ಬನ್ನೂರು ಅನಫಿ ಮಸೀದಿಯಲ್ಲಿ ಮದಿನೇಕಿ ದುನ್ ಫಿರ್‌ಸೆ ಆಮಂತ್ರಣ ಬಿಡುಗಡೆ

0

ಪುತ್ತೂರು: ಮಸ್ಜಿದ್ ಎ ನೂರಿ ಸುನ್ನಿ ಅನಫಿ ಜುಮ್ಮಾ ಮಸೀದಿ ಬನ್ನೂರು ಫೈಜಾನ್ ಎ ಮುಸ್ತಫಾ ಯಂಗ್‌ಮೆನ್ಸ್ ಅಸೋಸಿಯೇಶನ್ ಇದರ ಜಂಟಿ ಆಶ್ರಯದಲ್ಲಿ ಮದಿನೇಕಿ ದುನ್ ಫಿರ್‌ಸೆ ಕಾರ್ಯಕ್ರಮ ಫೆ.25 ಮತ್ತು 26ರಂದು ಬನ್ನೂರು ಮಸ್ಜಿದ್ ಎ ನೂರಿ ಸುನ್ನಿ ಅನಫಿ ಜುಮಾ ಮಸೀದಿ ವಠಾರದಲ್ಲಿ ನಡೆಯಲಿದ್ದು ಇದರ ಆಮಂತ್ರ ಪತ್ರಿಕೆ ಮಸೀದಿ ಸಭಾಂಗಣದಲ್ಲಿ ಬಿಡುಗಡೆಗೊಳಿಸಲಾಯಿತು.

ಮಸೀದಿ ಅಧ್ಯಕ್ಷ ಸೂಫಿ ರಜಬ್ ಅಲಿ ಬಿಡುಗಡೆಗೊಳಿಸಿದರು.

ಮಸೀದಿ ಹಿಮಾಂ ಮೌಲಾನಾ ಸೈಯದ್ ಸೈಫುಲ್ಲಾ ರಝ್ವಿ, ಅನಫಿ ಮಸೀದಿಯ ಮುಅಝ್ವಿನ್, ಮೌಲಾನಾ ರಿಯಾಝ್ ರಝ್ವಿ, ಅನಫಿ ಮಸೀದಿ ಕಮಿಟಿ ಉಪಾಧ್ಯಕ್ಷ ಮೌಲಾನಾ ಮೊಹಮ್ಮದ್ ಅಲಿ ಉಸ್ತಾದ್, ಕಡಬ ಕೇಪು ರಜ್ವಯ್ಯ ಮಸೀದಿಯ ಇಮಾಮ್, ಮಸೀದಿ ಕಮಿಟಿ ಉಪಾದ್ಯಕ್ಷ ರಿಯಾಝ್ ಕೌಸರ್, ಮುನೀರ್, ಫೈಜಾನಿಯ ಪುಸ್ತಫಾ, ಯಂಗ್‌ಮೆ ಅಸೋಸಿಯೇಶನ್ ಅಧ್ಯಕ್ಷ ಮುಸ್ತಕ್ ಅಹಮ್ಮದ್, ಮಸೀದಿ ಖಜಾಂಜಿ ಶೇಖ್ ಅಹಮ್ಮದ್, ಪ್ರಧಾನ ಕಾರ್ಯದರ್ಶಿ ಶೇಖ್ ಸುಬಾನ್, ಫಾರೂಕ್, ಮುನೀರ್, ಮಹಮ್ಮದ್ ಅಸ್ಬಕ್ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here