ಎಸ್.ಜಿ.ಕೃಷ್ಣರವರ ಕೃತಿ ವಿಶ್ಲೇಷಣೆ, ಸಂವಾದ

0

ಪುತ್ತೂರು: ನಿವೃತ್ತ ಶಿಕ್ಷಣಾಧಿಕಾರಿ ಎಸ್.ಜಿ.ಕೃಷ್ಣರವರು ಬರೆದ MINORITIES AND EDUCATIONAL RIGHTS ಪುಸ್ತಕದ ವಿಷಯ ವಿಶ್ಲೇಷಣೆ ಮತ್ತು ಸಂವಾದ ಕಾರ್ಯಕ್ರಮ ಪೆರ್ಲಂಪಾಡಿ ಲೋಕವಿಕಾಸ ಪ್ರತಿಷ್ಠಾನದ ಪ್ರಾಯೋಜಕತ್ವದಲ್ಲಿ ದರ್ಬೆಯಲ್ಲಿರುವ ಕೃಷ್ಣ ಆರ್ಕೆಡ್‌ನಲ್ಲಿ ನಡೆಯಿತು. ಎಸ್.ಜಿ.ಕೃಷ್ಣರ ಕೃತಿಯನ್ನು ಆಳವಾಗಿ ಅಭ್ಯಸಿಸಿದ ಶಿವರಾಮ ಅಮಳ ಮಾತನಾಡಿ ಭಾರತೀಯ ಸಂವಿಧಾನ ಎಲ್ಲಾ ನಾಗರಿಕರಿಗೆ ನೀಡಲಾಗಿರುವ ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಹಕ್ಕು ವಿಧಿ 29 ಮತ್ತು 30ರ ಬಗ್ಗೆ ವಿವರಿಸಿದರು. ನ್ಯಾಯಾಂಗ ಪರಿಣತರ ತಪ್ಪು ವ್ಯಾಖ್ಯಾನ ಸಂವಿಧಾನದ ಆಶಯದ ದಿಕ್ಕನ್ನೇ ತಪ್ಪಿಸಿಬಿಟ್ಟಿದೆ. ಕಳೆದ 20 ವರ್ಷಗಳಿಂದ ಸರಣಿ ಕೃತಿಗಳ ಮೂಲಕ ತಪ್ಪನ್ನು ತೋರಿಸಿ ಸರಿಯಾದ ಅರ್ಥವನ್ನು ಪ್ರತಿಪಾದಿಸಿದ್ದನ್ನು ತಿಳಿಸಿದರು. ಮೈನಾರಿಟಿ ಎಂದರೆ ಅಲ್ಪಸಂಖ್ಯಾತ ಎಂಬ ಒಂದೇ ಅರ್ಥವನ್ನು ಗ್ರಹಿಸಿ ಮಾಡುವ ವ್ಯಾಖ್ಯಾನವು ಸಂವಿಧಾನ ವಿಧಿಯ ಮೂಲ ಆಶಯಕ್ಕೆ ಧಕ್ಕೆ ಉಂಟುಮಾಡುತ್ತದೆ. ಬದಲಿಗೆ ಮೈನಾರಿಟಿ ಎಂದರೆ ಅಲ್ಪಭಾಗ ಎಂಬ ಅರ್ಥವನ್ನು ಅನ್ವಯಿಸಿ ವಿಧಿಗಳಲ್ಲಿರುವ ಪದಪುಂಜಗಳನ್ನು ಸರಿಯಾಗಿ ವ್ಯಾಖ್ಯಾನಿಸಿದಲ್ಲಿ ಮಾತ್ರ ಸಂವಿಧಾನದ ಮೂಲ ಆಶಯಕ್ಕೆ ಸಂಪೂರ್ಣ ನ್ಯಾಯ ಒದಗಿಸಿದಂತಾಗುತ್ತದೆ ಎಂದು ಹೇಳಿದರು. ಬಳಿಕ ಸಂವಾದ ಕಾರ್ಯಕ್ರಮ ನಡೆಯಿತು.

ಅಧ್ಯಕ್ಷತೆ ವಹಿಸಿದ್ದ ಕೆ.ಜಯರಾಜ ಆಚಾರ್ ಮಾತನಾಡಿ ಸಾಮಾನ್ಯ ಜನರಿಗೆ ಈ ವಿಷಯ ಕಬ್ಬಿಣದ ಕಡಲೆಯಾಗಿದೆ. ಇಂತಹ ಕಾರ್ಯಕ್ರಮಗಳ ಮೂಲಕ ಕೆಲವರಿಗಾದರೂ ಸತ್ಯದ ಅರಿವಾದರೆ ದೇಶದ ಅಭಿವೃದ್ಧಿ ಉಜ್ವಲವಾಗುತ್ತದೆ ಎಂದರು. ಕೃತಿಕಾರ ಎಸ್.ಜಿ.ಕೃಷ್ಣರವರು ಸಂವಾದದಲ್ಲಿ ಉತ್ತರ ನೀಡಿದರು. ಪ್ರತಿಷ್ಠಾನದ ಉಪಾದ್ಯಕ್ಷ ಡಾ.ಎಲ್.ಕೃಷ್ಣಪ್ರಸಾದ್ ವಂದಿಸಿದರು.

LEAVE A REPLY

Please enter your comment!
Please enter your name here