ಕುರಿಯ ಗ್ರಾಮದ ಮಾವಿನಕಟ್ಟೆ-ಬದಿನಾರು ರಸ್ತೆಯ ಕಳಪೆ ಕಾಂಕ್ರಿಟೀಕರಣ – ಪ್ರತಿಭಟನೆ, ಸೂಕ್ತ ತನಿಖೆಗೆ ಆಗ್ರಹ

0

ಪುತ್ತೂರು: ಆರ್ಯಾಪು ಗ್ರಾಮ ಪಂಚಾಯತ್ ವ್ಯಾಪ್ತಿಯ ಕುರಿಯದ ಮಾವಿನಕಟ್ಟೆ-ಬದಿನಾರು ರಸ್ತೆ ಕಳಪೆ ಕಾಂಕ್ರೀಟಕರಣ ಆಗಿದೆ ಎಂದು ಆರೋಪಿಸಿ ಸೂಕ್ತ ತನಿಖೆಗೆ ಆಗ್ರಹಿಸಿ ಬೂಡಿಯಾರು ಪುರುಷೋತ್ತಮ ರೈ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.

ಮಾವಿನಕಟ್ಟೆ-ಬದಿನಾರು ರಸ್ತೆಗೆ ಶಾಸಕರ ಅನುದಾನದಿಂದ ರೂ.10 ಲಕ್ಷ ಬಿಡುಗಡೆಗೊಂಡು ಕಾಂಕ್ರಿಟೀಕರಣಗೊಂಡಿದ್ದು ಈ ರಸ್ತೆಯು ತೀರಾ ಕಳಪೆ ಗುಣಮಟ್ಟದಿಂದ ಕೂಡಿದ್ದು ಕ್ಯೂರಿಂಗ್ ಆಗದೆ ಅಲ್ಲಲ್ಲಿ ಬಿರುಕು ಬಿಟ್ಟಿದೆ ಎಂದು ಆರೋಪಿಸಿ ಆರ್ಯಾಪು ಗ್ರಾ.ಪಂ.ಸದಸ್ಯ ಬೂಡಿಯಾರು ಪುರುಷೋತ್ತಮ ರೈ ಮತ್ತು ಇತರರು ಪ್ರತಿಭಟನೆ ನಡೆಸಿದ್ದಾರೆ.

ಬೂಡಿಯಾರು ಪುರುಷೋತ್ತಮ ರೈ ಮಾತನಾಡಿ ಈ ರಸ್ತೆ ಕಾಂಕ್ರಿಟೀಕರಣವು ಇಲ್ಲಿನ ಗುತ್ತಿಗೆದಾರರೊಬ್ಬರಿಂದ ಕೆಲಸ ಪ್ರಾರಂಭಗೊಂಡಿದೆ. ಗುತ್ತಿಗೆದಾರರು ಈವರೆಗೆ ಕಾಣಲು ಸಿಗಲಿಲ್ಲ. ಫೋನ್ ಮಾಡಿದರೂ ಸ್ಪಂದಿಸುತ್ತಿಲ್ಲ. ಗುತ್ತಿಗೆದಾರರ ರೈಟರ್ ಮೂಲಕ ಕೆಲಸ ನಡೆಸಲಾಗುತ್ತಿದೆ. ರಸ್ತೆಗೆ ಸರಿಯಾದ ನೀರಿಲ್ಲದೆ ಕ್ಯೂರಿಂಗ್ ಆಗಲಿಲ್ಲ. ರಸ್ತೆಗೆ 18 ಗಂಟೆ ಒಳಗಡೆ ನೀರು ಹಾಕಬೇಕು. ಅದಕ್ಕೆ 30ಗಂಟೆ ಆದರೂ ನೀರು ಹಾಕಲಿಲ್ಲ. ಬಳಿಕ ನೀರು ಹಾಕಿದರೂ ನೀರು ನಿಲ್ಲಲು ತೇವಾಂಶಕ್ಕೆ ಬೈಹುಲ್ಲು ಹಾಕಲಿಲ್ಲ. ಈ ಎಲ್ಲಾ ಕಾರಣಗಳಿಂದ ಕಾಂಕ್ರಿಟೀಕರಣ ಸರಿಯಾಗಲಿಲ್ಲ. ಸರಕಾರದ ಹಣವನ್ನು ಈ ರೀತಿ ಪೋಲು ಮಾಡಲಾಗುತ್ತದೆ. ಶಾಸಕರು ಇದರ ಬಗ್ಗೆ ಸುಮ್ಮನೆ ಕೂತಿದ್ದಾರೆ. ಶಾಸಕರು ಸ್ಥಳಕ್ಕೆ ಆಗಮಿಸಿ ಸೂಕ್ತ ತನಿಖೆ ನಡೆಸಬೇಕು ಎಂದು ಹೇಳಿದರು.

LEAVE A REPLY

Please enter your comment!
Please enter your name here