ಶ್ರೀರಾಘವೇಂದ್ರ ಸ್ಟೋರ್‌ಗೆ ಏಷಿಯನ್ ಪೈಂಟ್ಸ್‌ನವರ ಮಾಸ್ಟರ್ ಇನ್ ಇಮಲ್‌ಶನ್ ಪ್ರಶಸ್ತಿ

0

ಪುತ್ತೂರು: ಪುತ್ತೂರು ಶ್ರೀರಾಘವೇಂದ್ರ ಸ್ಟೋರ‍್ಸ್ ಸಂಸ್ಥೆಗೆ ಪ್ರಸಿದ್ಧ ಪೈಂಟ್ ಕಂಪೆನಿಯಾದ ಏಷಿಯನ್ ಪೈಂಟ್ ಕಂಪೆನಿಯಿಂದ ಮಾಸ್ಟರ್ ಇನ್ ಇಮಲ್‌ಶನ್ ಪ್ರಶಸ್ತಿಯು ಲಭಿಸಿರುತ್ತದೆ.

ಬೆಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ಶ್ರೀ ರಾಘವೇಂದ್ರ ಸ್ಟೋರ್ ಮಾಲಕ ಸತ್ಯಶಂಕರ ಸಾಮೆತ್ತಡ್ಕ ಇವರು ಏಷಿಯನ್ ಪೈಂಟ್ ಕಂಪೆನಿಯ ರೀಜನಲ್ ಮ್ಯಾನೇಜರ್ ಅಕ್ಷಯ್ ದೇಶಮುಖ ಇವರಿಂದ ಪ್ರಶಸ್ತಿಯನ್ನು ಸ್ವೀಕರಿಸಿದರು. ಈ ಸಂದರ್ಭದಲ್ಲಿ ಖ್ಯಾತ ನಿರೂಪಕ ಆನಂದ ಹಾಗೂ ಏಷಿಯನ್ ಪೈಂಟ್ಸ್ ಕಂಪೆನಿಯ ಏರಿಯ ಮ್ಯಾನೇಜರ್ ಸಾಗರ್ ಉಪಸ್ಥಿತರಿದ್ದರು.

ಸಂಸ್ಥೆಯು ಕಳೆದ ಮೂವತ್ತಮೂರು ವರ್ಷಗಳಿಂದ ಪುತ್ತೂರಿನ ಜನತೆಗೆ ಉತ್ತಮ ಗುಣಮಟ್ಟದ ಪೈಂಟನ್ನು ರಿಯಾಯಿತಿ ದರದಲ್ಲಿ ಪೂರೈಸುತ್ತಾ ಬಂದಿದೆ. ಹೊಸ ಉತ್ಪನ್ನಗಳನ್ನು ಜನರಿಗೆ ಪರಿಚಯಿಸಿದೆ. ಪೈಂಟ್ ಬಗ್ಗೆ ಅಪಾರ ಅನುಭವ ಹೊಂದಿರುವ ಸಂಸ್ಥೆಯು ಗ್ರಾಹಕರಿಗೆ ಉಪಯುಕ್ತ ಮಾಹಿತಿಗಳನ್ನು ಸದಾ ಒದಗಿಸುತ್ತಿದೆ. ಏಷಿಯನ್ ಪೈಂಟ್ಸ್‌ನವರ ಉತ್ತಮ ಹಾಗೂ ಅಂದವಾದ ವಾಲ್‌ಪೇಪರ್‌ಗಳೂ ಇಲ್ಲಿ ಲಭ್ಯವಿರುತ್ತದೆ. ಕಿಟಕಿ, ಬಾಗಿಲುಗಳು ಹಾಗೂ ಪೀಠೋಪಕರಣಗಳಿಗೆ ಬೇಕಾಗುವ ಪಾಲಿಶ್ ಸಾಮಾಗ್ರಿಗಳೂ ಸಿಗುತ್ತದೆ.

ಗ್ರಾಹಕರ ನಿರಂತರ ಪ್ರೋತ್ಸಾಹದಿಂದಾಗಿ ಶ್ರೀ ರಾಘವೇಂದ್ರ ಸ್ಟೋರ‍್ಸ್ ಸಂಸ್ಥೆಯು ಜಿಲ್ಲೆಯಲ್ಲೇ ಒಂದು ಮಾದರಿ ಪೈಂಟ್ ಸಂಸ್ಥೆಯಾಗಿ ಬೆಳೆದು ನಿಲ್ಲುವಂತಾಗಿದೆ ಎಂದು ಸಂಸ್ಥೆಯ ಮಾಲಕ ಸತ್ಯಶಂಕರ ಸಾಮೆತ್ತಡ್ಕ ತಿಳಿಸಿದ್ದು, ಮುಂದಿನ ದಿನಗಳಲ್ಲೂ ಎಂದಿನಂತೆ ಸಹಕಾರವನ್ನು ಕೋರುವುದಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here