ರಸ್ತೆಯಲ್ಲಿ ಬಿದ್ದಿದ್ದ ಜಲ್ಲಿ ತೆರವು – ನೇತ್ರಾವತಿ ರಿಕ್ಷಾ ಚಾಲಕರ ಸಂಘದಿಂದ ಮಾನವೀಯ ಕಾರ್ಯ

0


ಉಪ್ಪಿನಂಗಡಿ: ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದು ದ್ವಿಚಕ್ರ ವಾಹನಗಳ ಅಪಘಾತಕ್ಕೆ ಕಾರಣವಾಗುತ್ತಿದ್ದ ಜಲ್ಲಿಯನ್ನು ಉಪ್ಪಿನಂಗಡಿಯ ನೇತ್ರಾವತಿ ಅಟೋ ರಿಕ್ಷಾ ಚಾಲಕ- ಮಾಲಕರ ಸಂಘದ ಸದಸ್ಯರು ತೆರವುಗೊಳಿಸಿದ್ದಾರೆ.

 


ಉಪ್ಪಿನಂಗಡಿ- ಗುರುವಾಯನಕೆರೆ ಹೆದ್ದಾರಿಯ ಪೆದಮಲೆ ತಿರುವಿನಲ್ಲಿ ಸುಮಾರು ೫ ಬಟ್ಟಿಯಷ್ಟು ಜಲ್ಲಿ ಚೆಲ್ಲಾಪಿಲ್ಲಿಯಾಗಿ ರಸ್ತೆಯಲ್ಲಿ ಹರಡಿಕೊಂಡಿತ್ತು. ಜಲ್ಲಿ ಸಾಗಾಟ ಮಾಡುವ ಸಂದರ್ಭ ಲಾರಿಯಿಂದ ಇದು ಬಿದ್ದಿರಬಹುದಾಗಿದ್ದರೂ, ದ್ವಿಚಕ್ರ ವಾಹನಗಳ ಅಪಘಾತಕ್ಕೆ ಮಾತ್ರ ಇದು ಕಾರಣವಾಗುತ್ತಿತ್ತು. ಇದನ್ನು ಮನಗಂಡ ಉಪ್ಪಿನಂಗಡಿಯ ನೇತ್ರಾವತಿ ಅಟೋ ರಿಕ್ಷಾ ಚಾಲಕ- ಮಾಲಕ ಸಂಘದ ಸದಸ್ಯರು ಜಲ್ಲಿಯನ್ನು ತೆರವುಗೊಳಿಸಿದರು.

ಈ ಮಾನವೀಯ ಕಾರ್ಯದಲ್ಲಿ ಸಂಘದ ಅಧ್ಯಕ್ಷ ನರಸಿಂಹ ಶೆಟ್ಟಿ, ಉಪಾಧ್ಯಕ್ಷರಾದ ಖಲಂದರ್ ಶಾಫಿ, ಕಾರ್ಯದರ್ಶಿ ಫಾರೂಕ್ ಝಿಂದಗಿ, ಜೊತೆ ಕಾರ್ಯದರ್ಶಿ ಅಶೋಕ್ ಬಂಡಾಡಿ, ಸದಸ್ಯರಾದ ಫಾರೂಕ್ ಜೋಗಿಬೆಟ್ಟು, ಮಜೀದ್ ಕುದ್ಲೂರು, ಹಮೀದ್ ಕುಂಡಾಜೆ ಮತ್ತಿತರರು ಭಾಗವಹಿಸಿದರು.

LEAVE A REPLY

Please enter your comment!
Please enter your name here