ಕೃಷಿಕರಿಗೆ, ಕಾರ್ಪೊರೇಟ್ ಉದ್ಯೋಗಿಗಳಿಗೆ ವಿಶೇಷ ರಿಯಾಯಿತಿ…!
ಮೆಗಾ ವಿನಿಮಯ ಮೇಳದಲ್ಲಿ ರೆನಾಲ್ಟ್‌ ಸಂಸ್ಥೆ ಘೋಷಣೆ

0

ಪುತ್ತೂರು : ಹೆಸರಾಂತ ರೆನಾಲ್ಟ್ ಮೆಗಾ ವಿನಿಮಯ ಮೇಳ ಅದ್ಬುತ ರೀತಿಯಲ್ಲಿ ಯಶಸ್ವಿಯಾಗಿ ಅತೀ ಹೆಚ್ಚು ಕಾರುಗಳ ಮಾರಾಟವಾಗಲಿ. ನನ್ನ ಸಹೋದ್ಯೋಗಿಗಳ ಬಳಿ ರೆನಾಲ್ಟ್ ಕಾರುಗಳೂ ಇವೆ. ಅವರ ಅಭಿಪ್ರಾಯದಂತೆ ನಾನೂ ಕೂಡ ರೆನಾಲ್ಟ್ ಕಾರಿನ ಒಡೆಯನಾಗುತ್ತಿದ್ದೇನೆ ಎಂದು ಬೆಟ್ಟಂಪಾಡಿ ಸ.ಪ್ರ.ದ.ಕಾಲೇಜು ಇದರ ಲೈಬ್ರೇರಿಯನ್ ರಾಮ ಕೆ. ಅನಿಸಿಕೆ ವ್ಯಕ್ತಪಡಿಸಿದರು. ಫೆ.10 ರಂದು ರೆನಾಲ್ಟ್ ಇಂಡಿಯಾ ಇದರ ಮಾರಾಟ, ಸೇವಾ ಸಂಸ್ಥೆ ಮಂಗಳೂರು ಕೂಳೂರು ಬಳಿ ಕಾರ್ಯಚರಿಸುತ್ತಿರುವ’ ಎನಾಕ್ ರೆನಾಲ್ಟ್ ಇದರ ಸಹಸಂಸ್ಥೆ, ದರ್ಬೆ ಬೈಪಾಸ್ ಬಳಿಯ ಗುರುಪ್ರಸಾದ್ ಬಿಲ್ಡಿಂಗ್ ನಲ್ಲಿ ಕಾರ್ಯಾಚರಿಸುತ್ತಿರುವ ರೆನಾಲ್ಟ್‌ ಪುತ್ತೂರು ವತಿಯಿಂದ ಕಾರು ಪ್ರಿಯರಿಗಾಗಿ ಆಯೋಜಿಸಿದ್ದ ಎರಡು ದಿನಗಳ ಬೃಹತ್ ಮೆಗಾ ಎಕ್ಸ್ಚೇಂಜ್ ಮೇಳದ ಉದ್ಘಾಟನೆ ಯನ್ನು ದೀಪ ಪ್ರಜ್ವಲನೆ ಮೂಲಕ ನೆರವೇರಿಸಿ ಶುಭ ಹಾರೈಸಿದರು. ಗುರು ಪ್ರಸಾದ್ ಬಿಲ್ಡಿಂಗ್ ಮಾಲಕ ವಾಸುದೇವ ಆಚಾರ್ಯ, ಸಂಸ್ಥೆ ಮ್ಯಾನೇಜರ್ ಯಶೋಧಾ, ಟೀಂ ಲೀಡರ್ ಪವಿತ್ರ , ಅಮಿತಾ ಹಾಗೂ ಹರಿಣ್ ಹಾಜರಿದ್ದರು.

ಮ್ಯಾನೇಜರ್ ಯಶೋಧಾ ಮಾತನಾಡಿ, ಕಾರು ಪ್ರಿಯರಿಗಾಗಿ ಎರಡು ದಿನಗಳ ಬೃಹತ್ ಎಕ್ಚ್ಸೇಂಜ್ ಹಾಗೂ ಲೋನ್ ಮೇಳವನ್ನೂ ಅಯೋಜಿಸಿದ್ದು 2023 ಮಾಡೆಲಿನ ಟ್ರೈಬರ್ ಹಾಗೂ ಕೈಗರ್ ಕಾರುಗಳಲ್ಲಿ ನಾಲ್ಕು ಹೊಸ ಸುರಕ್ಷಾ ಮಾದರಿಗಳನ್ನು ಕಂಪೆನಿಯೂ ಅಳವಡಿಸಿದ್ದು, ಇ ಎಸ್ ಪಿ, ಟ್ರ್ಯಾಕ್ಸಾನ್ ಕಂಟ್ರೋಲ್ ಸಿಸ್ಟಂ, ಹಿಲ್ ಸ್ಟಾರ್ಟ್ ಅಸಿಸ್ಟ್ ಹಾಗೂ ಟಯರ್ ಪ್ರೆಶರ್ ಮಾನಿಟರ್ ಸಿಸ್ಟಂ ಒಳಗೊಂಡಿವೆ. ಕಾರ್ಪೋರೇಟ್ ಉದ್ಯೋಗಿಗಳು, ಕೃಷಿಕರು, ಸರ್ಕಾರಿ ನೌಕರರಿಗೆ ವಿಶೇಷ ಸಾಲ ಸೌಲಭ್ಯ ವ್ಯವಸ್ಥೆಯನ್ನೂ ರೆನಾಲ್ಟ್‌ ಕಲ್ಪಿಸಿದೆ. ಕಾರು ಪ್ರಿಯರು ಈ ವಿನಿಮಯ ಮೇಳ ಮೂಲಕ ವಿನೂತನ ರೆನಾಲ್ಟ್‌ ಕಾರುಗಳೊಡನೆ ತಮ್ಮ ಹಳೇಯ ಮಾದರಿ ಕಾರುಗಳನ್ನು ಅತ್ಯುತ್ತಮ ಬೆಲೆಯೊಡನೆ ವಿನಿಮಯಕ್ಕೆ ಅವಕಾಶವನ್ನು ಸಂಸ್ಥೆ ಕಲ್ಪಿಸಿ ಕೊಟ್ಟಿದೆಯೆಂದೂ ಹೇಳಿ ಸಹಕಾರ ಯಾಚಿಸಿದರು.

2023 ನೇ ಮಾಡೆಲಿನ ಕೈಗರ್ ಹಾಗೂ ಟ್ರೈಬೆರ್ ನಲ್ಲಿ 4 ಹೆಚ್ಚುವರಿ ಸುರಕ್ಷಾ ಸಾಧನಗಳನ್ನೂ ಅಳವಡಿಸಲಾಗಿದೆ. ವಿನಿಮಯ ಕೊಡುಗೆ ಮತ್ತು ಲಾಯಲ್ಟಿ ಸಿಗಲಿದ್ದು , ನೂರರಷ್ಟು ಸಾಲ ಸೌಲಭ್ಯ ಹಾಗೂ ಹಳೇ ಕಾರಿನ ವಿನಿಮಯಕ್ಕೂ ಅವಕಾಶ ಒದಗಿಸಿಕೊಟ್ಟಿದ್ದು, ಫೆ.11 ರಂದು ಮೇಳ ತೆರೆ ಕಾಣಲಿದೆ. ಮಾಹಿತಿಗಾಗಿ 9606455070 ಸಂಪರ್ಕಿಸಬಹುದು.

LEAVE A REPLY

Please enter your comment!
Please enter your name here