ಫೆ.18: ಮಾಣೆ ಜನಪ್ರಿಯ ಗಾರ್ಡನ್‌ನಲ್ಲಿ ಬೃಹತ್ ಮಿಹ್ರಾಜ್ ಮಜ್ಲಿಸ್ ಸುನ್ನಿ ಮಹಾಸಮ್ಮೇಳನ

0

ಪುತ್ತೂರು: ರಾಜ್ಯ ದಾರಿಮಿ ಉಲಮಾ ಒಕ್ಕೂಟದ ವತಿಯಿಂದ ಫೆ.18 ರಂದು ಮಾಣಿ ಜನಪ್ರಿಯ ಗಾರ್ಡನ್‌ನಲ್ಲಿ ಬೃಹತ್ ಸಭೆ ಮಿಹ್ರಾಜ್ ಮಜ್ಲಿಸ್ ಬೃಹತ್ ಸುನ್ನೀ ಮಹಾಸಮ್ಮೇಳನ ಮಾಣಿ ಜನಪ್ರಿಯ ಗಾರ್ಡನ್‌ನಲ್ಲಿ ನಡೆಯಲಿದೆ. ಎಂದು ದಾರಿಮಿ ಉಲಮಾ ಒಕ್ಕೂಟದ ಅದ್ಯಕ್ಷ ಎಸ್.ಬಿ.ದಾರಿಮಿ ಹಾಗೂ ಮತ್ತಿತರರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.


ವಿಶ್ವೋತ್ತರ ಧಾರ್ಮಿಕ ಪಂಡಿತ ಶೈಖುನಾ ಶಂಸುಲ್ ಉಲಮಾರ ಜ್ಞಾನ ಧಾರೆಯಿಂದ ಧನ್ಯಗೊಂಡ ದಕ್ಷಿಣ ಭಾರತದ ಪ್ರಸಿದ್ಧ ವಿದ್ಯಾಕೇಂದ್ರ ಕಲ್ಲಿಕೋಟೆಯ ಜಾಮಿಯಾ ದಾರುಸ್ಸಲಾಮ್ ನಂದಿ ಇದರ 47ನೇ ವಾರ್ಷಿಕ 15ನೇ ಘಟಿಕೋತ್ಸವ ಫೆ.24 ರಿಂದ 26 ರ ತನಕ ವೈವಿದ್ಯಪೂರ್ಣವಾಗಿ ನಡೆಯಲಿದೆ. ಶಾಂತಿಯೇ ಧರ್ಮ ಸಂಘರ್ಷವೇ ಅಧರ್ಮ ಎಂಬ ಪ್ರಮೇಯದೊಂದಿಗೆ ಸಮ್ಮೇಳನ ಜರಗಲಿದೆ. ಇದರ ಪೂರ್ವ ಪ್ರಚಾರವು ರಾಜ್ಯಾದ್ಯಂತ ನಡೆಯುತ್ತಿದೆ.

ಫೆ.18 ಶನಿವಾರ ಸಂಜೆ ಬೃಹತ್ ಮಿಹ್ರಾಜ್ ಮಜ್ಲಿಸ್ ಹಾಗೂ ಸುನ್ನೀ ಸಮಾವೇಶ ಮಾಣಿ ಜನಪ್ರಿಯ ಮೈದಾನದಲ್ಲಿ ನಡೆಯಲಿದೆ. ಸಂಜೆ 3ಕ್ಕೆ ಹಾಜಿ ಇಸ್ಮಾಯಿಲ್‌ರವರು ಧ್ವಜಾರೋಹಣಗೈಯ್ಯಲಿದ್ದಾರೆ. ಖಾಝಿ ತ್ವಾಕಾ ಅಹ್ಮದ್ ಮುಸ್ಲಿಯಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ದಾರುಸ್ಸಲಾಂ ಕಾಲೇಜಿನ ಕುಲಪತಿ ಶೈಖುನಾ ಏವಿ ಉಸ್ತಾದರು ಸಮಾರಂಭದ ಉದ್ಘಾಟನೆ ಮಾಡಲಿದ್ದಾರೆ. ಸಮಸ್ತ ಪ್ರಧಾನ ಕಾರ್ಯದರ್ಶಿ ಶೈಖುಲ್ ಜಾಮಿಯಾ ಆಲಿಕುಟ್ಟಿ ಉಸ್ತಾದ್ ದುಅಃ ನೆರವೇರಿಸಿ ಆಶೀರ್ವಚನ ನೀಡಲಿದ್ದಾರೆ.

ಕಾರ್ಯಕ್ರಮದಲ್ಲಿ ಅಸ್ಸೆಯ್ಯದ್ ಅಲೀ ತಂಙಳ್ ಕುಂಬೋಳ್, ಅಸ್ಸೆಯ್ಯದ್ ಝೈನುಲ್ ಆಬಿದೀನ್ ತಂಙಳ್ ಕರ್ನಾಟಕ ಜಂಇಯ್ಯತುಲ್ ಉಲಮಾದ ಅಸ್ಸೆಯ್ಯದ್ ಅಹ್ಮದ್ ಪೂಕೋಯ ತಂಙಳ್ ಪುತ್ತೂರು, ಶೈಖುನಾ ಮಾಹಿನ್ ಉಸ್ತಾದ್, ಅಬ್ದುಲ್ಲಾ ಉಸ್ತಾದ್ ಕೊಡಗು, ಬಂಬ್ರಾಣ ಅಬ್ದುಲ್ ಖಾದರ್ ಅಲ್ ಖಾಸಿಮಿ, ಉಸ್ಮಾನುಲ್ ಫೈಝಿ ಉಳ್ಳಾಲ, ಪಾತೂರು ಖಾಝಿ ಅಹ್ಮದ್ ಮುಸ್ಲಿಯಾರ್, ಬೊಳ್ಳೂರು ಅಲ್ ಅಝ್ಹರ್ ಫೈಝಿ ಭಾಗವಹಿಸಲಿದ್ದಾರೆ. ವಿಶೇಷ ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯ ಬಿ.ಎಮ್ ಫಾರೂಖ್, ಮಾಜಿ ಸಚಿವ ಯು.ಟಿ ಕಾದರ್, ಝಕರಿಯಾ ಹಾಜಿ ಜೋಕಟ್ಟೆ ಅಲ್ ಮುಝೈನ್, ಶರೀಫ್ ಜೋಕಟ್ಟೆ ವೈಟ್ ಸ್ಟೋನ್, ಸುಲ್ತಾನ್ ಗೋಲ್ಡ್ ಮುಖ್ಯಸ್ಥ ಅಬ್ದುರ್‌ರವೂಫ್, ಉದ್ಯಮಿ ಬೆಂಗಳೂರು ಬಿಎಮ್ ಉಮರ್ ಹಾಜಿ ಮತ್ತಿತರ ಗಣ್ಯರು ಭಾಗವಹಿಸಲಿದ್ದಾರೆ.

ಶಬೇ ಮಿಹ್ರಾಜ್ ದುಅಃ ಮಜ್ಲಿಸ್ ಸಾದಾತುಗಳ ಸಮಕ್ಷಮದಲ್ಲಿ ನಡೆಯಲಿದೆ. ಅಮೀರ್ ತಂಙಳ್ ಕಿನ್ಯ, ಮಹ್ಮೂದ್ ತಂಙಳ್, ಹಬೀಬುರ್ರಹ್ಮಾನ್ ತಂಙಳ್, ಅನಸ್ ತಂಙಳ್, ಶರಫುದ್ದೀನ್ ತಂಙಳ್, ಯಹ್ಯಾ ತಂಙಳ್, ಕುಕ್ಕಾಜೆ ಹುಸೇನ್ ತಂಙಳ್, ಜುನೈದ್ ಜಿಫ್ರಿ ತಂಙಳ್, ಅಕ್ರಮ್ ಅಲಿ ತಂಙಳ್, ಬಾತಿಷ್ ತಂಙಳ್, ತ್ವಾಹಾ ತಂಙಳ್ ಪ್ರಮುಖರು ಭಾಗವಹಿಸಲಿದ್ದಾರೆ. ಖ್ಯಾತ ವಾಗ್ಮಿ ಆಶಿಕ್ ದಾರಿಮಿ ಆಲಪ್ಪುಯ ಮಿಹ್ರಾಜ್ ಭಾಷಣ ಮಾಡಲಿದ್ದಾರೆ. ಧರ್ಮ ನಿಶೇಧಿಗಳ ವಿರುದ್ಧ ಸಂವಾದ ನಡೆಸಿ ನಾಸ್ತಿಕರನ್ನು ಬೆಚ್ಚಿಬೀಳಿಸಿದ ಶುಹೈಬ್ ಹೈತಮಿ ದಾರಿಮಿ ಪ್ರಮೇಯ ಭಾಷಣ ಮಾಡಲಿದ್ದಾರೆ. ಈ ವರ್ಷ ಸನದು ಪಡೆಯುವ ಯುವ ದಾರಿಮಿಗಳನ್ನು ಸಭೆಯಲ್ಲಿ ಸನ್ಮಾನಿಸಲಾಗುವುದು.
ದಾರಿಮಿ ಉಲಮಾಗಳು ಜಿಲ್ಲೆಯ ಅತ್ಯಧಿಕ ಮೊಹಲ್ಲಾಗಳಲ್ಲಿ ಖತೀಬ್, ಮುದರ್ರಿಸ್, ಮುಂತಾದ ಹುದ್ದೆಗಳನ್ನು ನಿರ್ವಹಿಸುತ್ತಿದ್ದಾರೆ. ಧಾರ್ಮಿಕ ಚಟುವಟಿಕೆಗಳ ಹೊರತಾಗಿ ಸಾಮಾಜಿಕ ಕಳಕಳಿಯೊಂದಿಗೆ ಸೇವಾ ಕಾರ್ಯಕ್ರಮಗಳನ್ನು ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಬೃಹತ್ ಇಸ್ಲಾಮಿಕ್ ಲೈಬ್ರರಿ, ರಿಸರ್ಚ್ ಸೆಂಟರ್, ಮತ್ತು ಭಾವೈಕ್ಯ ಸದನಗಳನ್ನು ಸ್ಥಾಪಿಸುವ ಇರಾದೆ ಹೊಂದಿದೆ ಎಂದು ಮಾಧ್ಯಮ ಮಿತ್ರರೊಂದಿಗೆ ದಾರಿಮಿ ಉಲಮಾ ಒಕ್ಕೂಟದ ಮುಖ್ಯಸ್ಥರಾದ ಎಸ್.ಬಿ ಮುಹಮ್ಮದ್ ದಾರಿಮಿ ತಿಳಿಸಿದರು.

ಪತ್ರಿಕಾ ಗೋಷ್ಠಿಯಲ್ಲಿ ಪ್ರಚಾರ ಸಮಿತಿ ಚೇರ್ಮನ್ ಎಲ್‌ಟಿ ರಝಾಕ್ ಹಾಜಿ, ಪ್ರಚಾರ ಸಮಿತಿ ಕನ್ವೀನರ್ ಕೆಎಲ್ ಉಮರ್ ದಾರಿಮಿ, ದಾರಿಮಿ ದಾರಿಮೀಸ್ ಜಿಲ್ಲಾ ಅದ್ಯಕ್ಷ ಬಿ ಅಬ್ದುಲ್ ಖಾದರ್, ತಬೂಕ್ ಅಬ್ದುರ್ರಹ್ಮಾನ್ ದಾರಿಮಿ ನಾಯಕರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here