ಕ್ಯಾಂಪ್ಕೋ ಸುವರ್ಣ ಮಹೋತ್ಸವಕ್ಕೆ ಅಮಿತ್ ಶಾ ಆಗಮನ ಹಿನ್ನಲೆ : ಪುತ್ತೂರು ನಗರಕ್ಕೆ ಆಗಮಿಸುವ ವಾಹನಗಳಿಗೆ ಪರ್ಯಾಯ ಮಾರ್ಗಸೂಚಿ

0

ಪುತ್ತೂರು: ಕೇಂದ್ರ ಗೃಹ ಸಚಿವ ಅಮಿತ್ ಷಾರವರ ಪುತ್ತೂರು ಭೇಟಿಯ ಸಲುವಾಗಿ ಫೆ. 11ರಂದು ಪುತ್ತೂರು ಪೇಟೆ ಪರಿಸರಕ್ಕೆ ಆಗಮಿಸುವ ವಾಹನಗಳಿಗೆ ಪರ‍್ಯಾಯ ಮಾರ್ಗಸೂಚಿ ನಿಗದಿಪಡಿಸಲಾಗಿದೆ. ಪುತ್ತೂರು ಡಿವೈಎಸ್ಪಿಯವರ ಕೋರಿಕೆ ಮೇರೆಗೆ ಸಹಾಯಕ ಆಯುಕ್ತರು ರ‍್ಯಾಯ ಮಾರ್ಗಸೂಚಿ ಆದೇಶ ಹೊರಡಿಸಿದ್ದಾರೆ.

ಕೇಂದ್ರ ಗೃಹ ಸಚಿವ ಅಮಿತ್ ಷಾರವರು ಫೆ.11ರಂದು ತೆಂಕಿಲ ವಿವೇಕಾನಂದ ಶಾಲಾ ಮೈದಾನಕ್ಕೆ ಕ್ಯಾಂಪ್ಕೋ ಸಂಸ್ಥೆಯ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಲಿದ್ದಾರೆ. ಈ ಸಂದರ್ಭದಲ್ಲಿ ಪುತ್ತೂರು ಹೊರತುಪಡಿಸಿ ಹೊರಗಡೆಯಿಂದ ಸಾರ್ವಜನಿಕರು ಹಲವಾರು ವಾಹನಗಳಲ್ಲಿ ಸದ್ರಿ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಆಗಮಿಸಲಿರುವ ನೆಲೆಯಲ್ಲಿ ಪುತ್ತೂರು ಪೇಟೆ ಪರಿಸರಗಳಲ್ಲಿ ವಾಹನಗಳ ದಟ್ಟಣೆ ಉಂಟಾಗುವ ಮೂಲಕ ಸಂಚಾರಕ್ಕೆ ಅಡಚಣೆಯಾಗುವಂತಹ ಸಾಧ್ಯತೆಯಿರುತ್ತದೆ.
ಸಾರ್ವಜನಿಕ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವ ನಿಟ್ಟಿನಲ್ಲಿ ಪುತ್ತೂರು ನಗರ ವ್ಯಾಪ್ತಿಯಲ್ಲಿ ಬದಲಿ ರಸ್ತೆ ಮಾರ್ಗಸೂಚಿಯನ್ನು ಅನುಸರಿಸಲು ಮುಂದಿನ ಕ್ರಮಕ್ಕಾಗಿ ಆದೇಶಿಸಲು ಪೊಲೀಸ್ ಉಪಾಧೀಕ್ಷಕರು, ಪುತ್ತೂರು ಉಪವಿಭಾಗ, ಪುತ್ತೂರು ಇವರು ಕೋರಿರುತ್ತಾರೆ. ಸದ್ರಿಯವರ ಕೋರಿಕೆಯನ್ನು ಪರಿಗಣಿಸಿ, ಪುತ್ತೂರು ಪೇಟೆ ಪರಿಸರಗಳಲ್ಲಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವ ದೃಷ್ಟಿಯಿಂದ ಬದಲಿ ರಸ್ತೆಯಲ್ಲಿ ವಾಹನ ಸಂಚರಿಸಲು ಆದೇಶಿಸಿದೆ.

ಬದಲಿ ರಸ್ತೆ:

ರಾಷ್ಟ್ರೀಯ ಹೆದ್ದಾರಿ 275ರಲ್ಲಿ ಲಿನೆಟ್ ಜಂಕ್ಷನ್‌ನಿಂದ – ಮುಕ್ರಂಪಾಡಿಯವರೆಗೂ ಸದ್ರಿ ರಸ್ತೆಯಲ್ಲಿ ಫೆ. 11 ಮಧ್ಯಾಹ್ನ 2.00 ಗಂಟೆಯಿಂದ ಸಂಜೆ 5.30 ಗಂಟೆಯವರೆಗೂ ಯಾವುದೇ ವಾಹನ ಸಂಚಾರಕ್ಕೆ ಅವಕಾಶವಿಲ್ಲ. ಸುಗಮ ಸಂಚಾರದ ದೃಷ್ಟಿಯಿಂದ ಆ ಸಮಯದಲ್ಲಿ ಮಂಗಳೂರು ಕಡೆಯಿಂದ – ಸುಳ್ಯ ಮತ್ತು ಮಡಿಕೇರಿ ಕಡೆ ಹೋಗುವ ವಾಹನಗಳು ಲಿನೆಟ್ ಜಂಕ್ಷನ್ – ಬೊಳುವಾರು ಜಂಕ್ಷನ್ – ದರ್ಬೆ – ಪುರುಷರಕಟ್ಟೆ – ಪಂಜಳ ಪರ್ಪುಂಜ ಮಾರ್ಗವನ್ನು ಬಳಸುವುದು. ಮಡಿಕೇರಿ – ಸುಳ್ಯ ಕಡೆಯಿಂದ ಮಂಗಳೂರು ಕಡೆಗೆ ಹೋಗುವ ವಾಹನಗಳು ಪರ್ಪುಂಜ – ಪಂಜಳ – ಪುರುಷರಕಟ್ಟೆ – ದರ್ಬೆ – ಬೊಳುವಾರು ಜಂಕ್ಷನ್ – ಲಿನೆಟ್ ಜಂಕ್ಷನ್ ಮಾರ್ಗವನ್ನು ಬಳಸುವುದು.
ಕಾರ್ಯಕ್ರಮಕ್ಕೆ ಆಗಮಿಸುವ ಬಸ್ಸುಗಳನ್ನು ನಿಲ್ಲಿಸಲು ಪುತ್ತೂರು ಶ್ರೀಮಹಾಲಿಂಗೇಶ್ವರ ದೇವಸ್ಥಾನದ ಮುಂಭಾಗದ ಆವರಣದಲ್ಲಿ ಹಾಗೂ ಸದ್ರಿ ಕಾರ್ಯಕ್ರಮಕ್ಕೆ ಸುಳ್ಯ ಕಡೆಯಿಂದ ಬರುವ ಬಸ್ಸುಗಳನ್ನು ಮುಕ್ರಂಪಾಡಿಯ ಸಾಂತ್ವಂ ಚರ್ಚ್ ಮುಂಭಾಗ ಇರುವ ಖಾಲಿ ಮೈದಾನದಲ್ಲಿ ನಿಲ್ಲಿಸಲು ಹಾಗೂ ಕಾರುಗಳನ್ನು ನಗರದ ಕಿಲ್ಲೆ ಮೈದಾನ, ಹಾಗೂ ವಿಐಪಿ ವಾಹನಗಳನ್ನು ತೆಂಕಿಲ ಗೌಡ ಸಮುದಾಯ ಭವನ ಮತ್ತು ಅದರ ಪಕ್ಕ ಇರುವ ಜಾಗದಲ್ಲಿ, ದರ್ಶನ್ ಹಾಲ್ ಮತ್ತು ಪಕ್ಕದ ಖಾಲಿ ಜಾಗಗಳಲ್ಲಿ ಪಾರ್ಕಿಂಗ್ ಮಾಡುವುದು ಎಂದು ಮಾರ್ಗಸೂಚಿಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here