ಮುತ್ತಿನನಗರಿ ಪುತ್ತೂರಿಗೆ ಜೋಹಾಸ್ ಸಮೂಹ ಸಂಸ್ಥೆಗಳ ಮತ್ತೊಂದು ಕೊಡುಗೆ
ಪಡೀಲಿನಲ್ಲಿ ಜೋಹಾಸ್ ಸ್ಟೀಲ್ ಇಂಡಸ್ಟ್ರೀಸ್ ಶುಭಾರಂಭ

0

ಚಿತ್ರ: ಸಂತೋಷ್ ಮೊಟ್ಟೆತ್ತಡ್ಕ

ಪುತ್ತೂರು: ಸ್ಟೀಲ್ ಉದ್ಯಮದಲ್ಲಿ ಸುಮಾರು 30 ವರ್ಷಗಳ ಅನುಭವ ಹೊಂದಿರುವ ಜೋಹಾಸ್ ಸಮೂಹ ಸಂಸ್ಥೆಯ ಮತ್ತೊಂದು ಕೊಡುಗೆಯಾಗಿ ಸ್ಟೇನ್‌ಲೆಸ್ ಸ್ಟೀಲ್, ಪಾತ್ರೆಗಳು ಹಾಗೂ ಗೃಹೋಪಯೋಗಿ ವಸ್ತುಗಳ ತಯಾರಕರು ಹಾಗೂ ವಿತರಕ ಸಂಸ್ಥೆ ‘ಜೋಹಾಸ್ ಸ್ಟೀಲ್ ಇಂಡಸ್ಟ್ರೀಸ್’ ಸಂಸ್ಥೆಯು ಫೆ.17 ರಂದು ಪಡೀಲು ಎಂ.ಡಿ.ಎಸ್. ಎದುರಿನ ಕೃಷ್ಣ ಸೌಧ ಕಟ್ಟಡದಲ್ಲಿ ಶುಭಾರಂಭಗೊಂಡಿತು.

ನೂತನ ಸಂಸ್ಥೆಯ ಮಾಲಕ ತೋಮಸ್ ಫೆರ್ನಾಂಡೀಸ್‌ರವರ ಅತ್ತೆ ಜೋಸ್ಲಿನ್ ಪಿಂಟೋ ಹಾಗೂ ಸಹೋದರ ಜೋಕಿಂ ಫೆರ್ನಾಂಡೀಸ್‌ರವರು ಜೊತೆಗೂಡಿ ರಿಬ್ಬನ್ ಕತ್ತರಿಸಿ ಉದ್ಘಾಟಿಸಿ ಶುಭ ಹಾರೈಸಿದರು. ಸಂತ ಅಂತೋನಿ ಚರ್ಚ್‌ನ ಪ್ರಧಾನ ಧರ್ಮಗುರು, ಪ್ರಸ್ತುತ ಬೆಂಗಳೂರಿನ ಸೈಂಟ್ ಆಂಟನಿ ಫ್ರಾಯರಿ ಚರ್ಚ್‌ಗೆ ವರ್ಗಾವಣೆಗೊಳ್ಳಲಿರುವ ಪ್ರಶಾಂತ್ ಫೆರ್ನಾಂಡೀಸ್ ಹಾಗೂ ಬನ್ನೂರು ಚರ್ಚ್‌ಗೆ ನೂತನ ಧರ್ಮಗುರುಗಳಾಗಿ ಆಗಮಿಸಲಿರುವ ಬಾಲ್ತಜಾರ್ ಪಿಂಟೋರವರು ನೂತನ ಸಂಸ್ಥೆಗೆ ಪವಿತ್ರ ಜಲ ಸಿಂಪಡಿಸಿ ಆಶೀರ್ವಚನಗೈಯ್ದರು.

ಬಳಿಕ ಮಾತನಾಡಿದ ಬನ್ನೂರು ಚರ್ಚ್ ಧರ್ಮಗುರು ಪ್ರಶಾಂತ್ ಫೆರ್ನಾಂಡೀಸ್‌ರವರು, ಪ್ರಗತಿಯ ದಾರಿಯಲ್ಲಿ ಮನುಷ್ಯ ಸಾಗುವಂತಾಗಬೇಕು ಎಂದು ದೇವರು ಹೇಳಿದ್ದಾರೆ. ವ್ಯಕ್ತಿ ಪ್ರಗತಿ ಹೊಂದಿದಾಗ ನಾವು ಸಂತೋಷ ಪಡಬೇಕು. ಅದರಂತೆ ಜೀವನದಲ್ಲಿ ಪ್ರಗತಿ ಹೊಂದುತ್ತಾ ಬರುತ್ತಿರುವ ತೋಮಸ್ ದಂಪತಿಯನ್ನು ನಾವು ಶ್ಲಾಘಿಸುವಂತಾಗಬೇಕು. ಅದರಂತೆ ಇಂದಿಲ್ಲಿ ಉದ್ಘಾಟನೆಗೊಂಡ ಈ ನೂತನ ಸಂಸ್ಥೆಯು ಪ್ರಗತಿಪಥದಲ್ಲಿ ಸಾಗಲಿ ಎಂಬುದೇ ನಮ್ಮೆಲ್ಲರ ಹಾರೈಕೆಯಾಗಿದೆ. ದೇವರು ಪ್ರತಿಯೋವರಿಗೂ ಪ್ರತಿಭೆ ಕರುಣಿಸಿದ್ದಾನೆ. ಜೀವನದಲ್ಲಿ ಯಶಸ್ವಿ ಗಳಿಸುವುದು ನಮ್ಮ ಕೈಯಲ್ಲಿದೆ. ಯಾವುದು ಒಳ್ಳೇದು, ಯಾವುದು ಕೆಟ್ಟದು ನಮಗೆ ಗೊತ್ತಿದೆ. ನಮ್ಮಲ್ಲಿರುವ ಪ್ರತಿಭೆಯನ್ನು ಹುದುಗಿಡುವ ಬದಲು ಅದನ್ನು ಸಮಾಜದಲ್ಲಿ ತೋರ್ಪಡಿಸುವಂತಾದಾಗ ಜೀವನದಲ್ಲಿ ಮುಂದೆ ಬರಲು ಸಾಧ್ಯವಾಗುತ್ತದೆ ಎಂದು ಹೇಳಿ ಶುಭ ಹಾರೈಸಿದರು.

ರೋಟರಿ ಕ್ಲಬ್ ಪುತ್ತೂರು ಎಲೈಟ್ ಅಧ್ಯಕ್ಷ ಡಾ|ಪೀಟರ್ ವಿಲ್ಸನ್ ಪ್ರಭಾಕರ್, ಸುದಾನ ವಿದ್ಯಾಸಂಸ್ಥೆಯ ಕೋಶಾಧಿಕಾರಿ ಆಸ್ಕರ್ ಆನಂದ್, ಸೋಜಾ ಮೆಟಲ್ ಮಾರ್ಟ್‌ನ ದೀಪಕ್ ಮಿನೇಜಸ್, ಬನ್ನೂರು ಸಂತ ಅಂತೋನಿ ಚರ್ಚ್‌ನ 21 ಆಯೋಗಗಳ ಸಂಚಾಲಕ ಹಾಗೂ ಮಾಜಿ ಉಪಾಧ್ಯಕ್ಷ ಜೆರಿ ಪಾಯಿಸ್, ಸೇಡಿಯಾಪು ಕೋಸ್ಟಲ್ ಕೊಕನೆಟ್ ಇಂಡಸ್ಟ್ರೀನ ಡೆನ್ನಿಸ್ ಮಸ್ಕರೇನ್ಹಸ್, ಅಲೆಕ್ಸ್ ಗೊನ್ಸಾಲ್ವಿಸ್ ಕೃಷ್ಣನಗರ, ಪಡೀಲು ಕ್ರಿಸ್ಟಲ್ ಇಂಜಿನಿಯರಿಂಗ್ ವರ್ಕ್ಸ್‌ನ ವಾಲ್ಟರ್ ಡಿ’ಸೋಜ ಸಿದ್ಯಾಲ, ಕೃಷ್ಣನಗರ ನಮ್ಮ ಸ್ಟುಡಿಯೋದ ತೋಮಸ್ ಗೊನ್ಸಾಲ್ವಿಸ್, ಬನ್ನೂರು ಸಂತ ಅಂತೋನಿ ಚರ್ಚ್‌ನ ಕಾರ್ಯದರ್ಶಿ ಜೋಯ್ಸ್ ಡಿ’ಸೋಜ, ಮಾಜಿ ಕಾರ್ಯದರ್ಶಿ ಸಿರಿಲ್ ವಾಸ್, ನಿವೃತ್ತ ಕೆಇಬಿ ಉದ್ಯೋಗಿ ಪೀಟರ್ ಡಿ’ಸೋಜ, ಎಂಡಿಎಸ್ ಬ್ರದರ‍್ಸ್‌ನ ಲ್ಯಾನ್ಸಿ ಡಿ’ಸೋಜ, ಜೋನ್ ಕೆನ್ಯೂಟ್ ಮಸ್ಕರೇನ್ಹಸ್ ನೆಕ್ಕಿಲಾಡಿ, ಪ್ರಶಾಂತ್ ಕುಶನ್ ವರ್ಕ್ಸ್‌ನ ವಾಲ್ಟರ್ ರೆಬೆಲ್ಲೋ, ಸೋಜಾ ಅಲ್ಯೂಮಿನಿಯಂ ಇಂಡಸ್ಟ್ರೀಸ್‌ನ ಸುನಿಲ್ ಮಸ್ಕರೇನ್ಹಸ್, ವಿಲಿಯಂ ಗಲ್ಬಾವೋ ಪಡೀಲು, ಕೃಷ್ಣಸೌಧ ಕಟ್ಟಡ ಮಾಲಕ ಮನೋಹರ್, ಗೊನ್ಸಾಲ್ವಿಸ್ ಅರ್ಥ್‌ಮೂವರ‍್ಸ್‌ನ ಲಾರೆನ್ಸ್ ಗೊನ್ಸಾಲ್ವಿಸ್, ಬನ್ನೂರು ಚರ್ಚ್ ಸ್ಯಾಕ್ರಿಸ್ಟಿಯನ್ ಜೋನ್ ಡಿ’ಮೆಲ್ಲೋ, ಜೋನ್ ಲಸ್ರಾದೋ ಉರಮಾಲ್, ಜೋಕಿಂ ಮಿನೇಜಸ್ ಸೇಡಿಯಾಪು, ಲ್ಯಾನ್ಸಿ ಮಸ್ಕರೇನ್ಹಸ್ ಸೇಡಿಯಾಪು ಸಹಿತ ಹಲವರು ಆಗಮಿಸಿ ಶುಭ ಹಾರೈಸಿದ್ದಾರೆ.

ನೂತನ ಸಂಸ್ಥೆ ಜೋಹಾಸ್ ಸ್ಟೀಲ್ ಇಂಡಸ್ಟ್ರೀಸ್ ಮಾಲಕ ಹಾಗೂ ಬನ್ನೂರು ಸಂತ ಅಂತೋನಿ ಚರ್ಚ್‌ನ ಉಪಾಧ್ಯಕ್ಷ ತೋಮಸ್ ಫೆರ್ನಾಂಡೀಸ್ ಹಾಗೂ ವೀಡಾ ಪಿಂಟೋ ದಂಪತಿ ಸ್ವಾಗತಿಸಿ, ಗ್ರಾಹಕರ ಸಹಕಾರ ಕೋರಿದರು. ಈ ಸಂದರ್ಭದಲ್ಲಿ ಮಾಲಕ ತೋಮಸ್ ಫೆರ್ನಾಂಡೀಸ್‌ರವರ ಪುತ್ರರಾದ ಜೋಹಾಸ್, ಜೋಹಾನ್ ಹಾಗೂ ಅವರ ಕುಟುಂಬಿಕರು ಉಪಸ್ಥಿತರಿದ್ದರು.

-ಸ್ಟೇನ್‌ಲೆಸ್ ಸ್ಟೀಲ್, ಪಾತ್ರೆಗಳು ಹಾಗೂ ಗೃಹೋಪಯೋಗಿ ವಸ್ತುಗಳ ತಯಾರಕರು ಹಾಗೂ ವಿತರಕ ಸಂಸ್ಥೆ
-ಗ್ರಾಹಕರಿಗೆ ವಸ್ತುಗಳು ಹೋಲ್‌ಸೇಲ್ ಹಾಗೂ ರಿಟೇಲ್ ದರದಲ್ಲಿ ಲಭ್ಯ

ಸಹ ಸಂಸ್ಥೆಗಳು..
-ಜೋಹಾಸ್ ಸ್ಟೀಲ್ ಫ್ಯಾಕ್ಟರಿ, ಆನೆಮಜಲು
-ಮರೀನಾ ಸ್ಟೀಲ್ಸ್, ಕಡಬ

LEAVE A REPLY

Please enter your comment!
Please enter your name here