ಅಂಬಿಕಾ ವಿದ್ಯಾಲಯದಲ್ಲಿ ಪುಲ್ವಾಮಾ ಯೋಧರ ಸಂಸ್ಮರಣಾ ಕಾರ್ಯಕ್ರಮ

0

ಫೆಬ್ರವರಿ 14 ಸಂಭ್ರಮಾಚರಣೆಯ ದಿನವಲ್ಲ, ಸಂಸ್ಮರಣಾ ದಿನ : ಶ್ರೀಕೃಷ್ಣ ಉಪಾಧ್ಯಾಯ


ಪುತ್ತೂರು: ಭಾರತದಲ್ಲಿ ಜೀವಿಸುವ ಪ್ರತಿಯೊಬ್ಬ ಪ್ರಜೆಯು ಯಾವುದೇ ಕಾರಣಕ್ಕೂ ತಾನು ಆ ರಾಜ್ಯದವ, ಈ ರಾಜ್ಯದವ ಎಂಬ ಮನೋಭಾವನೆಯನ್ನು ಬೆಳೆಸಿಕೊಳ್ಳದೆ, ರಾಜ್ಯ ವಿಂಗಡನೆಯ ಕಲ್ಪನೆಗೂ ಆಸ್ಪದ ಕೊಡದೆ ಏಕತೆಯಿಂದ ಜೀವನವನ್ನು ನಡೆಸಬೇಕು. ನಾನು ಭಾರತೀಯ ಎಂಬ ಭಾವನೆ ಪ್ರತಿಯೊಬ್ಬರಲ್ಲೂ ಮೂಡಬೇಕು. ಒಗ್ಗಟ್ಟು ನಮ್ಮ ಮೂಲ ಮಂತ್ರವಾಗಬೇಕು ಎಂದು ವಾಗ್ಮಿ ಶ್ರೀಕೃಷ್ಣ ಉಪಾಧ್ಯಾಯ ಹೇಳಿದರು.


ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯ ಅಂಬಿಕಾ ವಿದ್ಯಾಲಯ ಸಿ.ಬಿ.ಎಸ್.ಇ ಸಂಸ್ಥೆಯಲ್ಲಿ ಮಂಗಳವಾರ ಪುಲ್ವಾಮಾ ದುರಂತದಲ್ಲಿ ಹುತಾತ್ಮರಾದ ಸೈನಿಕರ ಸಂಸ್ಮರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.


ಫೆಬ್ರವರಿ 14 ನಮ್ಮ ದೇಶಕ್ಕಾಗಿ ಪ್ರಾಣತೆತ್ತ ಸೈನಿಕರನ್ನು ಸ್ಮರಿಸುವ ದಿನ. ಯಾವುದೇ ಸಂಭ್ರಮಾಚರಣೆಯ ದಿನವಲ್ಲ. ನಾವು ನೆಮ್ಮದಿಯಾಗಿ ನಿದ್ದೆ ಮಾಡುತಿದ್ದೇವೆ ಎಂದರೆ ಅದಕ್ಕೆ ಕಾರಣ ತಮ್ಮ ಪ್ರಾಣದ ಹಂಗು ತೊರೆದು ಗಡಿ ಕಾಯುವ ಸೈನಿಕರು. ಆದ್ದರಿಂದ ನಾವು ದೇಶವನ್ನು ಪ್ರೀತಿಸಬೇಕೇ ಹೊರತು ದೇಶದ್ರೋಹದ ಕೆಲಸವನ್ನು ಮಾಡಬಾರದು ಎಂದು ನುಡಿದರು.


ನಾವು ಸೈನಿಕರ ಕುರಿತು ಮಾತನಾಡುವಾಗ ಕೇವಲ ದೇಶಕ್ಕಾಗಿ ಪ್ರಾಣತೆತ್ತವರ ಕುರಿತು ಆಲೋಚಿಸುತ್ತೇವೆ. ಆದರೆ ಹೋರಾಟದಲ್ಲಿ ಅಂಗಗಳನ್ನು ಕಳೆದುಕೊಂಡವರ ಕುರಿತು ನಾವು ಗಮನವೇ ಹರಿಸುವುದಿಲ್ಲ. ಹಾಗಾಗಿ ಹುತಾತ್ಮರನ್ನು ನೆನೆಯುವುದರ ಜೊತೆಗೆ ಅಂಗ ವೈಕಲ್ಯತೆಯಿಂದ ಜೀವನ ಸಾಗಿಸಲು ತೊಂದರೆಯಾಗುತ್ತಿರುವ ಸೈನಿಕರ ಕುಟುಂಬದವರ ಕ?ಗಳಿಗೆ ಸ್ಪಂದಿಸಬೇಕು ಎಂದು ಅಭಿಪ್ರಾಯಪಟ್ಟರು.


ಕಾರ್ಯಕ್ರಮದಲ್ಲಿ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ, ಕೋಶಾಧಿಕಾರಿ ರಾಜಶ್ರೀ ನಟ್ಟೋಜ, ಪ್ರಾಂಶುಪಾಲೆ ಮಾಲತಿ ಡಿ ಭಟ್, ಉಪ ಪ್ರಾಂಶುಪಾಲೆ ಸುಜನಿ ಬೋರ್ಕರ್ ಹಾಗೂ ಶಿಕ್ಷಕ ಶಿಕ್ಷಕೇತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here