ರಾಜ್ಯಮಟ್ಟದ 41ನೇ ಸಾಲಿನ ಮಾಸ್ಟರ್ ಅಥ್ಲೆಟಿಕ್ ಚಾಂಪಿಯನ್ ಶಿಪ್ : ಸವಣೂರಿನ ನಾಲ್ವರಿಗೆ ವಿವಿಧ ವಿಭಾಗದಲ್ಲಿ ಬಹುಮಾನ

0

ಸವಣೂರು : ಕರ್ನಾಟಕ ಮಾಸ್ಟರ್ಸ್ ಅಥ್ಲೆಟಿಕ್ ಅಸೋಸಿಯೇಶನ್ ವತಿಯಿಂದ ಕೋಲಾರದ ಪೊಲೀಸ್ ಪೆರೇಡ್ ಮೈದಾನದಲ್ಲಿ ಫೆ.11 ಮತ್ತು 12ರಂದು ನಡೆದ ರಾಜ್ಯಮಟ್ಟದ 41ನೇ ಸಾಲಿನ ಮಾಸ್ಟರ್ ಅಥ್ಲೆಟಿಕ್ ಚಾಂಪಿಯನ್ ಶಿಪ್ ನಲ್ಲಿ ಸವಣೂರು ಗ್ರಾ.ಪಂ.ವ್ಯಾಪ್ತಿಯ ನಾಲ್ವರು ಮಹಿಳೆಯರು ಬಹುಮಾನ ಪಡೆದುಕೊಂಡಿದ್ದಾರೆ.

ಸವಣೂರು ಗ್ರಾಮದ ಕೇಕುಡೆ ನಿವಾಸಿ ಪುಷ್ಪಾವತಿ ಅವರು 40-45 ವಯೋಮಾನದ 800 ಮೀ. ಓಟ, ಚಕ್ರ ಎಸೆತ, ಜಾವೆಲಿನ್‌ ಎಸೆತ, ರಿಲೇಯಲ್ಲಿ ಭಾಗವಹಿಸಿ 4 ಸ್ಪರ್ಧೆಯಲ್ಲೂ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.

ಸವಣೂರು ಗ್ರಾಮದ ಮೆದು ನಿವಾಸಿ ವಸಂತಿ ಶಿವರಾಮ ಗೌಡ ಅವರು 60-65 ವಯೋಮಾನದ ವೇಗದ 1500 ಮೀ ಓಟದಲ್ಲಿ ಹಾಗೂ 800 ಮೀ ಓಟದಲ್ಲಿ ಪ್ರಥಮ ಸ್ಥಾನ, ವೇಗದ ನಡಿಗೆಯಲ್ಲಿ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.

ಪುಣ್ಚಪ್ಪಾಡಿ ಗ್ರಾಮದ ಅಜಿಲೋಡಿ ನಿವಾಸಿ ಕಾವೇರಿ ಅವರು 45-50 ವರ್ಷ ವಯೋಮಾನದ ವೇಗದ ನಡಿಗೆಯಲ್ಲಿ ಪ್ರಥಮ, ರಿಲೇಯಲ್ಲಿ ಪ್ರಥಮ, ಗುಂಡೆಸೆತ, 800 ಮೀ ಓಟದಲ್ಲಿ, 200 ಮೀ. ಓಟದಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ.

ಪುಣ್ಚಪ್ಪಾಡಿ ಗ್ರಾಮದ ಕಟ್ಟತ್ತಾರು ನಿವಾಸಿ ಚಂದ್ರಕಲಾ ಅವರು 30-35 ವರ್ಷ ವಯೋಮಾನದ ಹೈಜಂಪ್‌ ನಲ್ಲಿ ಪ್ರಥಮ, 400 ಮೀ. ಓಟದಲ್ಲಿ ದ್ವಿತೀಯ, ಲಾಂಗ್‌ ಜಂಪ್‌ ನಲ್ಲಿ ತೃತೀಯ ಸ್ಥಾನ ಪಡದುಕೊಂಡಿದ್ದಾರೆ.

LEAVE A REPLY

Please enter your comment!
Please enter your name here