ಪುತ್ತೂರು ಜಾತ್ಯಾತೀತ ಜನತಾದಳದ ಪ್ರಧಾನ ಕಾರ್ಯದರ್ಶಿಯಾಗಿ ಮಹಾವೀರ ಜೈನ್ ನೇಮಕ

0

ಪುತ್ತೂರು: ಜಾತ್ಯಾತೀತ ಜನತಾದಳ ಪುತ್ತೂರು ವಿಧಾನಸಭಾ ಕ್ಷೇತ್ರದ ಪ್ರಧಾನ ಕಾರ್ಯದರ್ಶಿಯಾಗಿ ಮಹಾವೀರ ಜೈನ್‌ರವರನ್ನು ನೇಮಕ ಮಾಡಲಾಗಿದೆ. ಜಾತ್ಯಾತೀತ ಜನತಾದಳ ಜಿಲ್ಲಾಧ್ಯಕ್ಷ ಜಾಕೆ ಮಾಧವ ಗೌಡರ ಆದೇಶದ ಮೇರೆಗೆ ನೇಮಕ ಮಾಡಲಾಗಿದೆ ಎಂದು ಜಾತ್ಯಾತೀತ ಜನತಾದಳ ಪುತ್ತೂರು ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಎಂ.ಅಶ್ರಫ್ ಕಲ್ಲೇಗರವರು ತಿಳಿಸಿದ್ದಾರೆ.

ಆರ್ಯಾಪು ಗ್ರಾಮದ ಮೇಗಿನಪಂಜ ನಿವಾಸಿಯಾದ ಮಹಾವೀರ ಜೈನ್‌ರವರು 1980ರಿಂದ 85 ತನಕ ಕುಂಜೂರಪಂಜ ಸ.ಹಿ.ಪ್ರಾಥಮಿಕ ಶಾಲೆಯ ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿಯಾಗಿ, ಅಧ್ಯಕ್ಷನಾಗಿ ಸೇವೆ ಸಲ್ಲಿಸಿದರು. 1987 ರಿಂದ 90 ತನಕ ಕುಂಜೂರುಪಂಜ ಕ್ರಿಕೆಟ್ ಕ್ಲಬ್ ಕಾರ್ಯದರ್ಶಿಯಾಗಿ, ನಾಗರಿಕ ಸೇವಾ ಟ್ರಸ್ಟ್ ಗುರುವಾಯನಕೆರೆ ಇದರ ಕೃಷಿಕ ವೇದಿಕೆ ಪುತ್ತೂರು ತಾ. ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.

2005ರಲ್ಲಿ ಕುಂಜೂರುಪಂಜ ಹಾಲು ಉತ್ಪಾದಕರ ಸಂಘದ ರಚನೆ ಮಾಡಿ 5 ವರ್ಷಗಳ ಕಾಲ ಕಾರ್ಯನಿರ್ವಾಹಣಾಧಿಕಾರಿಯಾಗಿ, 2018 ರಿಂದ ಜಾತ್ಯಾತೀತ ಜನತಾ ದಳದ ಕಾರ್ಮಿಕ ಘಟಕ ಅಧ್ಯಕ್ಷರಾಗಿ, 2019ರಲ್ಲಿ ದ.ಕ.ಜಿ.ಜನತಾ ಕೃಷಿ ಕಾರ್ಮಿಕರ ಸಂಘ ರಚಿಸಿ ಅಧ್ಯಕ್ಷರಾಗಿ, 2020ರಲ್ಲಿ ಜಿಲ್ಲಾ ಕೃಷಿ ಕಾರ್ಮಿಕ ಸಹಕಾರಿ ಸಂಘ ರಚಿಸಿ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ.

LEAVE A REPLY

Please enter your comment!
Please enter your name here