ಭಾರತ್ ಒನ್ ಸೌಹಾರ್ದ ಸಹಕಾರಿ ಉದ್ಘಾಟನೆ

0

  • ಜನರ ಸಹಕಾರಕ್ಕಾಗಿಯೇ ಸಹಕಾರಿ ಸಂಸ್ಥೆ- ಸೀತಾರಾಮ ರೈ

 


ಪುತ್ತೂರು:    ಜನರು, ಜನರಿಂದ, ಜನರಿಗಾಗಿ ಮಾಡತಕ್ಕಂತಹ ಸಂಘ-ಸಂಸ್ಥೆಯೇ , ಸಹಕಾರಿ ಸಂಸ್ಥೆಯೆಂದು ಸಹಕಾರಿ ಧುರೀಣ ,ಸವಣೂರು ಸೀತಾರಾಮ ರೈ ಹೇಳಿದರು. ಎಪಿಎಂಸಿ ರಸ್ತೆ ,ಅಕ್ಷಯ ಕಾಂಪ್ಲೆಕ್ಸ್ ಇಲ್ಲಿ ಪ್ರಾರಂಭಗೊಂಡ ,ಭಾರತ್ ಒನ್ ಸೌಹಾರ್ದ ಸಹಕಾರಿ ಇದರ ಉದ್ಘಾಟನೆ ಯನ್ನು ನೆರವೇರಿಸಿ ಮಾತನಾಡಿ, ಜನತೆಯಿಂದ ಠೇವಣಿ ತೆಗೆದು, ಸಾಲ ನೀಡೋ ವ್ಯವಸ್ಥೆ ಮಾಡಿಕೊಂಡು, ತದನಂತರ ವಸೂಲಿ ಮಾಡಿ ಠೇವಣಿದಾರರಿಗೆ ಬಡ್ಡಿ ಸಮೇತ ವಾಪಸ್ಸು ಕೊಡೋ ವ್ಯವಸ್ಥೆ ಜೊತೆಗೆ ಸಮಾಜಮುಖಿ ಕಾರ್ಯದಲ್ಲೂ ಪಾಲ್ಗೊಂಡು ಸೇವೆ ನೀಡುವಂತಗಲಿ. ಇನ್ನೂ ಸಿಬ್ಬಂದಿಗಳ ಹಾಗೂ ಆಡಳಿತ ಮಂಡಳಿಯಾ ಪ್ರಾಮಾಣಿಕತೆ , ಶ್ರದ್ಧೆ ,ಭಕ್ತಿ ಪೂರ್ವಕ ಶ್ರಮದಿಂದಲ್ಲೇ ಅಭಿವೃದ್ಧಿಯೆಂದು ಹಾರೈಸಿದರು.ಸ್ಥಾಪಕಾಧ್ಯಕ್ಷ ಗಿರೀಶ್ ರೈ ಯವರ ಮಾತೃ ಶ್ರೀ ವಾಸಮ್ಮ ಆರ್ ರೈ ಹಾಗೂ ಆನಂದಾಶ್ರಮ ಇದರ ಸ್ಥಾಪಾಕಾಧ್ಯಕ್ಷೆ ,ಡಾ.ಪಿ.ಗೌರಿ ಪೈ ದೀಪ ಪ್ರಜ್ವಲನೆ ನೆರವೇರಿಸೋ ಮೂಲಕ ನೂತನ ಸಂಸ್ಥೆ ಯಾ ಶ್ರೇಯೋಭಿವೃದ್ದಿಗೆ ಹರಸಿ ,ಅಭಿನಂದಿಸಿರು.

ರಾಜ್ಯ ಕಾನೂನು ಸೇವಾ ಪ್ರಾಧಿಕಾರ ಇದರ ಮಾಜಿ ಸದಸ್ಯ ,ಮಹೇಶ್ ಕಜೆ ಭದ್ರತಾ ಕೊಠಡಿಯನ್ನು ಉದ್ಘಾಟಿಸೋ ಮೂಲಕ ಮಾತನಾಡಿ , ‘ನಾನು ನಿನಗೆ ,ನೀನು ನನಗೆ ‘ಬದುಕು ಎಷ್ಟು ಸುಂದರ ..? ಸಹಕಾರದ ಮೂಲತತ್ವವೂ ಇದೆ ಆಗಿಹುದು. ಭಾರತ ಒನ್ ಹೆಸರು ಆಕರ್ಷಣೀಯವಾಗಿದೆ. ಭಾರತ ದೇಶವೂ ಎಷ್ಟೇ ದಾಳಿಗೆ ಒಳಗಾದರು , ಇಂದಿಗೂ ಭಾರತ ವಿಶ್ವಕ್ಕೆ ಗುರು. ಹಾಗೇನೆ ಈ ಸಂಸ್ಥಯೂ ಕೂಡ ಇತರ ಸಹಕಾರಿ ಸಂಸ್ಥೆಗಳಿಗೆ ಗುರುವಾಗಿ ನಿಲ್ಲಲಿ. ಸಹಕಾರಿ ಸಿದ್ಧಾಂತ ಮೀರಿ ಯಾವುದೇ ಒಪ್ಪಂದ ಮಾಡಿದರೂ , ಅಬಿವೃದ್ದಿ ಹಳ್ಳ ಹಿಡಿದಂತೆ ಎಂದು ಹೇಳಿ ಹರಸಿದರು.

ಸಹಕಾರಿ ಲೆಕ್ಕಪರಿಶೋಧನೆಯ ಸಹಾಯಕ ನಿರ್ದೇಶಕ ,ಬಾಲಸುಬ್ರಹ್ಮಣ್ಯ ಕೆ.ಎಸ್ ಮಾತನಾಡಿ, ಬ್ಯಾಂಕಿಂಗ್ ಎಂದರೆ ಅಕ್ಸೆಪ್ಟಿಂಗ್ ಡಿಪಾಸಿಟ್ ಆ್ಯಂಡ್ ಲೆಂಡಿಂಗ್ ಮನಿ. ಇದರ ಪೂರ್ಣ ಆಧಾರದ ಮೇಲೆನೇ ಸಂಸ್ಥೆ ಯೂ ಗಟ್ಟಿಯಾಗಿ ನಿಂತಿದೆಯೆಂದರು. ಸ್ಥಾಪಕಧ್ಯಕ್ಷರಾದ ಗಿರೀಶ್ ರೈ ಅಲೆಕ್ಕಾಡಿ ,ಮಾತನಾಡಿ

ಸಹಕಾರಿ ಕ್ಷೇತ್ರ ಹಣ ಮಾಡುವ ಕ್ಷೇತ್ರವಾಗಿರದೆ , ಸಮಾಜ ಸೇವೆ ಮಾಡೋ ಕ್ಷೇತ್ರಯೆಂಬುದು ನನ್ನ ಅನಿಸಿಕೆ. ಹಳ್ಳಿಗರಲ್ಲಿ ಉಳಿತಾಯ ಮನೋಭಾವನೆಯನ್ನು ಉಳಿಸಿ , ಬೆಳೆಸೋ ಮೂಲಕ ಜಾಗೃತಿ ಮೂಡಿಸುವುದು.ಈ ಭೂಮಿ ಪ್ರವಾಸಿ ತಾಣದ ತರಹ.ಪ್ಯಾಕೇಜ್ ದೊಡ್ಡದು ಅಥವಾ ಸಣ್ಣದಿರ ಬಹುದು ಆದರೆ ,ಸಮಯ ಬಂದಾಗ ಸರಿಯಲೇ ಬೇಕು.ಒಳ್ಳೇಯ ಕೆಲಸ ಮಾತ್ರ ಇಲ್ಲಿ ಶಾಶ್ವತವಾಗಿ ಉಳಿಯಲು ಸಾಧ್ಯವೆಂದು ಹೇಳಿ ಎಲ್ಲರ ಸಹಕಾರ ಯಾಚಿಸಿದರು.ಎಲ್ಲಾ ಅತಿಥಿಗಳನ್ನೂ ಸಹಕಾರಿ ಸಂಘದ ಪರವಾಗಿ ಗೌರವಿದಲಾಯಿತು.

ಸಹಕಾರಿಯ ಎಲ್ಲಾ ನಿರ್ದೆಶಕರೂ, ಸಿಬ್ಬಂದಿ ಗಳು ಹಾಗೂ ಗ್ರಾಹಕರು ಇದ್ದರು. ಶಿವಶಂಕರಿ ರೈ ಪ್ರಾರ್ಥನೆ ನೆರವೇರಿಸಿ ,ವ್ಯವಸ್ಥಾಪಕ ಸಂದೀಪ್ ಪರಿಚಯಿಸಿ, ಉಪಾಧ್ಯಕ್ಷೆ ವಿವೇತ ನಿರೂಪಿಸಿ, ಉಪ ವ್ಯವಸ್ಥಾಪಕಿ ಸ್ವಾತಿ ವಂದಿಸಿದರು.

LEAVE A REPLY

Please enter your comment!
Please enter your name here