ಪುತ್ತೂರು : ಕೆದಂಬಾಡಿ ಗ್ರಾಮ ದೈವ ಶ್ರೀ ಶಿರಾಡಿ ದೈವಸ್ಥಾನ, ಇದ್ಪಾಡಿ, ಮಂಜಕೊಟ್ಯ- ಮುಂಡಾಳಗುತ್ತು ಇದರ ಪೂರ್ವ ಶಿಷ್ಠ ಸಂಪ್ರದಾಯದಂತೆ ವಾರ್ಷಿಕ ನೇಮೋತ್ಸವ ಫೆ 4 ರಿಂದ 5 ರತನಕ ಇದ್ಪಾಡಿ ಮಂಜಕೊಟ್ಯ ಶ್ರೀ ಶಿರಾಡಿ ದೇವಸ್ಥಾನದಲ್ಲಿ ಜರಗಲಿದೆ.
ಫೆ 4 ರಂದು ಬೆಳಿಗ್ಗೆ ಗಣಹೋಮ, ನಾಗತಂಬಿಲ, ದೈವಗಳ ತಂಬಿಲ, ಪುಳಿಮರಡ್ಕ ಸ್ಥಾನದಲ್ಲಿ ತಂಬಿಲ, ಸಂಜೆ ಕೆದಂಬಾಡಿ ಬೀಡು ಪಟ್ಟದ ಚಾವಡಿಯಿಂದ ಮಾರಿ ದೈವ ಹೊರಡಲಿದೆ, ರಾತ್ರಿ ಕೆಂಚಿರಾಯ ಸೇವೆ ನಡೆಯಲಿದೆ. ಫೆ. 5 ರಂದು ಬೆಳಿಗ್ಗೆ ನಾಗಬ್ರಹ್ಮ ದೈವದ ನೇಮ ಬಳಿಕ ಕೆದಂಬಾಡಿ ಗ್ರಾಮ ದೈವ ಶ್ರೀ ಶಿರಾಡ ದೈವದ ನೇಮೋತ್ಸವ, ಬೂಳ್ಯ ಪ್ರಸಾದ ವಿತರಣೆ ನಡೆಯಲಿದೆ.
ಕಾರ್ಯಕ್ರಮದ ದಿನ ಬೆಳಿಗ್ಗೆ ಮತ್ತು ಸಂಜೆ ಉಪಹಾರ, ಮಧ್ಯಾಹ್ನ ಮತ್ತು ರಾತ್ರಿ ಅನ್ನಸಂತರ್ಪಣೆ ಜರಗಲಿದೆ ಎಂದು ಶ್ರೀ ಶಿರಾಡಿ ದೈವಸ್ಥಾನದ ಟ್ರಸ್ಟ್ ನ ಗೌರವಾಧ್ಯಕ್ಷ ಮುಂಡಾಳಗುತ್ತು ಶಾಂತಾರಾಮ ರೈ, ಅಧ್ಯಕ್ಷ ಸುಧಾಕರ ರೈ ಮುಂಡಾಳಗುತ್ತು ಹಾಗೂ ಪ್ರಧಾನ ಕಾರ್ಯದರ್ಶಿ ಪ್ರಭಾಕರ್ ರೈ ಮುಂಡಾಳಗುತ್ತುರವರುಗಳು ತಿಳಿಸಿದ್ದಾರೆ