ಪುತ್ತೂರು:ಬೊಳುವಾರು ಸಮೀಪ ವಾಹನಗಳ ವೇಗ ನಿಯಂತ್ರಣದ ಉದ್ದೇಶದಿಂದ ಅಳವಡಿಸಲಾಗಿರುವ ರಸ್ತೆ ಉಬ್ಬು(ಹಂಪ್ಸ್) ರಾತ್ರಿ ವೇಳೆ ವಾಹನ ಸವಾರರ ಗಮನಕ್ಕೆ ಬಾರದೇ ಇರುವುದರಿಂದ ನಾಲ್ಕೈದು ವಾಹನಗಳು ಅಪಘಾತಕ್ಕೀಡಾಗಿವೆ.ಹಂಪ್ಸ್ ಅಳವಡಿಸಿರುವ ಸ್ಥಳದಲ್ಲಿ ಯಾವುದೇ ಸೂಚನಾ ಮಾರ್ಕ್ ಮಾಡದೇ ಇರುವುದು ಇದಕ್ಕೆ ಕಾರಣ ಎಂದು ಸವಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಪಘಾತಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ವಾಹನಗಳ ವೇಗ ನಿಯಂತ್ರಣಕ್ಕಾಗಿ ನಗರಸಭೆಯಿಂದ ವಿವಿಧ ಕಡೆ ರಸ್ತೆಗಳಲ್ಲಿ ಹಂಪ್ಸ್ ಅಳವಡಿಸಲಾಗುತ್ತಿದೆ.ಬೊಳುವಾರು ಸಮೀಪವೂ ಹಂಪ್ಸ್ ಅಳವಡಿಸಲಾಗಿದೆ.ಆದರೆ ಯಾವುದೇ ಮಾರ್ಕ್ಗಳನ್ನು ಮಾಡದೇ ಇರುವುದರಿಂದ ಹಂಪ್ಸ್ ಇರುವುದು ರಾತ್ರಿ ವೇಳೆ ವಾಹನ ಸವಾರರಿಗೆ ಗೋಚರಿಸದೇ ಇರುವ ಕಾರಣ ದ್ವಿಚಕ್ರ ವಾಹನಗಳೆರಡು ಪಲ್ಟಿಯಾಗಿವೆ.ಬಸ್ಸೊಂದರ ಪ್ಲೇಟ್ ತುಂಡಾಗಿದೆ, ಲಾರಿಯೊಂದು ಹಂಪ್ಸ್ ನಲ್ಲಿ ಬಾಕಿಯಾಗಿದ್ದುದಾಗಿ ಸ್ಥಳದಲ್ಲಿ ನೆರೆದವರು ತಿಳಿಸಿದ್ದು ಹಂಪ್ಸ್ ಅಳವಡಿಸಿರುವ ಕುರಿತು ಮಾರ್ಕಿಂಗ್ ಮಾಡದೇ ಇರುವುದರಿಂದ ಈ ರೀತಿ ಅಪಘಾತಗಳಾಗುತ್ತಿರುವುದಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.