ಜಾಗ ವಿವಾದ ಇತ್ಯರ್ಥಕ್ಕೆ ಹೋದ ನನ್ನ ಮೇಲೆ ಮಾಡಿರುವ ಆಪಾದನೆ, ವೆಬ್ ಸೈಟ್‌ಗಳ ವರದಿಯಲ್ಲಿ ಸತ್ಯಾಂಶವಿಲ್ಲ
ಸುಳ್ಳು ಆರೋಪ ಮಾಡಿದವರು ಸತ್ಯಪ್ರಮಾಣಕ್ಕೆ ಬರಲಿ : ಸುಂದರ ಪಾಟಾಜೆ

0

ಪುತ್ತೂರು: ಜಾಗ ವಿವಾದ ಇತ್ಯರ್ಥಕ್ಕೆ ಹೋದ ನನ್ನ ಮೇಲೆ ಮಾಡಿರುವ ಆಪಾದನೆ ಮತ್ತು ವೆಬ್‌ಸೈಟ್‌ಗಳ ವರದಿಯಲ್ಲಿ ಸತ್ಯಾಂಶವಿಲ್ಲ, ಸುಳ್ಳು ಆರೋಪ ಮಾಡಿದವರು ಸತ್ಯಪ್ರಮಾಣಕ್ಕೆ ಬರಲಿ ಎಂದು ಅಂಬೇಡ್ಕರ್ ರಕ್ಷಣಾ ವೇದಿಕೆ ರಾಜ್ಯ ಅಧ್ಯಕ್ಷ ಸುಂದರ ಪಾಟಾಜೆ ಹೇಳಿದ್ದಾರೆ.
ಸುಳ್ಯ ಪ್ರೆಸ್‌ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಪುತ್ತೂರಿನ ಕೋಡಿಂಬಾಡಿ ಗ್ರಾಮದ ಕಜೆ ನಿವಾಸಿಯಾದ ಚೋಮು ಎಂಬವರಿಗೆ ಮತ್ತು ಗಿರಿಯಪ್ಪ ಎಂಬವರಿಗೆ ಜಾಗದ ವಿವಾದವಿದೆ. ಚೋಮ ಎಂಬವರ 1.05 ಎಕ್ರೆ ಜಾಗ ದರ್ಖಾಸ್ತು ಆಸ್ತಿಯಾಗಿದ್ದು, ಆರ್ ಟಿ ಸಿ ಹೊಂದಿದ್ದು, ಇದೇ ಜಾಗದಲ್ಲಿ ಗಿರಿಯಪ್ಪರಿಗೂ ಅಕ್ರಮ ಸಕ್ರಮದಡಿ 5 ಸೆಂಟ್ಸ್ ಜಾಗ ರೆಕಾರ್ಡ್ ಆಗಿತ್ತು ಮತ್ತು ಚೋಮ ಎಂಬವರ ಹೆಸರಿನಲ್ಲಿದ್ದ ಜಾಗವನ್ನು ಅನುಭವಿಸಲು ಅವರ ಸಹೋದರ ಬಿಡದ ಹಿನ್ನಲೆಯಲ್ಲಿ ಚೋಮ ಎಂಬವರು ನಮ್ಮ ಅಂಬೇಡ್ಕರ್ ಸಮಿತಿಗೆ ಮನವಿ ಮಾಡಿದ್ದರು, ಈ ಹಿನ್ನಲೆಯಲ್ಲಿ ನಾವು ಅಲ್ಲಿಯ ಸ್ಥಳಕ್ಕೆ ಹೋಗಿ ಚೋಮು ಎಂಬವರ ಜಾಗದ ಗಡಿ ಗುರುತು ಮಾಡಲು ಸಿದ್ದ ಪಡಿಸಿದಾಗ ಗಿರಿಯಪ್ಪರವರು ಮತ್ತು ಅವರ ಮನೆಯವರು ಚೋಮ ಎಂಬವರ ಮಗ ಮತ್ತು ಮಗಳ ಮೇಲೆ ಹಲ್ಲೆ ಮಾಡಲು ಹೋದಾಗ ನಾನು ತಡೆಯಲು ಹೋಗಿದ್ದೆ ಮತ್ತು ಅವರನ್ನು ತಳ್ಳಿದ್ದೆ, ಈ ಸಂದರ್ಭದಲ್ಲಿ ಅವರಲ್ಲೊಬ್ಬರು ನನ್ನ ಷರ್ಟ್ ಹಿಡಿದು ಷರ್ಟ್ ಹರಿದು ಹೋಗಿತ್ತು. ಇದೇ ಪೊಟೋ ಬಳಸಿ, ವೆಬ್ ನ್ಯೂಸ್‌ಗಳಲ್ಲಿ ನನ್ನ ಮೇಲೆ ಕಪೋಲಕಲ್ಪಿತ ಸುಳ್ಳು ವರದಿಯನ್ನು ಜಾಲತಾಣದಲ್ಲಿ ಬಿತ್ತರ ಮಾಡಿದ್ದಾರೆ ಎಂದು ಸುಂದರ ಪಾಟಾಜೆ ಹೇಳಿದರು.
ಇಲ್ಲದ ಸುದ್ದಿಯನ್ನು ಪ್ರಕಟಿಸಿದ ಜಾಲತಾಣದ ವಿರುದ್ದ ಕಾನೂನು ಮೊರೆ ಹೋಗುತ್ತೇನೆ, ಎಂದು ಹೇಳಿದರು ,ದಾರಿಯಲ್ಲಿ ಹೋಗುವವರನ್ನು ಜನ ತಂದಿದ್ದರು ಎಂದಿದ್ದಾರೆ, ಕಾನೂನು ಪ್ರಕಾರ ಕೆಲಸ ಮಾಡುತ್ತಿರುವ ಪೋಲಿಸರ ಮೇಲೂ ಅಪವಾದ ಮಾಡಿದ್ದಾರೆ, ಈಗಾಗಲೆ ನೂರಾರು ಪ್ರಕರಣವನ್ನು ನ್ಯಾಯವಾಗಿ ಇತ್ಯರ್ಥ ಪಡಿಸಿದ್ದೇನೆ, ಈ ಅಪ ಪ್ರಚಾರ ಮಾಡುವವರು, ಮತ್ತು ನಾನು ಹೆಣ್ಣು ಮಕ್ಕಳ ಮೇಲೆ ಕೈ ಹಾಕಿದ್ದೇನೆ ಎನ್ನುವವರು ಕಾನತ್ತೂರು ಕ್ಷೇತ್ರಕ್ಕೆ ಸತ್ಯಪ್ರಮಾಣಕ್ಕೆ ಬರಲಿ ಎಂದು ಸುಂದರ ಪಾಟಾಜೆ ಸವಾಲೆಸೆದರು. ಪತ್ರಿಕಾಗೋಷ್ಠಿಯಲ್ಲಿ ಅಂಬೇಡ್ಕರ್ ಸಮಿತಿ ಸಂಚಾಲಕ ಪರಮೇಶ್ವರ ಕೆಮ್ಮಿಂಜೆ, ಚೊಮು, ರೇವತಿ, ಪ್ರೇಮವತಿ, ಶೇಷಪ್ಪ, ರವಿರಾಜ್ ಮೊದಲಾದವರಿದ್ದರು,

LEAVE A REPLY

Please enter your comment!
Please enter your name here