













ಕಾಣಿಯೂರು: ಕಾಣಿಯೂರು ಹಾಲು ಉತ್ಪಾದಕರ ಸಹಕಾರ ಸಂಘದ ಅಂತಸ್ತಿನಲ್ಲಿ ಕಟ್ಟಡ ನಿರ್ಮಾಣಕ್ಕೆ ಶಿಲಾನ್ಯಾಸ ಕಾರ್ಯಕ್ರಮವು ಮಾ 22ರಂದು ನಡೆಯಿತು. ಸಂಘದ ನಿರ್ದೇಶಕರು, ಅರ್ಚಕರಾದ ಅನಂತರಾಮ ಉಪಾಧ್ಯಾಯ ತುಂಬ್ಯ ವಿವಿಧ ಪೂಜಾ ವಿಧಾನಗಳನ್ನು ನೆರವೇರಿಸಿದರು. ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ರಾಮಣ್ಣ ಗೌಡ ಮೂಡೈಮಜಲು, ಉಪಾಧ್ಯಕ್ಷರಾದ ರಾಜೇಶ್ ಮುಂಡಾಳ, ನಿರ್ದೇಶಕರಾದ ಚಂದ್ರಯ್ಯ ಆಚಾರ್ಯ ಅಬೀರ, ರಾಮಣ್ಣ ಗೌಡ ಮುಗರಂಜ, ಮಾಯಿಲಪ್ಪ ಪೂಜಾರಿ ಬೇಂಗಡ್ಕ, ಸೌಮ್ಯ ಪಿ.ಪೈಕ, ಹೇಮಾವತಿ ಎಂ.ಎಲ್.ಮುಗರಂಜ, ಸಂಘದ ಕಾರ್ಯನಿರ್ವಹಣಾಧಿಕಾರಿ ಜಗದೀಶ ಗೌಡ, ಗುತ್ತಿಗೆದಾರರಾದ ಚಿಂತನ್, ಸದಸ್ಯರಾದ ಹರೀಶ್ ಪೈಕ, ಸಹಾಯಕರಾದ ಚಂದ್ರಶೇಖರ ಗೌಡ ಬೈತಡ್ಕ, ಪುಷ್ಪಾ, ಮನೋರಮಾ, ಸೀತಾರಾಮ ಅನಿಲ ಉಪಸ್ಥಿತರಿದ್ದರು.







