವಳಪ್ಪ್ ಖತೀಬ್ ಉಮರುಲ್ ಫಾರೂಕ್ ದಾರಿಮಿ ಮುಖ್ಯ ಪ್ರಭಾಷಣ ನಡೆಸಲಿದ್ದಾರೆ. ಫೆ.4ರಂದು ಲುಕುಮಾನುಲ್ ಹಕೀಂ ಸಖಾಫಿ ಪುಲ್ಲಾರ ಮುಖ್ಯ ಪ್ರಭಾಷಣ ನಡೆಸಲಿದ್ದಾರೆ. ಫೆ.5ರಂದು ಆಶಿಕ್ ದಾರಿಮಿ ಆಲಪ್ಪುಝ ಮುಖ್ಯ ಪ್ರಭಾಷಣ ನಡೆಸಲಿದ್ದಾರೆ. ಫೆ.6ರಂದು ದುವಾ ಮತ್ತು ಪ್ರಭಾಷಣವನ್ನು ಸಯ್ಯದ್ ಶಿಹಾಬುದ್ದೀನ್ ಅಲ್ ಅಹ್‌ದಲ್ ಮುತ್ತನ್ನೂರು ತಂಙಳ್ ನಡೆಸಲಿದ್ದಾರೆ. ಫೆ.7ರಂದು ಅಬ್ದುಲ್ ಸಲೀಂ ವಾಫಿ ಮುಖ್ಯ ಪ್ರಭಾಷಣ ನಡೆಸಲಿದ್ದಾರೆ. ಫೆ.8ರಂದು ಸಯ್ಯದ್ ಝೈನುಲ್ ಆಬಿದೀನ್ ತಂಙಳ್ ಕುನ್ನುಂಗೈ ದುವಾಶೀರ್ವಚನ ನೀಡಲಿದ್ದು ಶಮೀರ್ ದಾರಿಮಿ ಕೊಲ್ಲಂ ಮುಖ್ಯ ಪ್ರಭಾಷಣ ನಡೆಸಲಿದ್ದಾರೆ. ಫೆ.9ರಂದು ಸಂಜೆ ಗಂಟೆ 5-೦೦ಕ್ಕೆ ಸಯ್ಯದ್ ಕೆ.ಎಸ್ ಆಟ್ಟಕೋಯ ತಂಙಳ್ ಕುಂಬೋಳ್ ನೇತೃತ್ವದಲ್ಲಿ ಸ್ವಲಾತ್ ಮಜ್ಲಿಸ್ ನಡೆಯಲಿದ್ದು ರಾತ್ರಿ ಮಶ್‌ಹೂದ್ ಸಖಾಫಿ ಗೂಡಲ್ಲೂರು ಮುಖ್ಯ ಪ್ರಭಾಷಣ ನಡೆಸಲಿದ್ದಾರೆ.
ಫೆ.10ರಂದು ಸ್ವಾಲಿಹ್ ಹುದವಿ ತೂದ ಮಲಪ್ಪುರಂ ಮುಖ್ಯ ಪ್ರಭಾಷಣ ನಡೆಸಲಿದ್ದಾರೆ. ಫೆ.11ರಂದು ಸಮಾರೋಪ ಸಮಾರಂಭ ನಡೆಯಲಿದ್ದು ಪುದಿಯವಳಪ್ಪ್ ಜಮಾಅತ್ ಕಮಿಟಿ ಗೌರವಾಧ್ಯಕ್ಷರಾದ ಅಬ್ದುಲ್ಲ ಕುಂಞಿ ಹಾಜಿ ಅಧ್ಯಕ್ಷತೆ ವಹಿಸಲಿದ್ದು ಸಯ್ಯದ್ ಹಮೀದಲಿ ಶಿಹಾಬ್ ತಂಙಳ್ ಪಾಣಕ್ಕಾಡ್ ಉದ್ಘಾಟಿಸಿ ದುವಾ ನೆರವೇರಿಸಲಿದ್ದಾರೆ. ಪಿ.ಕೆ ಬಾದುಷ ಸಖಾಫಿ ಆಲಪ್ಪುಝ ಮುಖ್ಯ ಪ್ರಭಾಷಣ ನಡೆಸಲಿದ್ದಾರೆ. ಹಲವರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಫೆ.12ರಂದು ಬೆಳಿಗ್ಗೆ ಮೌಲೀದ್ ಕಾರ್ಯಕ್ರಮ ನಡೆಯಲಿದ್ದು ಸಂಜೆ ಗಂಟೆ 4-೦೦00ರಿಂದ ಅನ್ನದಾನ ನಡೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here