ಪುತ್ತೂರು: ಕಬಕದ ಬ್ಯಾಂಕ್‌ವೊಂದಕ್ಕೆ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಲಯದಲ್ಲಿ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ವಿಟ್ಲ ಮೂಲದ ಆರೋಪಿಯೊಬ್ಬರನ್ನು ಪುತ್ತೂರು ಪೊಲೀಸರು ಬಂಧಿಸಿದ್ದಾರೆ.
ವಿಟ್ಲ ಬೋಳಂತಿಮೊಗರು ನಿವಾಸಿ ಅಬ್ದುಲ್ ಗಫೂರ್ ಅವರ ಮಗ ಮೊಹಮ್ಮದ್ ಅನ್ವರ್ ಬಂಧಿತ ಆರೋಪಿ. 2017ರಲ್ಲಿ ಆರೋಪಿ ಮೊಹಮ್ಮದ್ ಅನ್ವರ್ ಅವರ ವಿರುದ್ಧ ಕಬಕದ ಬ್ಯಾಂಕ್‌ವೊಂದರಲ್ಲಿ ಸಾಲಕ್ಕೆ ಸಂಬಂಧಿಸಿ ವಂಚನೆ ಪ್ರಕರಣ ದಾಖಲಾಗಿತ್ತು. ಆರೋಪಿ ಬಳಿಕ ನ್ಯಾಯಾಲಯದಲ್ಲಿ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದರು. ನ್ಯಾಯಾಲಯ ಆರೋಪಿ ವಿರುದ್ಧ ವಾರಂಟ್ ಜಾರಿ ಮಾಡಿತ್ತು. ಪುತ್ತೂರು ಪೊಲೀಸರು ಆರೋಪಿಯನ್ನು ವಿಟ್ಲದಿಂದ ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.