ಮಾ.12: ಇರ್ದೆ ಬಾಲ್ಯೊಟ್ಟು ಮನೆಯಲ್ಲಿ ಪಾಣಾಜೆ ವಲಯ ಬಂಟ ಸಮಾವೇಶ

0

  • ಬಂಟ್ರೆ ಗೌಜಿ- 2022 ಆಮಂತ್ರಣ ಪತ್ರಿಕೆ ಬಿಡುಗಡೆ, ಸನ್ಮಾನ ಕಾರ್ಯಕ್ರಮ

ಪುತ್ತೂರು: ಬಂಟರ ಸಂಘ ಪುತ್ತೂರು ತಾಲೂಕು ಇದರ ಆಯೋಜನೆಯಲ್ಲಿ ಬಂಟ್ರೆ ಗೌಜಿ-2022 ಆಮಂತ್ರಣ ಪತ್ರಿಕೆ ಬಿಡುಗೆ ಸಮಾರಂಭ ಮತ್ತು ಪಾಣಾಜೆ ವಲಯ ಬಂಟ ಸಮಾವೇಶ ಮಾ.12 ರಂದು ಸಂಜೆ ಇರ್ದೆ ಶಶಿಕುಮಾರ್ ರೈ ಬಾಲ್ಯೊಟ್ಟುರವರ ಮನೆ ವಠಾರದಲ್ಲಿ ನಡೆಯಲಿದೆ.ಬಾಳಪ್ಪ ರೈ ಬಾಲ್ಯೊಟ್ಟುಗುತ್ತುರವರು ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು ದೀಪಕ್ ರೈ ಪಾಣಾಜೆ ಮತ್ತು ಬಳಗದವರಿಂದ `ಮಸ್ತ್ ತೆಲಿಕೆ’ ಹಾಗೂ ಪೂಜಾನೃತ್ಯ ನಡೆಯಲಿದೆ. ಸಂಜೆ 6 ರಿಂದ ಸಭಾ ಕಾರ್ಯಕ್ರಮ ನಡೆಯಲಿದ್ದು ಬಂಟರ ಸಂಘದ ಮಾಜಿ ಅಧ್ಯಕ್ಷ ಜಗನ್ನಾಥ್ ರೈ ಮಾದೋಡಿ(ನುಳಿಯಾಲು)ರವರು ಕಾರ್ಯಕ್ರಮ ಉದ್ಘಾಟಿಸಲಿದ್ದು ಬಂಟರ ಸಂಘದ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟು ಸಭಾಧ್ಯಕ್ಷತೆ ವಹಿಸಲಿದ್ದಾರೆ. ಬಂಟರ ಸಂಘದ ಮಾಜಿ ಅಧ್ಯಕ್ಷ ಕೆ.ಸೀತಾರಾಮ ರೈ ಸವಣೂರುರವರು ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಲಿದ್ದಾರೆ. ಅತಿಥಿಗಳಾಗಿ ಜಿಲ್ಲಾ ಬಂಟರ ಸಂಘದ ಉಪಾಧ್ಯಕ್ಷ ಹೇಮನಾಥ ಶೆಟ್ಟಿ ಕಾವು, ಪುತ್ತೂರು ತಾಲೂಕು ಸಮಿತಿ ಮಾತೃ ಸಂಘದ ಸಂಚಾಲಕ ದಯಾನಂದ ರೈ ಮನವಳಿಕೆಗುತ್ತು, ಬಂಟರ ಸಂಘದ ನಿಟಕಪೂರ್ವ ಅಧ್ಯಕ್ಷ ರಾಧಾಕೃಷ್ಣ ರೈ ಬೂಡಿಯಾರ್, ಮಾಜಿ ಅಧ್ಯಕ್ಷ ಲಕ್ಷ್ಮೀನಾರಾಯಣ ಶೆಟ್ಟಿ ಅರಿಯಡ್ಕ, ಪಾಣಾಜೆ ವಲಯ ಅಧ್ಯಕ್ಷ ಪ್ರಕಾಶ್ವಂದ್ರ ಆಳ್ವ ಮುಂಡೇಲು ಭಾಗವಹಿಸಲಿದ್ದಾರೆ.

ಸನ್ಮಾನ ಕಾರ್ಯಕ್ರಮ
ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿರುವ ಸಾಧಕರಿಗೆ ಸನ್ಮಾಣ ಕಾರ್ಯಕ್ರಮ ನಡೆಯಲಿದೆ. ಧಾರ್ಮಿಕ ಕ್ಷೇತ್ರದ ಸಾಧಕ ರಾಧಾಕೃಷ್ಣ ರೈ ಕುರಿಯ ಏಳ್ನಾಡುಗುತ್ತು, ಕೃಷಿ ಪ್ರಶಸ್ತಿ ಪುರಸ್ಕೃತ ದೇರಣ್ಣ ರೈ ಪಾಪನಡ್ಕ, ಕೃಷಿಕ ತಿಮ್ಮಣ್ಣ ರೈ ಆನಾಜೆ, ಹಿರಿಯ ನಾಗರಿಕ ಸಂಜೀವ ರೈ ಕೊಮ್ಮಂಡ, ನಿವೃತ್ತ ಉಪಾಧ್ಯಾಯ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಂಜೀವ ರೈ ಬಾಜುವಲ್ಲಿ, ಧಾರ್ಮಿಕ ಸಂಘಟಕ ವಿಠಲ ರೈ ಬಾಲ್ಯೊಟ್ಟುಗುತ್ತು, ಯಕ್ಷಗಾನ ಕಲಾವಿದ ರಾಮಯ್ಯ ರೈ ಕಕ್ಕೂರು, ಸಹಕಾರಿ ಕ್ಷೇತ್ರದ ಸಾಧಕ ರಂಗನಾಥ ರೈ ಗುತ್ತು, ಸಾಮಾಜಿಕ ಸೇವೆ ಸದಾಶಿವ ರೈ ಸೂರಂಬೈಲುರವರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ.ಸಭಾ ಕಾರ್ಯಕ್ರಮದ ಬಳಿಕ ಸಹಭೋಜನ ನಡೆಯಲಿದೆ. ಬಂಟರ ಸಂಘದ ಸರ್ವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಬಂಟರ ಸಂಘದ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟು, ಪ್ರಧಾನ ಕಾರ್ಯದರ್ಶಿ ಪಿಜಿನಡ್ಕಗುತ್ತು ರಮೇಶ್ ರೈ ಡಿಂಬ್ರಿ, ಕೋಶಾಧಿಕಾರಿ ಕೃಷ್ಣಪ್ರಸಾದ್ ಆಳ್ವ ಉಪ್ಪಳಿಗೆ ಮತ್ತು ಉಪಾಧ್ಯಕ್ಷರುಗಳು, ಕಾರ್ಯಕಾರಿ ಸಮಿತಿಯ ಸರ್ವ ಸದಸ್ಯರುಗಳು ಬಂಟರ ಸಂಘ ಪುತ್ತೂರು ತಾಲೂಕು ಹಾಗೂ ಪಾಣಾಜೆ ವಲಯದ ಪ್ರಕಟಣೆ ತಿಳಿಸಿದೆ.

ಸುದ್ದಿ ಲೈವ್ ವೀಕ್ಷಿಸಿ
ಕಾರ್ಯಕ್ರಮದ ನೇರ ಪ್ರಸಾರವು ಪುತ್ತೂರು ಸುದ್ದಿ ಯೂಟ್ಯೂಬ್ ಚಾನೆಲ್ ಮತ್ತು ಫೇಸ್‌ಬುಕ್ ಪೇಜ್‌ನಲ್ಲಿ ಪ್ರಸಾರವಾಗಲಿದೆ. ಸಾರ್ವಜನಿಕರು ವೀಕ್ಷಿಸಬಹುದಾಗಿದೆ.

LEAVE A REPLY

Please enter your comment!
Please enter your name here