ಟಿವಿಎಸ್‌ನ ಅತ್ಯಾಧುನಿಕ ತಂತ್ರಜ್ಞಾನದ ಇಲೆಕ್ಟ್ರಿಕ್ ಸ್ಕೂಟರ್ ಮಾರುಕಟ್ಟೆಗೆ- ಏಸ್ ಮೋಟಾರ್‍ಸ್‌ನಲ್ಲಿ ಬುಕ್ಕಿಂಗ್ ಪ್ರಾರಂಭ

0

*ಆಕರ್ಷಕ ವಿನ್ಯಾಸ
* ಅತ್ಯಾಧುನಿಕ ತಂತ್ರಜ್ಞಾನ
* ಸುದೀರ್ಘ ಬಾಳ್ವಿಕೆಯ ಬ್ಯಾಟರಿಗಳು

ಪುತ್ತೂರು:ಪುತ್ತೂರಿನಲ್ಲಿಯೂ ಇಲೆಕ್ಟ್ರಿಕ್ ವಾಹಗಳ ಹವಾ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಪೆಟ್ರೋಲ್ ದ್ವಿಚಕ್ರ ವಾಹನಗಳಿಗಿಂತ ಜನ ಇಲೆಕ್ಟ್ರಿಕ್ ವಾಹನಗಳತ್ತ ಮುಖ ಮಾಡುತ್ತಿದ್ದಾರೆ. ದೇಶದ ಪ್ರಮುಖ ದ್ವಿಚಕ್ರ ವಾಹನ ತಯಾರಿಕಾ ಸಂಸ್ಥೆಯಾಗಿರುವ ಟಿವಿಎಸ್ ಕಂಪನಿಯು ಅತ್ಯಾಧುನಿಕ ತಂತ್ರಜ್ಞಾನ, ಆಕರ್ಷಕ ವಿನ್ಯಾಸದೊಂದಿಗೆ ತಯಾರಿಸಲ್ಪಟ್ಟ ಇಲೆಕ್ಟ್ರಿಕ್ ಸ್ಕೂಟರ್ `ಐ-ಕ್ಯೂಬ್’ ದ್ವಿಚಕ್ರ ವಾಹನವನ್ನು ಬೊಳುವಾರಿನ ಏಸ್ ಮೋಟಾರ್‍ಸ್‌ನಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.


ಮಾರುಕಟ್ಟೆಯಲ್ಲಿರುವ ಇತರ ಇ-ಸ್ಕೂಟರ್‌ಗಳಂತಲ್ಲ ಐ ಕ್ಯೂಬ್. ಇರುವ ಬಹುತೇಕ ಇ-ಸ್ಕೂಟರ್‌ಗಳನ್ನು ನೋಡಿದ ತಕ್ಷಣ, ಅದು ಇ-ಸ್ಕೂಟರ್ ಎಂಬುದು ಗೊತ್ತಾಗುತ್ತದೆ. ಆದರೆ ಐ ಕ್ಯೂಬ್‌ನಲ್ಲಿ ವಿನ್ಯಾಸ ಸಾಮಾನ್ಯ ಸ್ಕೂಟರ್‌ನಂತೆಯೇ ಇದೆ. ನೊಡುವಾಗ ಅದು ಇ-ಸ್ಕೂಟರ್ ಅನ್ನಿಸುವುದೇ ಇಲ್ಲ. ಐ-ಕ್ಯೂಬ್ ಅನ್ನು ಸಾಮಾನ್ಯ ಸ್ಕೂಟರ್‌ನಂತೆಯೇ ವಿನ್ಯಾಸ ಮಾಡಲಾಗಿದೆ. ಮುಂಬದಿಯಲ್ಲಿ ಎಲ್‌ಇಡಿ ಡಿಎಲ್‌ಆರ್, ಎಲ್‌ಇಡಿ ಹೆಡ್‌ಲ್ಯಾಂಪ್ ಮತ್ತು ಎಲ್‌ಇಡಿ ಟರ್ನ್ ಇಂಡಿಕೇಟರ್‌ಗಳನ್ನು ನೀಡಲಾಗಿದೆ. ಇವುಗಳ ವಿನ್ಯಾಸ ಉತ್ತಮವಾಗಿದೆ. ಟೇಲ್ ಲ್ಯಾಂಪ್ ಸಹ ಎಲ್‌ಇಡಿ ಆಗಿದ್ದು, ರಾತ್ರಿ ಚಾಲನೆ ವೇಳೆ ಈ ದೀಪಗಳನ್ನು ಬೆಳಗಿಸಲು ಹೆಚ್ಚು ವಿದ್ಯುತ್ ಅಗತ್ಯವಿಲ್ಲ.

ಶಕ್ತಿದಾಯ ವಾಹನ…!
ಟಿವಿಸ್ ಐ ಕ್ಯೂಬ್‌ನಲ್ಲಿ 4.4 ಕಿ.ವ್ಯಾ.ನ ಹಬ್ ಮೋಟರ್ ನೀಡಲಾಗಿದೆ. ಈ ವಾಹನವು ಚಾಲನೆ ವೇಳೆ ಉತ್ತಮವಾದ ಶಕ್ತಿ ನೀಡುತ್ತದೆ. ಈ ಮೋಟರ್ 4.4 ಕಿ.ವ್ಯಾ. ಶಕ್ತಿ ಉತ್ಪಾದಿಸುವ ಕಾರಣ ಚಾಲನೆ ಸುಲಭವಾಗಿದೆ. ನಿಂತಲ್ಲಿಂದಲೇ ಗರಿಷ್ಠ ಶಕ್ತಿ ಲಭ್ಯವಿರುವ ಕಾರಣ, ದಿಬ್ಬಗಳನ್ನು, ಹಂಪ್‌ಗಳನ್ನು ಹತ್ತಿಸಲು ಹೆಚ್ಚಿನ ಪ್ರಯಾಸ ಬೇಕಿಲ್ಲ. ಈ ಸ್ಕೂಟರ್ 0-40 ಕಿ.ಮೀ. ವೇಗ ಪಡೆದುಕೊಳ್ಳಲು ಕೇವಲ 4.2 ಸೆಕೆಂಡ್ ತೆಗೆದುಕೊಳ್ಳುತ್ತದೆ. ಉತ್ತಮ ಶಕ್ತಿದಾಯಕ ವಾಹನವಾಗಿದ್ದು ನಗರದಲ್ಲಿ ಚಾಲನೆ ವೇಳೆ ಬೇರೆಲ್ಲಾ ದ್ವಿಚಕ್ರ ವಾಹನಗಳಿಗಿಂತ ವೇಗವಾಗಿ ಚಾಲನೆ ಮಾಡಲು ಸಾಧ್ಯವಿದೆ. ಅಲ್ಲದೆ ಡಬ್ಬಲ್ ರೈಡಿಂಗ್‌ನಲ್ಲೂ ವೇಗ ವರ್ಧನೆ ಮತ್ತು ಚಾಲನೆ ಉತ್ತಮವಾಗಿರಲಿದೆ.

ಈ ವಾಹನಕ್ಕೆ ಎಕೊ ಮತ್ತು ಪವರ್ ಮೋಡ್ ನೀಡಲಾಗಿದೆ. ಒಂದು ಬಟನ್ ಮೂಲಕ ಇದನ್ನು ಚಾಲನೆ ವೇಳೆಯಲ್ಲಿಯೇ ಬಳಸಿಕೊಳ್ಳಬಹುದು. ಎಕೋ ಮೋಡ್‌ನಲ್ಲಿ 40 ಕಿ.ಮೀ.ವರೆಗೆ ವೇಗವರ್ಧನೆ ಉತ್ತಮವಾಗಿದೆ. ನಂತರ 43-45 ಕಿ.ಮೀ. ವೇಗವನ್ನು ಮಾತ್ರ ಐ-ಕ್ಯೂಬ್ ಮುಟ್ಟುತ್ತದೆ. ಆದರೆ ಈ ಮೋಡ್‌ನಲ್ಲಿ ಗರಿಷ್ಠ ದೂರ ಚಲಿಸಲು ಸಾಧ್ಯವಿದೆ. ಇನ್ನು ಪವರ್ ಮೋಡ್‌ನಲ್ಲಿ ವೇಗವರ್ಧನೆ ಇನ್ನೂ ಉತ್ತಮವಾಗಿದೆ. ಪವರ್ ಮೋಡ್‌ನಲ್ಲಿ 60 ಕಿ.ಮೀ. ವೇಗದವರೆಗೂ ವೇಗವರ್ಧನೆ ಉತ್ತಮವಾಗಿದೆ. ಈ ಮೋಡ್‌ನಲ್ಲಿ ಗರಿಷ್ಠ 72 ಕಿ.ಮೀ. ವೇಗವನ್ನು ಮುಟ್ಟಬಹುದು. ಚಾಲನೆ ವೇಳೆ ಸದ್ದೇ ಇಲ್ಲದಿರುವುದು ಈ ಮೋಟರ್‌ನ ಮತ್ತೊಂದು ವಿಶೇಷತೆಯಾಗಿದೆ. ಈಗ ಮಾರುಕಟ್ಟೆಯಲ್ಲಿರುವ ಬಹುತೇಕ ಇ-ಸ್ಕೂಟರ್‌ಗಳು ಚಾಲನೆ ವೇಳೆ ವೈನಿಂಗ್ ಸದ್ದು ಮಾಡುತ್ತಿದೆ. ಆದರೆ ಐ-ಕ್ಯೂಬ್ ಹಾಗಲ್ಲ. ಹೀಗಾಗಿ ಐ-ಕ್ಯೂಬ್ ಚಾಲನೆ ವೇಳೆ ಕಿರಿಕಿರಿಯಾಗುವುದಿಲ್ಲ.

ಬ್ಯಾಟರಿ ಮತ್ತು ಚಾರ್ಜಿಂಗ್:
ಐ-ಕ್ಯೂಬ್‌ನಲ್ಲಿ ಲಿ-ಅಯಾನ್ ಬ್ಯಾಟರಿ ಪ್ಯಾಕ್ ಇದೆ. ಒಮ್ಮೆ ಚಾರ್ಜ್ ಮಾಡಿದರೆ, ಸ್ಟಾಂಡರ್ಡ್ ಪರಿಸ್ಥಿತಿಗಳಲ್ಲಿ ಗರಿಷ್ಠ 75 ಕಿ.ಮೀ. ಕ್ರಮಿಸಬಹುದು. ಈ ಬ್ಯಾಟರಿಯು ಶೇ 10ರಷ್ಟರಿಂದ ಶೇ 100ರವರೆಗೆ ಚಾರ್ಜ್ ಆಗಲು 5 ಗಂಟೆ ತೆಗೆದುಕೊಳ್ಳುತ್ತದೆ. ಮನೆಗಳಲ್ಲಿ ಬಳಸುವ ಸಾಮಾನ್ಯ 6ಎ ಪ್ಲಗ್ ಪಾಯಿಂಟ್ ಬಳಸಿಯೂ ಈ ಸ್ಕೂಟರ್‌ಅನ್ನು ಚಾರ್ಜ್ ಮಾಡಬಹುದು. ಆದರೆ ಮನೆಯ ವೈರಿಂಗ್‌ನಲ್ಲಿ ಅರ್ಥಿಂಗ್ ಮಾಡಿರಲೇ ಬೇಕು. ಅರ್ಥಿಂಗ್ ಇಲ್ಲದಿದ್ದರೆ, ಚಾರ್ಜ್ ಆಗುವುದಿಲ್ಲ. ಎಕ್ಸ್‌ಟೆನ್ಷನ್ ಕಾರ್ಡ್ ಬಳಸಿಯೂ ಚಾರ್ಜ್ ಮಾಡಿಕೊಳ್ಳಬಹುದು. ಐ-ಕ್ಯೂಬ್‌ನಲ್ಲಿ ಬ್ರೇಕಿಂಗ್ ರಿಜನರೇಷನ್ ವ್ಯವಸ್ಥೆ ಇದೆ. ಹೀಗಾಗಿ ಚಾಲನೆ ವೇಳೆ ಥ್ರೋಟಲ್ ಇನ್‌ಪುಟ್ ಸ್ಥಗಿತಗೊಳಿಸಿದ ತಕ್ಷಣ, ರಿಜನರೇಷನ್ ಆರಂಭವಾಗುತ್ತದೆ. ಆಗ ಬ್ಯಾಟರಿ ಚಾರ್ಜ್ ಆಗುತ್ತದೆ. ಅಲ್ಲದೆ ರಿಜನರೇಷನ್ ವ್ಯವಸ್ಥೆಯು ಎಂಜಿನ್ ಬ್ರೇಕಿಂಗ್‌ನಂತೆಯೂ ಕೆಲಸ ಮಾಡುತ್ತದೆ. ಇದರಿಂದ ಸ್ಕೂಟರ್‌ನ ನಿಯಂತ್ರಣ ಉತ್ತಮವಾಗಿದೆ.

ಇನ್ನಷ್ಟು ಫ್ಯೂಚರ್‌ಗಳು:
ಟಿವಿಎಸ್ ಐ-ಕ್ಯೂಬ್‌ನ ಗಾತ್ರ, ಎತ್ತರ, ತೂಕ ಮತ್ತು ವ್ಹೀಲ್ ಬೇಸ್ ಸಾಮಾನ್ಯ ಸ್ಕೂಟರ್‌ಗಳಂತೆಯೇ ಇದೆ. ಹೀಗಾಗಿ ಚಾಲನೆ ಮತ್ತು ನಿಯಂತ್ರಣದಲ್ಲಿ ಹೆಚ್ಚು ವ್ಯತ್ಯಾಸವೇನೂ ಇಲ್ಲ. ಒಟ್ಟಾರೆ ಚಾಲನೆ ಉತ್ತಮವಾಗಿದೆ. ಎಲ್‌ಇಡಿ ಡಿಸ್ಪ್ಲೆ ಇದ್ದು, ಸ್ಮಾರ್ಟ್ ಕನೆಕ್ಟ್ ತಂತ್ರಜ್ಞಾನವಿದೆ. ಇದರ ಮೂಲಕ ಸ್ಮಾರ್ಟ್ ಫೋನ್‌ನ್ನು ಸ್ಕೂಟರ್‌ಗೆ ಕನೆಕ್ಟ್ ಮಾಡಿಕೊಳ್ಳಬಹುದು. ಇನ್‌ಬಿಲ್ಟ್ ನ್ಯಾವಿಗೇಷನ್ ಇದೆ. ಹೀಗಾಗಿ ಚಾಲನೆ ವೇಳೆ ದಾರಿ ತಿಳಿಯಲು ನ್ಯಾವಿಗೇಷನ್ ಬಳಸಬೇಕಿಲ್ಲ. ಪಾರ್ಕಿಂಗ್ ಅಸಿಸ್ಟ್ ವ್ಯವಸ್ಥೆ ಇದ್ದು, ಇಕ್ಕಟ್ಟಾದ ಜಾಗಗಳಲ್ಲಿ ಸ್ಕೂಟರ್ ನಿಲ್ಲಿಸಲು ಇದು ನೆರವಾಗುತ್ತದೆ. ಈ ಮೋಡ್‌ನಲ್ಲಿ ಸ್ಕೂಟರ್‌ನ ವೇಗ 2 ಕಿ.ಮೀ. ದಾಟುವುದಿಲ್ಲ. ನಗರದಲ್ಲಿ ಎಲ್ಲೆಲ್ಲಿ ಚಾರ್ಜಿಂಗ್ ಕೇಂದ್ರಗಳಿವೆ ಎಂಬುದನ್ನೂ ಇದು ತೋರಿಸುತ್ತದೆ. ಈ ವಾಹನದ ಎಕ್ಸ್ ಶೋ ರೂಂ ಬೆಲೆ ರೂ.1.18 ಲಕ್ಷವಿದೆ. ಇದು ಈಗ ಮಾರುಕಟ್ಟೆಯಲ್ಲಿರುವ ಪ್ರೀಮಿಯಂ ಇ-ಸ್ಕೂಟರ್‌ಗಳ ಬೆಲೆಯಷ್ಟೆಯೇ ಇದೆ.

ಇಲೆಕ್ಟ್ರಿಕ್ ದ್ವಿಚಕ್ರ ವಾಹನದ ಬುಕ್ಕಿಂಗ್ ಏಸ್ ಮೋಟಾರ್‍ಸ್‌ನಲ್ಲಿ ಪ್ರಾರಂಭಗೊಂಡಿದೆ. ಹೆಚ್ಚಿನ ಮಾಹಿತಿಗಾಗಿ ಬೊಳುವಾರಿನ ಶೋ.ರೂಂ ಅಥವಾ ಮೊಬೈಲ್7760888333 ನಂಬರನ್ನುಸಂಪರ್ಕಿಸುವಂತೆ ಸಂಸ್ಥೆಯ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here