ಫೆ.11, 12: ಎಲ್‌ಸಿ ಕಾಮಗಾರಿಗಾಗಿ ಎಡಮಂಗಲ ರೈಲ್ವೆ ಲೆವೆಲ್ ಕ್ರಾಸಿಂಗ್ ಬಂದ್
ಬದಲಿ ರಸ್ತೆಯಾಗಿ ಪುಳಿಕುಕ್ಕು-ಪಂಜ-ನಿಂತಿಕಲ್ಲು ರಸ್ತೆ ಬಳಸಲು ಸೂಚನೆ

0

ಪುತ್ತೂರು: ಕಬಕ ಪುತ್ತೂರು – ಸುಬ್ರಹ್ಮಣ್ಯ ರೈಲ್ವೆ ನಿಲ್ದಾಣದ ನಡುವೆ ಕಿ.ಮೀ.110/600-700 ಎಡಮಂಗಲದ ರೈಲ್ವೆ ಲೆವೆಲ್ ಕ್ರಾಸಿಂಗ್ ಸಂಖ್ಯೆ 69ರಲ್ಲಿ ಎಲ್‌ಸಿ ಕಾಮಗಾರಿ ಪ್ರಯುಕ್ತ ಫೆ.11ರ ರಾತ್ರಿ 7ರಿಂದ ಫೆ.12ರ ರಾತ್ರಿ 7ರವರೆಗೆ ಮುಚ್ಚಲಾಗುತ್ತದೆ. ಆದುದರಿಂದ ಎಡಮಂಗಲ – ಕಡಬ ರಸ್ತೆ ಸಂಪರ್ಕಕ್ಕೆ ಬದಲಿ ರಸ್ತೆಯಾಗಿ ಪುಳಿಕುಕ್ಕು-ಪಂಜ-ನಿಂತಿಕಲ್ಲು ರಸ್ತೆಯನ್ನು ಬಳಸಬಹುದು ಎಂದು ಅಸಿಸ್ಟೆಂಟ್ ಡಿವಿಜನಲ್ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here