ಲಂಚ, ಭ್ರಷ್ಟಾಚಾರದ ವಿರುದ್ಧ ಘೋಷಣೆ, ಸಂವಾದ

0

  • ಮಾನಸಿಕ ಪರಿವರ್ತನೆ ಸಮಾಜದಿಂದ ಆದಾಗ ಲಂಚ, ಭ್ರಷ್ಟಾಚಾರ ನಿಲ್ಲುತ್ತದೆ – ಡಾ.ಯು.ಪಿ.ಶಿವಾನಂದ
  • ಲಂಚ, ಭ್ರಷ್ಟಾಚಾರ ನಿಲ್ಲಬೇಕೆಂಬುದು ನಮ್ಮ ಆಶಯ – ಪುರಂದರ ರೈ ಮಿತ್ರಂಪಾಡಿ

 

                   ಲಂಚ, ಭ್ರಷ್ಟಾಚಾರದ ವಿರುದ್ದ ಘೋಷಣೆ, ಪ್ರತಿಜ್ಞೆ   ಸ್ವೀಕರಿಸುವುದು

ಪುತ್ತೂರು: ಪ್ರತಿಷ್ಠಿತ ಪುತ್ತೂರು ರೋಟರಿ ಪೂರ್ವದ ವ್ಯವಹಾರಿಕ ಸಭೆಯಲ್ಲಿ ಸುದ್ದಿ ಜನಾಂದೋಲನದ ಮೂಲಕ ಜಾಗೃತಿ ಮೂಡಿಸುತ್ತಿರುವ ಲಂಚ, ಭ್ರಷ್ಟಾಚಾರದ ವಿರುದ್ಧ ಘೋಷಣೆ ಕೂಗಿ, ಪ್ರತಿಜ್ಞೆ  ಸ್ವೀಕರಿಸಿ ಆಂದೋಲನಕ್ಕೆ ಬೆಂಬಲ ವ್ಯಕ್ತಪಡಿಸಿದ ವಿಶೇಷ ಕಾರ್ಯಕ್ರಮ ಮಾ.14ರಂದು ಪುತ್ತೂರು ರೋಟರಿ ಮನೀಷಾ ಸಭಾಂಗಣದಲ್ಲಿ ನಡೆಯಿತು. ಸಭೆಯಲ್ಲಿ ಸುದ್ದಿ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಡಾ.ಯು.ಪಿ.ಶಿವಾನಂದ ಅವರು ರೋಟರಿ ಸದಸ್ಯರೊಂದಿಗೆ ಸಂವಾದ ಕಾರ್ಯಕ್ರಮ ನಡೆಸಿದರು.

ಮಾನಸಿಕ ಪರಿವರ್ತನೆ ಸಮಾಜದಿಂದ ಆದಾಗ ಲಂಚ, ಭ್ರಷ್ಟಾಚಾರ ನಿಲ್ಲುತ್ತದೆ. ಈ ಆಂದೋಲನ ಮನೆಯಿಂದ ಪ್ರಾರಂಭವಾಗಿ ಎಲ್ಲಾ ಕಚೇರಿಯಲ್ಲೂ ಆಗಬೇಕು. ನಾವು ಸರಕಾರಿ ಕಚೇರಿಗೆ ವಿರೋಧ ಅಲ್ಲ. ಆಂದೋಲನ ಯಾರ ವಿರೋಧವೂ ಅಲ್ಲ. ಲಂಚ ಮತ್ತು ಭ್ರಷ್ಟಾಚಾರ ವಿರುದ್ಧ ಮಾತ್ರ ಆಂದೋಲನ. ಹಾಗಾಗಿ ಎಲ್ಲರೂ ಫಲಕ ಹಾಕಿ ಆಂದೋಲನಕ್ಕೆ ಬೆಂಬಲ ನೀಡಿ. ಯಾವುದೇ ಅಧಿಕಾರಿ ಸಂಬಳವಿದ್ದರೂ ಲಂಚ ತೆಗೆದು ಕೊಂಡಾಗ ಅದು ದೊಡ್ಡ ದರೋಡೆ ಆಗುತ್ತದೆ. ಎಲ್ಲಾ ಅಧಿಕಾರಿಗಳು ಜನಮೆಚ್ಚಿದ ಅಧಿಕಾರಿಗಳಾಗಬೇಕು, ಗ್ರಾಮಸ್ವರಾಜ್ಯದ ಕಲ್ಪನೆ ಕೊಡಲು ಮತ್ತು ಲಂಚ ಭ್ರಷ್ಟಾಚಾರದ ವಿರುದ್ಧದ ಆಂದೋಲನ ದೇಶದಲ್ಲಿ ಗಮನ ಸೆಳೆಯುವ ನಿಟ್ಟಿನಲ್ಲಿ ಚುನಾವಣೆಗೆ ನಿಂತಿದ್ದೆ ಹೊರತು ಯಾವುದೇ ಗೆಲುವು, ವಿರೋಧಕ್ಕಾಗಿ ಅಲ್ಲ ರೋಟರಿ ಸೇರಿದಂತೆ ಹಲವಾರು ಸಂಘಸಂಸ್ಥೆಗಳ ಉದ್ದೇಶ ಎಲ್ಲರನ್ನು ಸೇರಿಸಿ ಉತ್ತಮ ಸಮಾಜದ ಗುರಿ ಹೊಂದುವುದು. ಅದನ್ನೇ ಈ ಆಂದೋಲನ ಮಾಡುತ್ತಿದೆ ಎಂದರು. ಸಂವಾದ ಕಾರ್ಯಕ್ರಮದಲ್ಲಿ ಪ್ರಶ್ನೆಗಳಿಗೆ ಸಂಕ್ಷಿಪ್ತವಾಗಿ ಈ ಮೇಲಿನಂತೆ ಮಾಹಿತಿ ನೀಡಿದರು.

ರೋಟರಿ ಪೂರ್ವದ ನಿಯೋಜಿತ ಅಧ್ಯಕ್ಷ ಶರತ್ ಕುಮಾರ್ ರೈ, ರೋಟರಿ ಪೂರ್ವದ ಪೂರ್ವಾಧ್ಯಕ್ಷರಾದ ಸಚಿದಾನಂದ, ಮುರಳಿಶ್ಯಾಮ್, ವಿಶ್ವಾಸ್ ಶೆಣೈ ಸಂವಾದಲ್ಲಿ ಭಾಗವಹಿಸಿದರು. ವೇದಿಕೆಯಲ್ಲಿ ರೋಟರಿ ಪೂರ್ವದ ಕಾರ್ಯದರ್ಶಿ ಶಶಿಕಿರಣ್ ರೈ, ನಿಯೋಜಿತ ಅಧ್ಯಕ್ಷ ಶರತ್ ಕುಮಾರ್ ರೈ ಉಪಸ್ಥಿತರಿದ್ದರು. ರೋಟರಿ ಸುದರ್ಶನ್ ನಾಯಕ್ ಸ್ವಾಗತಿಸಿದರು. ರೋಟರಿ ಪೂರ್ವದ ಪೂರ್ವಾಧ್ಯಕ್ಷರಾದ ಮುರಳಿಶ್ಯಾಮ್, ಡಾ.ಶ್ಯಾಮಪ್ರಸಾದ್, ಸಚಿದಾನಂದ, ವಿಶ್ವಾಸ್ ಶೆಣೈ ಸೇರಿದಂತೆ ಹಲವಾರು ಮಂದಿ ಸದಸ್ಯರು ಉಪಸ್ಥಿತರಿದ್ದರು. ಸಭೆಯ ಆರಂಭದಲ್ಲಿ ರೋಟರಿ ಪೂರ್ವ ಪೀನ್ಯದ ಸಹಯೋಗದಲ್ಲಿ ಬೆಂಗಳೂರಿನಲ್ಲಿ ಕೃತಕ ಕಾಲು ಮತ್ತು ಮುಂಗೈ ಜೋಡಣಾ ಶಿಬಿರದ ಕುರಿತು ಮಾಹಿತಿ ನೀಡಲಾಯಿತು.

ಘೋಷಣೆ ಕೂಗಿದ ರೋಟರಿ ಸದಸ್ಯರು
ರೋಟರಿ ಪುತ್ತೂರು ಪೂರ್ವದ ಅಧ್ಯಕ್ಷ ಪುರಂದರ ರೈ ಮಿತ್ರಂಪಾಡಿಯವರು ಲಂಚ ಮತ್ತು ಭ್ರಷ್ಟಾಚಾರ ವಿರುದ್ಧ ಘೊಷಣೆ ಕೂಗಿ ಪ್ರತಿಜ್ಞೆ  ಸ್ವೀಕರಿಸಿದರು. ಇದೇ ಸಂದರ್ಭದಲ್ಲಿ ರೋಟರಿ ಸದಸ್ಯರು ಧ್ವನಿಗೂಡಿಸಿದರು. ಡಾ. ಯು.ಪಿ ಶಿವಾನಂದ ಅವರು ರೋಟರಿ ಪೂರ್ವದ ಅಧ್ಯಕ್ಷ ಪುರಂದರ ರೈ ಮಿತ್ರಂಪಾಡಿಯವರಿಗೆ ಲಂಚ ಭ್ರಷ್ಟಾಚಾರ ವಿರುದ್ಧ ಆಂದೋಲನದ -ಲಕ ಹಸ್ತಾಂತರಿಸಿದರು. ಇದೇ ಸಂದರ್ಭದಲ್ಲಿ ಸದಸ್ಯರು ಫಲಕವನ್ನು ಅದಕ್ಕೆ ತಗಲುವ ಮೊತ್ತ ನೀಡಿ ಸ್ವೀಕರಿಸಿದರು.

72 ದಿನದೊಳಗೆ ಲಂಚ, ಭ್ರಷ್ಟಾಚಾರ ನಿಲ್ಲುತ್ತದೆ

 

 

100 ದಿನದೊಳಗೆ ಲಂಚ ಮತ್ತು ಭ್ರಷ್ಟಾಚಾರ ನಿಲ್ಲುತ್ತದೆ ಎಂದು ನಾನು ಹಿಂದೆ ಹೇಳಿದ್ದೆ. ಇನ್ನು ಮುಂದಿನ 72 ದಿನದೊಳಗೆ ಖಂಡಿತವಾಗಿಯೂ ಲಂಚ, ಭ್ರಷ್ಟಾಚಾರ ನಿಲ್ಲುತ್ತದೆ. ಯಾಕೆಂದರೆ ಇದು ಜನಾಂದೋಲನ ಆಗುತ್ತಿದೆ. 72 ದಿನದ ನಂತರ ಯಾರೆ ಆಗಲಿ ಲಂಚ ಕೊಟ್ಟರು ಸಹ ಯಾರೂ ಲಂಚದ ಹಣ ತೆಗೆದು ಕೊಳ್ಳುವುದಿಲ್ಲ. ಇದು ನಾನು ಚಾಲೆಂಜ್ ಆಗಿ ಹೇಳುತ್ತಿದ್ದೇನೆ. ನಿಮ್ಮಲ್ಲಿ ಯಾರಾದರೂ ಲಂಚ ನಿಲ್ಲುವುದಿಲ್ಲ ಎಂದು ಸವಾಲು ಹಾಕುವವರಿದ್ದರೆ ನಾನು ಸವಾಲು ಸ್ವೀಕರಿಸುತ್ತೇನೆ.  ಡಾ. ಯು.ಪಿ.ಶಿವಾನಂದ

ಭ್ರಷ್ಟಾಚಾರ ನಿಲ್ಲಬೇಕೆಂಬುದು ನಮ್ಮ ಆಶಯ

ರೋಟರಿ ಪೂರ್ವ ಅಧ್ಯಕ್ಷ ಪುರಂದರ ರೈ ಮಿತ್ರಂಪಾಡಿಯವರು ಮಾತನಾಡಿ ಲಂಚ ಮತ್ತು ಭ್ರಷ್ಟಾಚಾರ ನಿಲ್ಲಬೇಕೆಂಬುದು ನಮ್ಮ ಆಶಯ. ಇದನ್ನು ಸುದ್ದಿ ಬಿಡುಗಡೆ ಮಾಧ್ಯಮ ಉತ್ತಮ ರೀತಿಯಲ್ಲಿ ಜನರ ಬಳಿಗೆ ಹೋಗಿ ಅರಿವು ಮೂಡಿಸುವ ಕೆಲಸ ಮಾಡುವುದು ಉತ್ತಮ ವಿಚಾರ ಎಂದ ಅವರು ಸುದ್ದಿಯ ಆಂದೋಲನಕ್ಕೆ ಬೆಂಬಲ ವ್ಯಕ್ತಪಡಿಸಿದರು.

LEAVE A REPLY

Please enter your comment!
Please enter your name here