ಪುತ್ತೂರು: ಉಪ್ಪಳ ಕಯ್ಯಾರುಪಾದೆ ತರವಾಡು ಮನೆಯಲ್ಲಿ ಧರ್ಮದೈವದ ಚಾವಡಿ, ಗುಳಿಗನ ಕಟ್ಟೆ, ಪಡ್ಪಿರೆ ಜೀರ್ಣೋದ್ಧಾರಗೊಂಡು ವೇದಮೂರ್ತಿ ಬ್ರಹ್ಮಶ್ರೀ ತಂತ್ರಿ ಬಿ.ಎಸ್.ಎಸ್. ಕಡಮಣ್ಣಾಯ ಬಂಬ್ರಾಣ ಕುಂಬ್ಳೆ ಇವರ ನೇತೃತ್ವದಲ್ಲಿ ಪ್ರತಿಷ್ಠಾ ಕಲಶೋತ್ಸವ, ಹರಿಸೇವೆ ಮತ್ತು ನೇಮೋತ್ಸವವು ಮಾ.22 ರಿಂದ 24 ರವರೆಗೆ ನಡೆಯಲಿದೆ. ಬ್ರಹ್ಮಕಲಶೋತ್ಸವ ಸಮಿತಿಗೆ ವಿವಿಧ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಸಂಚಾಲಕರಾಗಿ ಕಾವು ಹೇಮನಾಥ ಶೆಟ್ಟಿ, ಗೌರವಾಧ್ಯಕ್ಷರಾಗಿ ಸೀತಾರಾಮ ರೈ ಕೈಕಾರ ಚೆಲ್ಯಡ್ಕ, ಅಧ್ಯಕ್ಷರಾಗಿ ದೇರಣ್ಣ ಶೆಟ್ಟಿ ನಡುಬೈಲು, ಉಪಾಧ್ಯಕ್ಷರುಗಳಾಗಿ ಮಹಾಬಲ ರೈ ನಡುಗ್ರಾಮ, ಜಯರಾಮ ರೈ ವರ್ಕಾಡಿ ತಮ್ಮನಬೆಟ್ಟು, ನಾರಾಯಣ ಶೆಟ್ಟಿ ಅಡ್ಯಾರ್, ಸುರೇಂದ್ರ ರೈ ಪೊನೋನಿ, ವನಜ ಎಸ್.ಶೆಟ್ಟಿ ಮಡಂದೂರು, ಪ್ರಧಾನ ಕಾರ್ಯದರ್ಶಿ ತಾರಾನಾಥ ಶೆಟ್ಟಿ ಕುಯ್ಯಾರು, ಜತೆ ಕಾರ್ಯದರ್ಶಿಯಾಗಿ ಪ್ರಮೀಳ ಶೆಟ್ಟಿ ಕಯ್ಯಾರುಪಾದೆ ಹಾಗೂ ಕೋಶಾಧಿಕಾರಿಯಾಗಿ ಸತೀಶ್ ರೈ ಪೊನೋನಿರವರುಗಳನ್ನು ಆಯ್ಕೆ ಮಾಡಲಾಯಿತು.