ಪುತ್ತೂರು: ಅರಿಯಡ್ಕ ಗ್ರಾಮದ ಕಾರಣಿಕ ಕ್ಷೇತ್ರಗಳಲ್ಲಿ ಒಂದಾಗಿರುವ ಅಮೈ ಪಯಂದೂರು ಉಳ್ಳಾಕುಲು ದೈವಸ್ಥಾನದಲ್ಲಿ ಶ್ರೀ ಉಳ್ಳಾಕುಲು ನೇಮೋತ್ಸವವು ಸಂಭ್ರಮದಿಂದ ನಡೆಯುತ್ತಿದ್ದು ಫೆ.20ರಂದು ಬೆಳಿಗ್ಗೆ ಕೊಲ್ಲಾಜೆ ಗೋಳಿಯಲ್ಲಿ ಶ್ರೀ ಧೂಮಾವತಿ ದೈವದ ತಂಬಿಲ ನಡೆದು, ಬೆಳಿಗ್ಗೆ 10 ಗಂಟೆಗೆ ಕಿನ್ನಿಮಾಣಿ ದೈವದ ನೇಮೋತ್ಸವ ಆರಂಭಗೊಂಡಿತು. ನೇಮೋತ್ಸವದ ಬಳಿಕ ಭಕ್ತಾಧಿಗಳಿಗೆ ಗಂಧ ಪ್ರಸಾದ ವಿತರಣೆ ನಡೆದು ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು. ಸಂಜೆ ಶ್ರೀ ಪೂಮಾಣಿ ದೈವದ ನೇಮ ನಡೆದು ಭಕ್ತಾಧಿಗಳಿಗೆ ಗಂಧ ಪ್ರಸಾದ ವಿತರಣೆ ನಡೆದು ರಾತ್ರಿ ಅನ್ನಸಂತರ್ಪಣೆ ನಡೆಯಿತು. ಗ್ರಾಮಸ್ಥರು ಅಲ್ಲದೆ ಊರಪರವೂರ ನೂರಾರು ಭಕ್ತಾಧಿಗಳು ಅನ್ನಪ್ರಸಾದ ಸ್ವೀಕರಿಸಿದರು. ಅನ್ನಸಂತರ್ಪಣೆಯ ಬಳಿಕ ಶ್ರೀ ಪಂಜುರ್ಲಿ, ಶ್ರೀ ಗುಳಿಗ ದೈವದ ನೇಮ ನಡೆದು ಭಕ್ತಾಧಿಗಳಿಗೆ ಗಂಧ ಪ್ರಸಾದ ವಿತರಣೆ ನಡೆಯಿತು. ದೈವಸ್ಥಾನದ ಉತ್ಸವ ಸಮಿತಿ ಗೌರವಾಧ್ಯಕ್ಷ ಎ.ಚಿಕ್ಕಪ್ಪ ನಾಕ್ ಅರಿಯಡ್ಕ, ದೈವಸ್ಥಾನದ ಆಡಳಿತ ಮೊಕ್ತೇಸರರಾದ ಡಾ| ಜಯರಾಮ ಶೆಟ್ಟಿ ಬಜ್ಪೆ, ಸುಲೋಚನಾ ಜೆ. ಶೆಟ್ಟಿ, ಮೊಕ್ತೇಸರರುಗಳಾದ ಎ.ಕೆ ರೈ ಅರಿಯಡ್ಕ, ಸೋಮಪ್ಪ ರೈ ಅಮೈ ಹಾಗೂ ಉತ್ಸವ ಸಮಿತಿಯ ಸರ್ವ ಸದಸ್ಯರು ಹಾಗೂ ಊರ ಹತ್ತು ಸಮಸ್ತರು ಉಪಸ್ಥಿತರಿದ್ದರು.
ಇಂದು ದೈವಸ್ಥಾನದಲ್ಲಿ
ಫೆ.21 ರಂದು ಬೆಳಿಗ್ಗೆ ಶ್ರೀ ಪಿಲಿಭೂತ ದೈವದ ನೇಮ, ಗಂಧ ಪ್ರಸಾದ ವಿತರಣೆ ಬಳಿಕ ಶ್ರೀ ಧೂಮಾವತಿ ದೈವದ ನೇಮ, ಗಂಧ ಪ್ರಸಾಧ ವಿತರಣೆ, ಸಂಜೆ 3 ಗಂಟೆಯಿಂದ ಶ್ರೀ ಉಳ್ಳಾಕುಲು ದೈವದ ಭಂಡಾರ, ಶ್ರೀ ಪಂಜುರ್ಲಿ ದೈವದ ಭಂಡಾರ, ಶ್ರೀ ಧೂಮಾವತಿ ದೈವದ ಭಂಡಾರಗಳನ್ನು ಆಯಾಯ ಸ್ವಸ್ಥಾನಗಳಿಗೆ ಹಿಂತಿರುಗಿಸುವ ಕಾರ್ಯಕ್ರಮ ನಡೆಯಲಿದೆ. ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀ ದೈವದ ಗಂಧ ಪ್ರಸಾದ ಸ್ವೀಕರಿಸುವಂತೆ ದೈವಸ್ಥಾನದ ಪ್ರಕಟಣೆ ತಿಳಿಸಿದೆ.