ರೈತರ ಕೃಷಿ ಜಮೀನು ಅತಿಕ್ರಮಣ ಮಾಡಿದರೆ ಹೋರಾಟ – ರೈತ ಸಂಘ ಎಚ್ಚರಿಕೆ

0

ಪುತ್ತೂರು: ಕಡಬ ತಾಲೂಕಿನ ಸವಣೂರು ವಿಭಾಗದಲ್ಲಿ ಅರಣ್ಯ ಇಲಾಖೆಯವರು ಮತ್ತು ಕೆ.ಸಿ.ಡಿ.ಸಿ ಇಲಾಖೆಯವರು ಜಂಟಿಯಾಗಿ ಸರಕಾರಿ ನಿಯಮ ಉಲ್ಲಂಘಿಸಿ ರೈತರ ಜಮೀನುಗಳನ್ನು ಅತಿಕ್ರಮಿಸಿ, ಕೃಷಿಯನ್ನು ನಾಶ ಮಾಡುತ್ತಿದ್ದಾರೆ. ಇದು ಮುಂದುವರಿದರೆ ರೈತ ಸಂಘದಿಂದ ಉಗ್ರ ಹೋರಾಟ ಮಾಡಲಾಗುವುದು ಎಂದು ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆಯ ಜಿಲ್ಲಾ ಸಂಚಾಲಕ ರೂಪೇಶ್ ರೈ ಅಲಿಮಾರು ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.


ಈಗಾಗಲೇ ಕೆಲವು ಕಡೆಗಳಲ್ಲಿ ಯಾವುದೇ ಪೂರ್ವ ಸೂಚನೆ ನೀಡದೆ ಕೃಷಿಕರು ಮಾಡಿರುವ ಬೆಳೆಗಳನ್ನು ಅಕ್ರಮವಾಗಿ ನಾಶ ಮಾಡಿದ್ದಾರೆ. ಅರಣ್ಯ ಇಲಾಖೆಯವರು ಹಳೆ ದಾಖಲೆಯಲ್ಲಿರುವ ಗುಪ್ಪೆಯ ನಕ್ಷೆಯನ್ನು ಹಿಡಿದು ರೈತರಿಗೆ ತೊಂದರೆ ಕೊಡುತ್ತಿದ್ದಾರೆ. ಆದರೆ ರೈತರ ಹೆಸರಿನಲ್ಲಿ ಹಕ್ಕು ಪತ್ರ, ಆರ್.ಟಿ.ಸಿ ಇದ್ದರೂ ಸರಕಾರಿ ಅಧಿಕಾರಿಗಳು ದರ್ಪ ನೀತಿಯನ್ನು ಅನುಸರಿಸುತ್ತಿದ್ದಾರೆ. ಸರಕಾರಿ ನೀತಿ ನಿಯಮ ಉಲ್ಲಂಘಿಸಿ ಧೋರಣೆ ನಡೆಸುತ್ತಿದ್ದಾರೆ ಎಂದು ಆರೋಪಿಸಿದ ಅವರು ಇವರ ವಿರುದ್ಧ ಉಗ್ರವಾದ ಹೋರಾಟವನ್ನು ಮಾಡಬೇಕಾದಿತು ಎಂದು ತಿಳಿಸಿದರು.

ಜಬರ್‌ದಸ್ತಿನಿಂದ ಸ್ವಾಧೀನ ಪಡಿಸುವ ಹಕ್ಕು ಇಲ್ಲ:

ಆಸ್ತಿಗಳ ಪಹಣಿಯನ್ನು ನೋಡಿದಾಗ ಗೋಮಾಳ ಮತ್ತು ಸರಕಾರಿ ಜಾಗ ಎಂದು ಮಾತ್ರ ಕಂಡು ಬರುತ್ತಿದ್ದು, ಅರಣ್ಯ ಮತ್ತು ಕೆಸಿಡಿಸಿ ಇಲಾಖೆಯವರ ಯಾವುದೇ ಹೆಸರು ಇಲ್ಲ. ಈ ನಿಟ್ಟಿನಲ್ಲಿ ಅವರು ಸರಕಾರಿ ನಿಯಮಗಳಂತೆ ಕೆಲಸ ಮಾಡಿಲ್ಲ. ಅವರಿಗೆ ಜಬರ್‌ದಸ್ತಿನಿಂದ ಸ್ವಾಧೀನ ಮಾಡುವ ಹಕ್ಕು ಕೂಡಾ ಇಲ್ಲ ಎಂದು ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿನೋದ್ ಭಟ್ ಪಾದೆಕಲ್ಲು ಅವರು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಕಾರ್ಯದರ್ಶಿ ಇಬ್ರಾಹಿಂ ಕಲೀಲ್ ಪುಚ್ಚೆತ್ತಡ್ಕ, ಸವಣೂರು ವಲಯ ಅಧ್ಯಕ್ಷ ಯತೀಶ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಭರತ್ ರೈ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here