ಪುತ್ತೂರು: ಮಾಯಿದೆ ದೇವುಸ್ ಚರ್ಚ್ ಸಮೂಹ ಶಿಕ್ಷಣ ಸಂಸ್ಥೆಯಲ್ಲೊಂದಾದ ಸಂತ ಫಿಲೋಮಿನಾ ಕಾಲೇಜಿನ ದೈಹಿಕ ಶಿಕ್ಷಣ ವಿಭಾಗದ ಆಶ್ರಯದಲ್ಲಿ ಕಾಲೇಜಿನ ಕ್ರೀಡಾಪಟುಗಳಿಗಾಗಿ `ಸಂತ ಫಿಲೋಮಿನಾ ಪ್ರೀಮಿಯರ್ ಲೀಗ್(ಎಸ್‌ಪಿಎಲ್) ಸೀಸನ್-೨’ ಓವರ್‌ಆರ್ಮ್ ಕ್ರಿಕೆಟ್ ಪಂದ್ಯಾಟವು ಕಾಲೇಜಿನ ಕ್ರೀಡಾಂಗಣದಲ್ಲಿ ಮಾ.12ರಂದು ಜರಗಲಿದೆ.
ಕೂಟದಲ್ಲಿ ಫಿಲೋ ಹಾಕ್ಸ್, ಮಾಸ್ಟರ್ ಕ್ರಿಕೆಟರ್‍ಸ್, ಎಕ್ಸ್ 69, ಫಿಲೋ ಮ್ಯಾಡ್ ಡೆವಿಲ್ಸ್, ಟೀಮ್ ಡಿಎಂಎಕ್ಸ್, ಜನಪ್ರಿಯನ್ಸ್, ಟೀಮ್ ಮೆವರಿಕ್ಸ್ ಹೀಗೆ ಎಂಟು ತಂಡಗಳು ಕಣದಲ್ಲಿದ್ದು, ತಂಡಗಳನ್ನು `ಎ’ ಹಾಗೂ `ಬಿ’ ಎಂಬಂತೆ ಎರಡು ಗುಂಪುಗಳಲ್ಲಿ ನಾಲ್ಕು ತಂಡಗಳಂತೆ ಹಂಚಿಕೆ ಮಾಡಲಾಗಿದೆ. ಪಂದ್ಯಾಟಗಳು ಫಿಲೋಮಿನಾ ಕ್ರೀಡಾಂಗಣದಲ್ಲಿನ ಎರಡು ಅಂಕಣಗಳಲ್ಲಿ ಏಕಕಾಲದಲ್ಲಿ ನಡೆಯಲಿದ್ದು, ಪಂದ್ಯಾಟಗಳು ಲೀಗ್ ಮಾದರಿಯಲ್ಲಿ ನಡೆಯಲಿದೆ. ಒಟ್ಟು 108 ಆಟಗಾರರು ತಮ್ಮ ಹೆಸರನ್ನು ನೋಂದಾಯಿಸಿದ್ದು, ತಂಡಗಳಿಗೆ ಆಟಗಾರರನ್ನು ಬಿಡ್ಡಿಂಗ್ ಪ್ರಕ್ರಿಯೆ ಮೂಲಕ ಆಯ್ಕೆ ಮಾಡಲಾಗಿತ್ತು. ಜೊತೆಗೆ ವಿವಿಧ ಕಲರ್‌ಗಳನ್ನೊಳಗೊಂಡ ಆಯಾ ತಂಡಗಳ ಜೆರ್ಸಿಯನ್ನು ಅನಾವರಣಗೊಳಿಸಲಾಗಿದೆ. ಆಯಾ ತಂಡಗಳಲ್ಲಿ ತಂಡದ ಮಾಲಕರು, ಮ್ಯಾನೇಜರ್, ಮೆಂಟರ್, ಕೋಚ್, ಫಿಸಿಯೋ ಜೊತೆಗೆ ತಲಾ ಓರ್ವನಂತೆ ಐಕಾನ್ ಆಟಗಾರ ಹೊಂದಿರುತ್ತಾರೆ. ಲೀಗ್ ಹಂತದ ಬಳಿಕ ಐಪಿಎಲ್ ನಿಯಮದಂತೆ ಕ್ವಾಲಿಫೈಯರ್ ಹಾಗೂ ಎಲಿಮಿನೇಟರ್ ಪಂದ್ಯಗಳು ನಡೆಯಲಿವೆ.
ಬೆಳಿಗ್ಗೆ ನಡೆಯುವ ಉದ್ಘಾಟನಾ ಸಮಾರಂಭದಲ್ಲಿ ಕಾಲೇಜಿನ ಪ್ರಾಂಶುಪಾಲ ವಂ|ಡಾ|ಆಂಟನಿ ಪ್ರಕಾಶ್ ಮೊಂತೇರೋರವರು ಅಧ್ಯಕ್ಷತೆಯನ್ನು ವಹಿಸಲಿದ್ದು, ಉದ್ಘಾಟಕರಾಗಿ ಕಾಲೇಜಿನ ಹಿರಿಯ ವಿದ್ಯಾರ್ಥಿ ಹಾಗೂ ಸೋಜಾ ಮೆಟಲ್ ಮಾರ್ಟ್‌ನ ಮಾಲಕ ದೀಪಕ್ ಮಿನೇಜಸ್‌ರವರು ಭಾಗವಹಿಸಲಿದ್ದಾರೆ. ಗೌರವ ಅತಿಥಿಗಳಾಗಿ ಕಾಲೇಜಿನ ಕ್ಯಾಂಪಸ್ ನಿರ್ದೇಶಕ ವಂ|ಸ್ಟ್ಯಾನಿ ಪಿಂಟೋ ಹಾಗೂ ಸಿಝ್ಲರ್ ಸಾಮೆತ್ತಡ್ಕ ಇದರ ಮಾಲಕ ಪ್ರಸನ್ನ ಶೆಟ್ಟಿರವರು ಉಪಸ್ಥಿತಲಿರುವರು. ಸಂಜೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಗೌರವ ಅತಿಥಿಗಳಾಗಿ ಕಾಲೇಜಿನ ಹಿರಿಯ ವಿದ್ಯಾರ್ಥಿ ಹಾಗೂ ಹಿರಿಯ ಕ್ರೀಡಾಪಟು ನವನೀತ್ ಬಜಾಜ್ ಹಾಗೂ ಮಾಯಿದೆ ದೇವುಸ್ ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ಮೌರಿಸ್ ಮಸ್ಕರೇನ್ಹಸ್‌ರವರು ಭಾಗವಹಿಸಲಿದ್ದಾರೆ ಎಂದು ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಎಲ್ಯಾಸ್ ಪಿಂಟೋ, ವಿದ್ಯಾರ್ಥಿ ಸಂಘದ ಅಧ್ಯಕ್ಷ ಅಮಿತ್ ಎಸ್.ಆರಾನ್ಹಾ, ಕಾರ್ಯದರ್ಶಿ ಪ್ರಖ್ಯಾತ್ ಟಿ.ಜೆ, ಜೊತೆ ಕಾರ್ಯದರ್ಶಿ ಮಹಾಲಸಾ ಪೈರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತಂಡಗಳು..
–ಫಿಲೋ ಹಾಕ್ಸ್(ಮಾಲಕ:ಸಿಂಬ)
-ಮಾಸ್ಟರ್ ಕ್ರಿಕೆಟರ್‍ಸ್(ಮಾಲಕ:ದೀಕ್ಷಿತ್ ಕುಮಾರ್)
-ಎಕ್ಸ್ 69(ಮಾಲಕ:ಅಲ್‌ಸ್ಟನ್)
-ಫಿಲೋ ಮ್ಯಾಡ್ ಡೆವಿಲ್ಸ್(ಮಾಲಕ:ನಿಹಾಲ್ ಶೇಖ್)
-ಟೀಮ್ ಡಿಎಂಎಕ್ಸ್(ಮಾಲಕ:ಅಶ್ರಫ್)
-ಜನಪ್ರಿಯನ್ಸ್(ಮಾಲಕ:ಪ್ರಣಾಮ್)
-ಟೀಮ್ ಮೆವರಿಕ್ಸ್(ಮಾಲಕ:ಶೈನ್)