ಪುತ್ತೂರು ರೋಟರಿ ಕ್ಲಬ್‌ನಿಂದ ಶಾಸಕರೊಂದಿಗೆ ಮುಖಾಮುಖಿ ʼರೋಟರಿ ಜನತಾ ಅದಾಲತ್ʼ-ಫೆ.6ಕ್ಕೆ ಮುಂದೂಡಿಕೆ

0

ಪುತ್ತೂರು: ರೋಟರಿ ಜಿಲ್ಲೆ 3181, ವಲಯ ಐದರ ರೋಟರಿ ಕ್ಲಬ್ ಪುತ್ತೂರು ಇದರ ವತಿಯಿಂದ ಫೆ.4 ರಂದು ಆಯೋಜಿಸಿದ್ದ ಪುತ್ತೂರು ವಿಧಾನಸಭಾ ಸದಸ್ಯರಾದ ಸಂಜೀವ ಮಠಂದೂರುರವರೊಂದಿಗೆ ಮುಖಾಮುಖಿ ಕಾರ್ಯಕ್ರಮ ‘ರೋಟರಿ ಜನತಾ ಅದಾಲತ್’ ಫೆ.6 ರಂದು ಸೋಮವಾರಕ್ಕೆ ಮುಂದೂಡಲಾಗಿದ್ದು, ಕಾರ್ಯಕ್ರಮವು ನಿಗದಿಪಡಿಸಿದಂತೆ ಪುತ್ತೂರು ಜೈನಭವನದಲ್ಲಿ ಸಂಜೆ ಜರಗಲಿದೆ.

ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದ ಅಭಿವೃದ್ಧಿ ಕುರಿತಾದ ಯಾವುದೇ ಪ್ರಶ್ನೆ ಕೇಳಲು ಸಾರ್ವಜನಿಕರಿಗೆ ಮುಕ್ತ ಅವಕಾಶವಿದ್ದು ಪ್ರಶ್ನೆಗಳನ್ನು ತಮ್ಮ ಹೆಸರು ಹಾಗೂ ವಿಳಾಸದೊಂದಿಗೆ ವಾಟ್ಸಪ್ ಸಂಖ್ಯೆ 8660690391 ಅಥವಾ ರೋಟರಿ ಕ್ಲಬ್ ಪುತ್ತೂರು, C/O ರೋಟರಿ ಕ್ಯಾಂಪ್ಕೋ ಬ್ಲಡ್ ಬ್ಯಾಂಕ್, ರಾಧಾಕೃಷ್ಣ ಬಿಲ್ಡಿಂಗ್, ಬಪ್ಪಳಿಗೆ-ಪುತ್ತೂರು ಇಲ್ಲಿ ಕಳುಹಿಸಲು ಕೋರಲಾಗಿದ್ದು ಈಗಾಗಲೇ ಹಲವಾರು ಪ್ರಶ್ನೆಗಳು ಬಂದಿರುತ್ತದೆ ಎಂದು ಆಯೋಜಕರು ಸುದ್ದಿಗೆ ತಿಳಿಸಿದ್ದಾರೆ. ಸಾರ್ವಜನಿಕರು ಬನ್ನಿ ನಾಗರಿಕ ಪ್ರಜ್ಞೆ ಮೆರೆಯೋಣ, ಕ್ಷೇತ್ರದ ಅಭಿವೃದ್ಧಿಯಲ್ಲಿ ಪಾಲ್ಗೊಳ್ಳಲು ಸುವರ್ಣಾವಕಾಶ ಹಾಗೂ ಪ್ರಶ್ನೆ ಕೇಳಲು, ಸಲಹೆ ನೀಡಲು ಅಪೂರ್ವ ಅವಕಾಶವನ್ನು ರೋಟರಿ ಕ್ಲಬ್ ಪುತ್ತೂರು ಸಾರ್ವಜನಿಕರಿಗೆ ಒದಗಿಸಿಕೊಡುತ್ತಿದೆ ಎಂದು ರೋಟರಿ ಕ್ಲಬ್ ಪುತ್ತೂರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here