ಕೆಯ್ಯೂರು: “ತೇನ ತ್ಯಕ್ತೇನ ಭುಂಜಿತಾ” ಅಂದರೆ ಮೊದಲು ಇತರರಿಗೆ ನೀಡಿ ನಂತರ ನೀನು ಅನುಭವಿಸು ಎನ್ನುತ್ತದೆ ಕಠೋಪನಿಷತ್ತು. ದಾನವು ತ್ಯಾಗದ ಒಂದು ರೂಪ. ಕರ್ಣ ತನ್ನ ವಜ್ರ ಕವಚವನ್ನು ಕರ್ಣ ಕುಂಡಲಗಳನ್ನು ದಾನ ಮಾಡದೆ ಇರುತ್ತಿದ್ದರೆ ಆತ ಎಂದೂ ದಾನಶೂರ ಎಂದೆನಿಸಿಕೊಳ್ಳುತ್ತಿರಲಿಲ್ಲ.
ಸೇವಾಸ್ತ ಗ್ರೂಪ್ ತಮ್ಮ ದುಡಿಮೆಯ ಒಂದು ಭಾಗವನ್ನು ವಿದ್ಯಾಭ್ಯಾಸಕ್ಕಾಗಿ ಹಾತೊರೆಯುವ ಆರ್ಥಿಕವಾಗಿ ಕಷ್ಟದಲ್ಲಿರುವ ವಿದ್ಯಾರ್ಥಿಗಳಿಗೆ ಧನಸಹಾಯ ನೀಡುವ ಮೂಲಕ ಕೆಯ್ಯೂರಿನ ವಿದ್ಯಾ ದಾನಿಗಳಾಗಿ ಗುರುತಿಸಿಕೊಂಡಿದ್ದಾರೆ. ಅಲ್ಪಾವಧಿಯಲ್ಲಿ 11 ವಿದ್ಯಾರ್ಥಿಗಳಿಗೆ ಆರ್ಥಿಕ ಸಹಾಯ ಮಾಡುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರವಾದ ಸೇವಾಸ್ತ ಗ್ರೂಪ್ ಪರ್ತ್ಯಡ್ಕ ನಿವಾಸಿ ಐತ್ತಪ್ಪ ಎಂಬುವರ ಮಗಳು ರಕ್ಷಿತಾ ಎಂಬ ವಿದ್ಯಾರ್ಥಿಗೆ ಧನಸಹಾಯ ನೀಡುವ ಮೂಲಕ ತನ್ನ ಆಶಯವನ್ನು ಎತ್ತಿ ಹಿಡಿದಿದೆ. ಸೇವಾಸ್ತ ಗ್ರೂಪ್ ನ ಸದಸ್ಯರಾದ ಚೇತನ್ ಕುಮಾರ್, ರವಿ ಪೆರ್ಲಂಪಾಡಿ, ಪ್ರಸಾದ್, ಅಕ್ಷತ್, ಉಪಸ್ಥಿತಿಯಲ್ಲಿ ನೀಡಿದ ಈ ಧನ ಸಹಾಯಕ್ಕೆ ಕೆಯ್ಯೂರು ಗ್ರಾಮ ಪಂಚಾಯತ್ ಸದಸ್ಯೆ ಮೀನಾಕ್ಷಿ ವಿ.ರೈ , ಕಮಲ, ಗುಲಾಬಿ, ಚನಿಯಾರು,ಸವಿತ,ಅನ್ಚಿತಾ ರೈ ಸಾಕ್ಷಿಯಾದರು.