ಸವಣೂರು ವಿದ್ಯಾರಶ್ಮಿಯಲ್ಲಿ ರೋಟರಿ ಕ್ಲಬ್ ಪೂರ್ವಾಧ್ಯಕ್ಷರುಗಳ ಸಮ್ಮೇಳನ

0

ಪುತ್ತೂರು: ಅಂತರ್ರಾಷ್ಟ್ರೀಯ ರೋಟರಿ ಸಂಸ್ಥೆಯ ರೋಟರಿ ಜಿಲ್ಲೆ 3181ರ ವ್ಯಾಪ್ತಿಯಲ್ಲಿರುವ ದ.ಕ., ಉಡುಪಿ, ಕೊಡಗು ಮತ್ತು ಚಾಮರಾಜನಗರ ಕ್ಲಬ್ ಗಳ ಪೂರ್ವಾಧ್ಯಕ್ಷರುಗಳ ಸಮ್ಮೇಳನ `ಸಮನ್ವಯ’ ಹೆಸರಿನಲ್ಲಿ ಫೆ.18ರಂದು ಸವಣೂರಿನ ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನ ಆಡಿಟೋರಿಯಂನಲ್ಲಿ ನಡೆಯಿತು. ಅಧ್ಯಕ್ಷತೆಯನ್ನು ವಹಿಸಿದ್ದ ರೋಟರಿ ಜಿಲ್ಲಾ ಗವರ್ನರ್ ಪ್ರಕಾಶ್ ಕಾರಂತ್ ಕಾರ್ಯಕ್ರಮ ಉದ್ಘಾಟಿಸಿದರು.

ಸಂಪನ್ಮೂಲ ವ್ಯಕ್ತಿಗಳಾಗಿ ರೋಟರಿ ಜಿಲ್ಲಾ ಪೂರ್ವ ಗವರ್ನರ್‌ಗಳಾದ ಡಾ| ಭಾಸ್ಕರ ಎಸ್., ಸುರೇಶ್ ಚಂಗಪ್ಪ, ರೋಟರಿ ಜಿಲ್ಲೆ 3182ರ ಪೂರ್ವ ಗವರ್ನರ್ ಅಭಿನಂದನ್ ಶೆಟ್ಟಿ ಹಾಗೂ ಜಿಲ್ಲಾ ಸಹ ತರಬೇತುದಾರ ಶೇಖರ್ ಶೆಟ್ಟಿ ಭಾಗವಹಿಸಿದರು. ರೋಟರಿ ಪೂರ್ವಾಧ್ಯಕ್ಷರುಗಳ ಸಂಸ್ಥೆಯ ಜಿಲ್ಲಾಧ್ಯಕ್ಷ ಕೆ.ಸೀತಾರಾಮ ರೈ ಸವಣೂರುರವರು ಸ್ವಾಗತಿಸಿದರು. ಸುಳ್ಯ ರೋಟರಿ ಕ್ಲಬ್ ಅಧ್ಯಕ್ಷ ಚಂದ್ರಶೇಖರ ಪೇರಾಲುರವರು ಪ್ರಾಸ್ತಾವಿಕವಾಗಿ ಮಾತನಾಡಿದರು. ರೋಟರಿ ವಲಯ ಸೇನಾನಿ ಪ್ರೀತಮ್ ಬಿ.ಕೆ, ರೋಟರಿ ಅಸಿಸ್ಟೆಂಟ್ ಗವರ್ನರ್ ಶಿವರಾಮ ಏನೇಕಲ್. ಸುಳ್ಯ ರೋಟರಿ ಕ್ಲಬ್ ಕಾರ್ಯದರ್ಶಿ ಮಧುರಾ ಎಂ.ಆರ್ ರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸವಣೂರು ವಿದ್ಯಾರಶ್ಮಿ ಸಂಸ್ಥೆಯ ಆಡಳಿತಾಧಿಕಾರಿ ಅಶ್ವಿನ್ ಎಲ್ ಶೆಟ್ಟಿ ರವರು ಕಾರ್ಯಕ್ರಮದಲ್ಲಿ ಸಹಕರಿಸಿದರು. ಗಾಯತ್ರಿ, ಶೋಭಿತಾ ಪ್ರಾರ್ಥನೆಗೈದರು. ವಿಶ್ವಾಸ್ ಶೆಣೈ ಪುತ್ತೂರು ಕಾರ್ಯಕ್ರಮ ನಿರೂಪಿಸಿದರು.

ತುಂಬಾ ಸಂತೋಷ ತಂದಿದೆ: ಸವಣೂರು ವಿದ್ಯಾರಶ್ಮಿಯಲ್ಲಿ ರೋಟರಿ ಕ್ಲಬ್ ನ ಪೂರ್ವಾಧ್ಯಕ್ಷರುಗಳ ಸಮ್ಮೇಳನ ನಡೆದಿರುವುದು ತುಂಬಾ ಸಂತೋಷ ತಂದಿದೆ ರೋಟರಿ ಸಂಸ್ಥೆಯ ಮೂಲಕ ನಡೆಯುತ್ತಿರುವ ಸಮಾಜಮುಖಿ ಕಾರ್ಯಕ್ರಮಗಳು ಸಮಾಜಕ್ಕೆ ಮಾದರಿ ಆಗಿದೆ.

ಕೆ.ಸೀತಾರಾಮ ರೈ ಸವಣೂರು. ಅಧ್ಯಕ್ಷರು. ರೋಟರಿ ಕ್ಲಬ್ ಪೂರ್ವಾಧ್ಯಕ್ಷರ ಸಂಸ್ಥೆ.

LEAVE A REPLY

Please enter your comment!
Please enter your name here