ರಿಕ್ಷಾ ಡಿಕ್ಕಿ: ದ್ವಿಚಕ್ರ ಸವಾರನಿಗೆ ಗಾಯ

0

ಉಪ್ಪಿನಂಗಡಿ: ರಿಕ್ಷಾವನ್ನು ಏಕಾಏಕಿ ರಸ್ತೆಯ ವಿರುದ್ಧ ದಿಕ್ಕಿಗೆ ತಿರುಗಿಸಿದ್ದರಿಂದ ಎದುರಿನಿಂದ ಬರುತ್ತಿದ್ದ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು ದ್ವಿಚಕ್ರ ವಾಹನ ಸವಾರ ತೀವ್ರ ಗಾಯಗೊಂಡ ಘಟನೆ 34 ನೆಕ್ಕಿಲಾಡಿಯಲ್ಲಿ ಫೆ.1ರಂದು ನಡೆದಿದೆ.


ಉಪ್ಪಿನಂಗಡಿ ಗ್ರಾಮದ ಆರ್ತಿಲ ನಿವಾಸಿ ಶೀನಪ್ಪ ನಾಯ್ಕ (55 ವ.) ಗಾಯಗೊಂಡವರು. ಇವರು ಉಪ್ಪಿನಂಗಡಿಯ ಕ್ಲಿನಿಕ್‌ವೊಂದರಲ್ಲಿ ಕಾಂಪೌಂಡರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ನೆಕ್ಕಿಲಾಡಿಯ ಲ್ಯಾಂಪ್ಸ್ ಸೊಸೈಟಿ ಬಳಿಯ ರಸ್ತೆಯ ಬದಿ ಸರ್ವಿಸ್ ಸ್ಟೇಶನ್‌ವೊಂದಿದ್ದು, ನೆಕ್ಕಿಲಾಡಿಯಿಂದ ಶಾಂತಿನಗರ ಕಡೆಗೆ ಹೋಗುತ್ತಿದ್ದ ರಿಕ್ಷಾವೊಂದನ್ನು ಅದರ ಚಾಲಕ ಏಕಾಏಕಿ ರಸ್ತೆಯ ವಿರುದ್ಧ ದಿಕ್ಕಿನಲ್ಲಿರುವ ಸರ್ವಿಸ್ ಸ್ಟೇಶನ್‌ಗೆ ತಿರುಗಿಸಿದ್ದು, ಆಗ ಶಾಂತಿನಗರ ಕಡೆಯಿಂದ ನೆಕ್ಕಿಲಾಡಿ ಕಡೆಗೆ ಬರುತ್ತಿದ್ದ ದ್ವಿಚಕ್ರ ವಾಹನವು ರಿಕ್ಷಾಕ್ಕೆ ಡಿಕ್ಕಿ ಹೊಡೆದಿದೆ. ಇದರಿಂದ ದ್ವಿಚಕ್ರ ವಾಹನ ಸವಾರ ರಸ್ತೆಗೆಸೆಯಲ್ಪಟ್ಟು ಗಾಯಗೊಂಡಿದ್ದಾರೆ. ಗಾಯಾಳು ಶೀನಪ್ಪ ನಾಯ್ಕರವರನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಪ್ರದೇಶದಲ್ಲಿ ಈ ಹಿಂದೆಯೂ ಇದೇ ರೀತಿ ವಾಹನಗಳನ್ನು ತಿರುಗಿಸಿದ್ದರಿಂದ ಹಲವು ಅಪಘಾತಗಳು ನಡೆದಿವೆ. ಪುತ್ತೂರು ಸಂಚಾರಿ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.

LEAVE A REPLY

Please enter your comment!
Please enter your name here