ಪುತ್ತೂರು: ಕೋಡಿಂಬಾಡಿಯ ಅಶ್ವತ್ಥಕಟ್ಟೆಯ ವಠಾರದಲ್ಲಿ ಫೆ.4ರಂದು ಸಂಜೆ 45ನೇ ವರ್ಷದ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ನಡೆಯಲಿದೆ.
ಕೋಡಿಂಬಾಡಿಯ ಅಶ್ವತ್ಥಕಟ್ಟೆ ಧರ್ಮಶ್ರೀ ಭಜನಾ ಮಂದಿರದ ವತಿಯಿಂದ ಜ.7ರಿಂದ 16ನೇ ವರ್ಷದ ನಗರ ಭಜನೋತ್ಸವ (ಮನೆ ಮನೆ ಭಜನೆ) ನಡೆಯುತ್ತಿದೆ.
ಜ.7ರಂದು ಭಜನಾ ಮಂದಿರಲ್ಲಿ ಮಹಾಗಣಪತಿ ಹೋಮ ನಡೆದು ಸಂಜೆ ಮಂದಿರದಿಂದ ಮನೆ ಮನೆ ಭಜನೆಗೆ ಹೊರಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿತ್ತು. ಬಳಿಕ ಪ್ರತೀ ದಿನ ಗ್ರಾಮದ ಮನೆ ಮನೆಗಳಿಗೆ ತೆರಳಿ ಭಜನೆ ನಡೆಯುತ್ತಿದ್ದು ಫೆ.3ರಂದು ರಾತ್ರಿ ಮನೆ ಮನೆ ಭಜನೆ ಮುಗಿಸಿ ಮಂದಿರಕ್ಕೆ ಆಗಮಿಸುವ ಕಾರ್ಯಕ್ರಮ ನಡೆಯಲಿದೆ.
ಫೆ.4ರಂದು ಮಧ್ಯಾಹ್ನ ಅಶ್ವತ್ಥಕಟ್ಟೆಯಲ್ಲಿ ಸಾರ್ವಜನಿಕ ಶ್ರೀ ಅಶ್ವತ್ಥಪೂಜೆ, ಪ್ರಸಾದ ವಿತರಣೆ, ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ ಏಕಾಹ ಭಜನೆ ಪ್ರಾರಂಭಗೊಳ್ಳಲಿದೆ. ಫೆ.5ರಂದು ಸಂಜೆ ಏಕಾಹ ಭಜನೆಯ ಮಂಗಳೋತ್ಸವ ನಡೆಯಲಿದೆ ಎಂದು ಗೌರವಾಧ್ಯಕ್ಷ ಪ್ರಕಾಶ್ ಕುಮಾರ್ ಜೈನ್ ಮಿತ್ತಳಿಕೆ, ಅಧ್ಯಕ್ಷ ಶೇಖರ ಪೂಜಾರಿ ನಿಡ್ಯ, ಕಾರ್ಯದರ್ಶಿ ದಯಾನಂದ ಗೌಡ ಬೋಳಾಜೆ, ಪ್ರಧಾನ ಅರ್ಚಕ ಅನಂತೇಶ ಮಯ್ಯ ಹಾಗೂ ಅರ್ಚಕ ದೀಪಕ್ ಮಣಿಯಾಣಿ ತಿಳಿಸಿದ್ದಾರೆ.
ಫೆ.4ರಂದು 45ನೇ ವರ್ಷದ ಸತ್ಯನಾರಾಯಣ ಪೂಜೆ:
ಕೋಡಿಂಬಾಡಿ ಅಶ್ವತ್ಥಕಟ್ಟೆ ಸಾರ್ವಜನಿಕ ಶ್ರೀ ಸತ್ಯನಾರಾಯಣ ಸೇವಾ ಸಮಿತಿಯಿಂದ 45ನೇ ವರ್ಷದ ಸಾರ್ವಜನಿಕ ಶ್ರೀ ಸತ್ಯನಾರಾಯಣ(ವ್ರತ)ಪೂಜೆ ಫೆ.4ರಂದು ಅಶ್ವತ್ಥಕಟ್ಟೆಯಲ್ಲಿ ನಡೆಯಲಿದೆ.
ವೇ.ಮೂ. ಶ್ರೀವತ್ಸ ಕೆದಿಲಾಯ ಪೂಜೆ ಕಥಾವಾಚನ ನಡೆಸಿಕೊಡಲಿದ್ದಾರೆ ಎಂದು ಪೂಜಾ ಸಮಿತಿ ಗೌರವಾಧ್ಯಕ್ಷ ಕೇಶವ ಭಂಡಾರಿ ಕೈಪ, ಅಧ್ಯಕ್ಷ ವಾರಿಸೇನ ಜೈನ್ ಕೋಡಿಯಾಡಿ, ಪ್ರಧಾನ ಕಾರ್ಯದರ್ಶಿ ದೇವಾನಂದ ಹಾಗೂ ಅರ್ಚಕ ಬಾಲಕೃಷ್ಣ ಐತಾಳ್ ತಿಳಿಸಿದ್ದಾರೆ.