ನೇರಪಾವತಿ ಭರವಸೆ ನೀಡಿದನ್ನು ಘೋಷಣೆ ಮಾಡದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ; ಹೊರಗುತ್ತಿಗೆದಾರರ ನಗರಸಭೆ ಕಾರ್ಮಿಕರಿಂದ ಸಾಂಕೇತಿಕ ಪ್ರತಿಭಟನೆ

0

ಪುತ್ತೂರು: ನೇರಪಾವತಿ ಭರವಸೆ ನೀಡಿದನ್ನು ಘೋಷಣೆ ಮಾಡದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಸರಕಾರದ ವಿರುದ್ಧ ಪುತ್ತೂರು ನಗರಸಭೆ ಹೊರಗುತ್ತಿಗೆದಾರ ಚಾಲಕರು ಸಹಿತ ಇತರ ಕಾರ್ಮಿಕರು ಫೆ. 18ರಂದು ಬೆಳಿಗ್ಗೆ ನಗರಸಭೆ ಕಚೇರಿ ಎದುರು ಸಾಂಕೇತಿಕ ಪ್ರತಿಭಟನೆ ನಡೆಸಿದರು.

ಹೊರಗುತ್ತಿಗೆದಾರ ನೌಕರರ ಕರಾವಳಿ ವಿಭಾಗದ ಸಂಚಾಲಕ ಅಣ್ಣಪ್ಪ ಕಾರೆಕ್ಕಾಡು ಅವರು ಮಾತನಾಡಿ ಇತ್ತೀಚೆಗೆ ನಮ್ಮ ಬೇಡಿಕೆ ಕುರಿತು ನಡೆಸಿದ ಪ್ರತಿಭಟನೆಯಲ್ಲಿ ಚಾಲಕರಿಗೆ, ವಾಟರ್‌ಮೆನ್‌ಗಳಿಗೆ, ಡೇಟಾ ಆಪರೇಟರ್‌ಗಳು ಸಹಿತ ಹೊರುಗುತ್ತಿಗೆ ನೌಕರಾಗಿರುವ ಎಲ್ಲಾ ಕಾರ್ಮಿಕರನ್ನು ನೇರ ಪಾವತಿಗೊಳಪಡಿಸುವ ಕುರಿತು ಬಜೆಟ್‌ನಲ್ಲಿ ಘೋಷಣೆ ಮಾಡುತ್ತೇನೆಂದು ಮುಖ್ಯಮಂತ್ರಿಗಳು ಭರವಸೆ ನೀಡಿದ್ದರು. ಆ ಭರವಸೆಯು ಬಜೆಟ್‌ನಲ್ಲಿ ಈಡೇರಿಲ್ಲ.

ಈ ಕುರಿತು ಉತ್ತರ ಕರ್ನಾಟಕದ ಎಲ್ಲಾ ಹೊರಗುತ್ತಿಗೆದಾರ ಕಾರ್ಮಿಕರು ಸರಕಾರಕ್ಕೆ ದಿಕ್ಕಾರ ಕೂಗಿದ್ದಾರೆ. ಆದರೆ ನಾವಿಲ್ಲ ಧಿಕ್ಕಾರ ಕೂಗುವುದಿಲ್ಲ ಯಾಕೆಂದರೆ ಮುಂದಿನ ತಿಂಗಳೊಳಗಾಗಿ ಮುಖ್ಯಮಂತ್ರಿಗಳು ನಮಗೆ ನೇರಪಾವತಿ ಮಾಡಿ ಕೊಡುವ ನಂಬಿಕೆ ಇದೆ. ಈ ನಿಟ್ಟಿನಲ್ಲಿ ನಮ್ಮ ಪ್ರತಿಭಟನೆ ಸಾಂಕೇತಿಕ.

ಮುಂದಿನ ತಿಂಗಳು ನೇರಪಾವತಿಗೆ ನಮ್ಮನ್ನು ಸೇರಿಸಿಲ್ಲವಾದರೆ ಹೋರಾಟದ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ ಎಂದು ಎಚ್ಚರಿಸಿದರು. ಪೌರ ಕಾರ್ಮಿಕರ ಹೊರಗುತ್ತಿಗೆ ನೌಕರರ ಅಮಿತ್‌ರಾಜ್, ಕೂಸಪ್ಪ, ನಾಗೇಶ್ ಸಹಿತ ಹೊರಗುತ್ತಿಗೆ ನೌಕರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here