ಆಲಂಕಾರು: ಬುಡೇರಿಯಾ ಶ್ರೀ ದೇವಿ ಉಳ್ಳಾಲ್ತಿ ಮತ್ತು ಉಳ್ಳಾಕ್ಲು ದೈವಗಳ ಕ್ಷೇತ್ರದಲ್ಲಿ ಧಾರ್ಮಿಕ ಕಾರ್ಯಕ್ರಮ ಹಾಗು ನಡಾವಳಿ ಫೆ 3 ರಿಂದ ಫೆ.5 ರ ತನಕ ಬ್ರಹ್ಮಶ್ರೀ ವೇ| ಮೂ| ತಂತ್ರಿ ಸುಬ್ರಹ್ಮಣ್ಯ ಬಳ್ಳಕ್ಕುರಾಯರ ನೇತೃತ್ವದಲ್ಲಿ ನಡೆಯಲಿದೆ.
ಪ್ರತಿಷ್ಠಾ ವಾರ್ಷಿಕ ದಿನಾಚರಣೆಯ ಅಂಗವಾಗಿ ಶ್ರೀ ದೇವಿ ಉಳ್ಳಾಲ್ತಿ ಮತ್ತು ಉಳ್ಳಾಕ್ಲು ಹಾಗೂ ಪರಿವಾರ ದೈವಗಳಿಗೆ ವಿಶೇಷ ತಂಬಿಲ, ಶನೈಶ್ಚರ ಕಲ್ಪೋಕ್ತ ಪೂಜೆ, ಆಶ್ಲೇಷ ಬಲಿ ಮತ್ತು ರಂಗಪೂಜೆ, ಚಂಡಿಕಾ ಹೋಮ ಹಾಗೂ ಪಜ್ಜಡ್ಕ ಕಲ್ಕುಡ ಕಟ್ಟೆ ಸಮೀಪ ನಡಾವಳಿ ನಡೆಯಲಿದೆ.
ಫೆ 3 ರಂದು ಬೆಳಿಗ್ಗೆ 8:00 ರಿಂದ ಸ್ವಸ್ತಿ ಪುಣ್ಯಾಹವಾಚನ, ಗಣಪತಿಹೋಮ, ನವಗ್ರಹಶಾಂತಿ ಸಹಿತ ಶನಿಶಾಂತಿ ಹೋಮ, ಶನೈಶ್ಚರ ಕಲ್ಪೋಕ್ತ ಪೂಜೆ, ನಾಗ ದೇವರಿಗೆ ನವಕ ಕಲಶಾಭಿಷೇಕ, ನಾಗರಾಜ ಕಲ್ಪೋಕ್ತ ಪೂಜೆ, ದೈವಗಳಿಗೆ ಕಲಶ ಪ್ರಧಾನ ಹೋಮ, ಕಲಶಾಭಿಷೇಕ ನಡೆದು ಶನಿಶಾಂತಿಯ ಪೂರ್ಣಾಹುತಿ, ಶನಿ ಕಲ್ಪೋಕ್ತ ಪೂಜೆಯ ಮಹಾ ಮಂಗಳಾರತಿ, ಶ್ರೀ ದೇವಿ ಉಳ್ಳಾಲ್ತಿ ಮತ್ತು ಉಳ್ಳಾಕ್ಲು ಹಾಗೂ ಪರಿವಾರ ದೈವಗಳಿಗೆ ವಿಶೇಷ ತಂಬಿಲ ಹಾಗೂ ಮಹಾ ಮಂಗಳಾರತಿ ನಂತರ ಪ್ರಸಾದ ವಿತರಣೆ ಮಧ್ಯಾಹ್ನ ಗಾನ ವೈಭವ ಕಾರ್ಯಕ್ರಮ ನಡೆದು, ಪ್ರಸಾದ ವಿತರಣೆಯಾಗಿ ಅನ್ನ ಪ್ರಸಾದ ಭೋಜನ ನಡೆಯಲಿದೆ. ಸಂಜೆ 6:00 ರಿಂದ ರಂಗಪೂಜೆ ಸಂಕಲ್ಪ, ಆಶ್ಲೇಷ ಬಲಿ ರಾತ್ರಿ ಶ್ರೀ ದೇವಿ ಉಳ್ಳಾಲ್ತಿ ಮತ್ತು ಉಳ್ಳಾಕ್ಲು ದೈವಗಳಿಗೆ ರಂಗಪೂಜೆ, ಪ್ರಸಾದ ವಿತರಣೆ, ಅನ್ನ ಪ್ರಸಾದ ಭೋಜನ ನಡೆಯಲಿದೆ.
ಫೆ.4ರಂದು ಬೆಳಿಗ್ಗೆ ಚಂಡಿಕಾ ಹೋಮ, ಮಹಾಪೂಜೆ, ಅನ್ನಪ್ರಸಾದ ಭೋಜನ, ಸಂಜೆ ಶ್ರೀ ಕ್ಷೇತ್ರದಿಂದ ದೈವಗಳ ಭಂಡಾರ ತೆಗೆದು ಸಂಜೆ ಪಜ್ಜಡ್ಕ ಕಲ್ಕುಡ ಕಟ್ಟೆ ಸಮೀಪ ಕ್ಷೇತ್ರದ ದೈವಗಳ ಭಂಡಾರ ಆಗಮನವಾಗಿ ರಾತ್ರಿ ಅನ್ನ ಪ್ರಸಾದ ಭೋಜನ, ಶ್ರೀದೇವಿ ಉಳ್ಳಾಲ್ತಿಯ ನಡಾವಳಿ ನಡೆದು , ಕಲ್ಲುರ್ಟಿ, ಪಂಜುರ್ಲಿ, ಅಣ್ಣಪ್ಪ ದೈವಗಳಿಗೆ ನಡಾವಳಿ ನಡೆಯಲಿದೆ.
ಫೆ.5ರಂದು ಪ್ರಾತ:ಕಾಲದಲ್ಲಿ ಶ್ರೀ ಉಳ್ಳಾಕ್ಲು ನಡಾವಳಿ, ರುದ್ರಚಾಮುಂಡಿ, ದಂಡನಾಯಕ ಕಲ್ಕುಡ, ಗುಳಿಗ ದೈವಗಳಿಗೆ ನಡಾವಳಿ, ಮಧ್ಯಾಹ್ನ ಅನ್ನಪ್ರಸಾದ ಭೋಜನ ನಡೆಯಲಿದೆ ಎಂದು ಅಡಳಿತ ಪ್ರಮುಖರಾದ ಈಶ್ವರ ಗೌಡ ಪಜ್ಜಡ್ಕ, ಸಂಕಪ್ಪ ಗೌಡ ಗೌಡತ್ತಿಗೆ, ಸೂರಪ್ಪ ಪೂಜಾರಿ ಹೊಸಮಜಲು, ಅರ್ಚಕರಾದ ಅನಂತರಾಮ ಭಟ್ ತೋಟಂತಿಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.