ಪುತ್ತೂರು: ನರಿಮೊಗರು ಗ್ರಾಮದ ಕೈಪಂಗಳ ಬಾರಿಕೆಯಲ್ಲಿ ಫೆ.12ರಂದು 42ನೇ ವರ್ಷದ ಉಳ್ಳಾಕುಲು-ಕೊಡಮಣಿತ್ತಾಯ ಹಾಗೂ ಪರಿವಾರ ದೈವಗಳ ನೇಮ ಹಾಗೂ ಫೆ.13ರಂದು ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ ನಡೆಯಿತು.
ಫೆ.12ರಂದು ಗಣಹೋಮ, ನಾಗತಂಬಿಲ ಮತ್ತು ದೈವಗಳ ತಂಬಿಲ, ಶ್ರೀ ಸತ್ಯ ನಾರಾಯಣ ಪೂಜೆ, ಅನ್ನಸಂತರ್ಪಣೆ, ಕಲ್ಲುರ್ಟಿ ದೈವದ ಭಂಡಾರ ತೆಗೆದು, ಕಲ್ಲುರ್ಟಿ ನೇಮ, ಸಾರ್ವಜನಿಕ ಅನ್ನ ಸಂತರ್ಪಣೆ, ಭಂಡಾರ ತೆಗೆದು ಉಳ್ಳಾಕುಲು-ಕೊಡಮಣಿತ್ತಾಯ ಹಾಗೂ ಪರಿವಾರ ದೈವಗಳ ನೇಮೋತ್ಸವ ನಡೆಯಿತು.
ಫೆ.13ರಂದು ರಾತ್ರಿ ಗಂಟೆ 8-30ಕ್ಕೆ ಬೈದರ್ಕಳ ಗರಡಿ ಇಳಿಯುವುದು, ರಾತ್ರಿ ಗಂಟೆ 10ಕ್ಕೆ ಸಿಡಿಮದ್ದು ಪ್ರದರ್ಶನ, ಬೈದರ್ಕಳ ಗರಡಿ ಇಳಿದ ಬಳಿಕ ಸಾರ್ವಜನಿಕ ಅನ್ನ ಸಂತರ್ಪಣೆ, ರಾತ್ರಿ ಗಂಟೆ 2ಕ್ಕೆ ಮಾಣಿಬಾಳೆ ಗರಡಿ ಇಳಿಯುವುದು ಮೊದಲಾದ ಧಾರ್ಮಿಕ ಕಾರ್ಯಕ್ರಮ ನಡೆಯಿತು. ನೂರಾರು ಭಕ್ತಾದಿಗಳು ಪಾಲ್ಗೊಂಡಿದ್ದರು.
ಶ್ರೀ ಬ್ರಹ್ಮ ಬೈದರ್ಕಳ ನೇಮೋತ್ಸವ ಸಮಿತಿಯ ಪದಾಧಿಕಾರಿಗಳು, ಸದಸ್ಯರು, ಕೈಪಂಗಳ ಬಾರಿಕೆ ಕೋಟಿ ಚೆನ್ನಯ ಗೆಳೆಯರ ಬಳಗದವರು ಹಾಗೂ ಮತ್ತಿತರರು ವಿವಿಧ ಕಾರ್ಯಕ್ರಮ ನಿರ್ವಹಿಸಿದರು.
.