ಭ್ರಷ್ಟಾಚಾರ ವ್ಯವಸ್ಥೆ ಇರಬಾರದು, ಎಲ್ಲರಿಗೂ ಕಾಲಮಿತಿಯಲ್ಲಿ ಸೌಲಭ್ಯ ಸಿಗಬೇಕು – ಅಕ್ರಮ ಸಕ್ರಮ ಮಂಜೂರಾತಿ ಸಭೆಯಲ್ಲಿ ಶಾಸಕ ಸಂಜೀವ ಮಠಂದೂರು

0

ಪುತ್ತೂರು: ನೇರವಾಗಿ ಫಲಾನುಭವಿಗೆ ಸರಕಾರದಿಂದ ಸೌಲಭ್ಯ ಮುಟ್ಟಬೇಕೆಂಬ ನಿಟ್ಟಿನಲ್ಲಿ ಹಲವು ಯೋಜನೆ ಹಾಕಿಕೊಳ್ಳಲಾಗಿದೆ. ಇಲ್ಲಿ ಭ್ರಷ್ಟಾಚಾರ ವ್ಯವಸ್ಥೆ ಇರಬಾರದು, ಎಲ್ಲರಿಗೂ ಕಾಲಮಿತಿಯಲ್ಲಿ ಸೌಲಭ್ಯ ಸಿಗಬೇಕು. ತಮಗೇನಾದರೂ ಸಮಸ್ಯೆಗಳಿದ್ದರೆ, ಇಲಾಖೆಯಿಂದ ಸಮಸ್ಯೆಗಳಾದರೆ ನೇರವಾಗಿ ತಿಳಿಸಿ ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.

ಪುತ್ತೂರು ಪುರಭವನದಲ್ಲಿ ಫೆ. 3ರಂದು ನಡೆದ ಅಕ್ರಮ ಸಕ್ರಮ ಮಂಜೂರಾತಿ ಸಭೆಯಲ್ಲಿ ಅವರು ಮಾತನಾಡಿದರು. ಅರ್ಜಿಗಳನ್ನು ಮಾ.30 ರ ತನಕ ವಿಸ್ತರಿಸಲಾಗಿದೆ. ಕೊಟ್ಟವರ ಅರ್ಜಿಗಳನ್ನು ಪರಿಶೀಲನೆ ಮಾಡುತ್ತೇವೆ. ಸರಕಾರಿ ಜಾಗದಲ್ಲಿ ಯಾರ‍್ಯಾರು ಕೂತಿದ್ದಾರೋ ಅವರಿಗೆ ಜಾಗವನ್ನು ಸಕ್ರಮ ಮಾಡುವುದು ಈ ಸಮಿತಿಯ ಉದ್ದೇಶ. ಇಲ್ಲಿ ಭ್ರಷ್ಟಾಚಾರ ವ್ಯವಸ್ಥೆ ಇರಬಾರದು, ಎಲ್ಲರಿಗೂ ಕಾಲಮಿತಿಯಲ್ಕಿ ಸೌಲಭ್ಯ ನೀಡಬೇಕು. ನಾವು ಇಲ್ಲಿ ಕೂತದ್ದೆ ನಿಮಗೆ ನ್ಯಾಯ ಕೊಡಲು ಎಂದರು.

61 ಮಂದಿ ಫಲಾನುಭವಿಗಳಿಗೆ ಹಕ್ಕುಪತ್ರ

ಅಕ್ರಮ ಸಕ್ರಮದಲ್ಲಿ ಮಂಜೂರು ಮಾಡಿ ಫಲಾನುಭವಿಗಳಿಗೆ ಸಾಗುವಳಿ ಚೀಟಿ ನೀಡುವ ಕಾರ್ಯಕ್ರಮ ನಡೆಯಲಿದೆ. 94 ಸಿಯಲ್ಲಿ 43 ಮಂದಿಗೆ, ಉಪ್ಪಿನಂಗಡಿ ಹೋಬಳಿಯಲ್ಲಿ 12 ಮಂದಿಗೆ, ನಗರಸಭೆ ವ್ಯಾಪ್ತಿಯಲ್ಲಿ 6 ಮಂದಿಗೆ, 21 ಮಂದಿಗೆ ಅಕ್ರಮ ಸಕ್ರಮದಲ್ಲಿ ಜಾಗ ಮಂಜೂರು ಮಾಡಲಾಗುವುದು ಎಂದು ಶಾಸಕರು ತಿಳಿಸಿದರು. ಅಕ್ರಮ ಸಕ್ರಮ ಸಮಿತಿ ಕಾರ್ಯದರ್ಶಿ ತಹಸೀಲ್ದಾರ್ ನಿಸರ್ಗಪ್ರಿಯ, ಸದಸ್ಯರಾದ ಪುರುಷೋತ್ತಮ ಮುಂಗ್ಲಿಮನೆ, ಪರಮೇಶ್ವರಿ ಭಟ್ ಬಲ್ನಾಡು, ಅಕ್ಷಯ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here