ಬ್ರಾಂಡೆಡ್ ವಾಚ್, ಗಡಿಯಾರದ ಮಳಿಗೆ ಭೂಮಿ ಟೈಮ್ಸ್ ಶುಭಾರಂಭ

0

ಪುತ್ತೂರು: ಬ್ರಾಂಡೆಡ್ ವಾಚ್ ಹಾಗೂ ಗಡಿಯಾರದ ಮಳಿಗೆ ಭೂಮಿ ಟೈಮ್ಸ್ ಫೆ.10ರಂದು ಜಿ.ಎಲ್ ವನ್ ಮಾಲ್ ನಲ್ಲಿ ಶುಭಾರಂಭಗೊಂಡಿತು.
ಮಳಿಗೆಯನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಕಟ್ಟಡದ ಮ್ಹಾಲಕರು,‌ ಜಿ.ಎಲ್ ಆಚಾರ್ಯ ಜ್ಯುವೆಲ್ಲರ್ಸ್ ಮ್ಹಾಲಕ ಬಲರಾಮ ಆಚಾರ್ಯ ಮಾತನಾಡಿ, ರೇಡಿಯೊ ಕ್ರಾಪ್ಟ್ ಮಳಿಗೆಯು ಬಹಳಷ್ಟು ಪುರಾತನ ಮಳಿಗೆಯಾಗಿ ಪುತ್ತೂರಿನಲ್ಲಿ ಮನೆ ಮಾತಾಗಿದೆ. ಜಿ.ಎಲ್ ವನ್ ಮಾಲ್ ಕಟ್ಟಡ ಪ್ರಾರಂಭಿಸುವ ಸಂದರ್ಭದಲ್ಲಿ ಬಹಳಷ್ಟು ಅನುಮಾನಗಳಿತ್ತು. ನಮ್ಮ ಮಾಲ್ ನಲ್ಲಿ ಪ್ರಥಮವಾಗಿ ಮಳಿಗೆ ಮುಂಗಡ ಕಾದಿರಿಸುವ ಮೂಲಕ ರೇಡಿಯೋ ಕ್ರಾಪ್ಟ್ ನವರು ನಮಗೆ ದೈರ್ಯ ತುಂಬಿದ್ದಾರೆ. ಅಲ್ಲದೆ ಮಾಲ್ ನಲ್ಲಿ ಪ್ರಥಮ ವಾಣಿಜ್ಯ ಮಳಿಗೆಯಾಗಿ ರೇಡಿಯೋ ಕ್ರಾಪ್ಟ್ ಪ್ರಾರಂಭಗೊಂಡಿದ್ದು ಯಶಸ್ವಿಯಾಗಿ ಬೆಳೆಯಲಿ ಎಂದು ಹಾರೈಸಿದರು.

ಟೈಟಾನ್ ವಾಚ್ ನ ಅಧಿಕೃತ ವಿತರಕ ಎಚ್.ಎಸ್ ನಾಯಕ್ ಮಾತನಾಡಿ, ಪುತ್ತೂರು ಅತ್ಯಂತ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಪ್ರದೇಶ. ಇಲ್ಲಿಗೆ ಬ್ರಾಂಡೆಡ್ ಮಳಿಗೆಗಳ ಆವಶ್ಯಕತೆಯಿದೆ. ರೇಡಿಯೋ ಕ್ರಾಪ್ಟ್ ಮಳಿಗೆಯು ಕಠಿಣ ಪರಿಶ್ರಮ ಹಾಗೂ ಉತ್ತಮ ಸೇವೆಯ ಮೂಲಕ ಅಭಿವೃದ್ಧಿ ಹೊಂದಿದೆ. ಇಲ್ಲಿ ಉತ್ಕೃಷ್ಟ ಕಂಪನಿಯ ಉತ್ಪನ್ನಗಳಿದ್ದು ಮಾಲ್ ನಲ್ಲಿ‌ ಇಂತಹ ಮಳಿಗೆಗಳ ಆವಶ್ಯಕತೆಯಿದೆ ಎಂದ ಅವರು ಈಗಿನ ವಾಚ್ ಗಳಲ್ಲಿ ಎಲ್ಲಾ ರೀತಿಯ ಸೌಲಭ್ಯಗಳಿದ್ದು ಜನ ಆಕರ್ಷಿತರಾಗುತ್ತಾರೆ ಎಂದರು.

ನಗರಸಭಾ ಉಪಾಧ್ಯಕ್ಷೆ ವಿದ್ಯಾ ಗೌರಿ ಮಾತನಾಡಿ, ಜಿಲ್ಲಾ ಕೇಂದ್ರವಾಗುವ ಎಲ್ಲಾ ಸಾಧ್ಯತೆಗಳು ಪುತ್ತೂರಿಗಿದೆ. ಕಾಲ ಬದಲಾದ ನಂತರ ಜನರ ಜೀವ ಶೈಲಿ ಬದಲಾಗುತ್ತಿದೆ. ಬ್ರಾಂಡೆಡ್ ಉತ್ಪನ್ನಗಳ ಬೆಲೆ ಬಗ್ಗೆ ಜನರಿಗೆ ಅರಿವಿದೆ. ಅದರಲ್ಲಿರುವ ವಿಶೇಷತೆಗಳನ್ನು ತಿಳಿದೇ ಬ್ರಾಂಡೆಡ್ ಜನ ಪ್ರಾಮುಖ್ಯತೆ ನೀಡುತ್ತಾರೆ. ಜನ ಮೆಚ್ಚಿದ ಮಳಿಗೆಯಾಗಿ ರೇಡಿಯೋ ಕ್ರಾಪ್ಟ್ ಬೆಳೆಯಲಿ ಎಂದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ ವಿಶ್ವನಾಥ ರೈ ಮಾತನಾಡಿ, ನಾನು ಒಬ್ಬ ರೇಡಿಯೋ ಕ್ರಾಫ್ಟ್ ನ ಗ್ರಾಹಕ. ಇಲ್ಲಿ ಗ್ರಾಹಕರಿಗೆ ನಗುಮೊಗದ ಸೇವೆ ದೊರೆಯುತ್ತಿದ್ದು ಮಳಿಗೆಯು ಉತ್ತುಂಗಕ್ಕೆ ಬೆಳೆದಿದೆ. ಇದೀಗ ಎರಡನೇ ಮಳಿಗೆ ಪ್ರಾರಂಭಗೊಂಡಿದ್ದು ಮಳಿಗೆ ಉತ್ತುಂಗಕ್ಕೆ ಏರಲಿ, ಇನ್ನಷ್ಟು ಮಳಿಗೆಗಳು ಪ್ರಾರಂಭವಾಗಲಿ ಎಂದು ಆಶಿಸಿದರು.
ಯೂನಿಯನ್ ಬ್ಯಾಂಕ್ ನ ಸೀನಿಯರ್ ಮ್ಯಾನೇಜರ್ ಸುರೇಶ್ ನಾಯಕ್ ಮಾತನಾಡಿ,‌ ಮಳಿಗೆಯು ಉತ್ತಮ ಸೇವೆಯ ಮೂಲಕ ಅಧಿಕ ಲಾಭ ಪಡೆದು ಅಭಿವೃದ್ಧಿ ಹೊಂದಲಿ ಎಂದು ಹಾರೈಸಿದರು.

ಮ್ಹಾಲಕ ಶ್ಯಾಮಸುಂದರ ರವರ ಪುತ್ರಿಯರಾದ ಭೂಮಿಕಾ ಹಾಗೂ ಆಶಿಕಾ ಪ್ರಾರ್ಥಿಸಿದರು. ನಿವೃತ್ತ ಪ್ರಾಂಶುಪಾಲ ಅನಂತ ಮೂಡಿತ್ತಾಯ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.
ಶ್ಯಾಮಸುಂದರ ಅತಿಥಿಗಳನ್ನು ಹೂ,‌ಸ್ಮರಣಿಕೆ ನೀಡಿ ಗೌರವಿಸಿದರು. ಕಾಂತಿ ಶ್ಯಾಮ ವಂದಿಸಿದರು.

ಬ್ರಾಂಡೆಡ್ ವಾಚ್, ಗಡಿಯಾರ;
ಮಳಿಗೆಯಲ್ಲಿ ಟೈಟಾನ್, ಸೊನಾಟ, ಫಾಸ್ಟ್ ಟ್ರಾಕ್, ಪೊಲೀಸ್, ಕ್ಯಾಶಿಯೋ, ಟೈಮೆಕ್ಸ್, ಟೋಮಿ ಮೊದಲಾದ ಬ್ರಾಂಡೆಡ್ ಕಂಪನಿಗಳ ವಾಚ್ ಹಾಗೂ ಗಡಿಯಾರಗಳು ಲಭ್ಯವಿದೆ ಎಂದು ಮ್ಹಾಲಕ ಶ್ಯಾಮಸುಂದರ ತಿಳಿಸಿದರು.

ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ, ವಿಶ್ರಾಂತ ಪ್ರಾಧ್ಯಾಪಕ ವಿ.ಬಿ ಅರ್ತಿಕಜೆ, ಡಾ.ಸತ್ಯಸುಂದರ, ಡಾ.ಜೆ.ಸಿ ಅಡಿಗ, ಸುರೇಶ್ ಶೆಟ್ಟಿ, ಸುಧನ್ವ ಆಚಾರ್ಯ, ಲಕ್ಷ್ಮೀ ಕಾಂತ ಆಚಾರ್ಯ, ಸುಭಾಸ್ ಬೆಳ್ಳಿಪ್ಪಾಡಿ ಸೇರಿದಂತೆ ಹಲವು ಮಂದಿ ಆಗಮಿಸಿ ಶುಭಹಾರೈಸಿದರು.

LEAVE A REPLY

Please enter your comment!
Please enter your name here