ರಾಜ್ಯಮಟ್ಟದ ‘ಕಾವ್ಯ ದಶಾವತಾರ’ ನೂಜಿಬಾಳ್ತಿಲದ ಸಮ್ಯಕ್ತ್ ಜೈನ್ ಆಯ್ಕೆ

0

ಪುತ್ತೂರು: ಸಾಹಿತ್ಯ ಹಾಗೂ ಸಾಮಾಜಿಕ ಕಾರ್ಯಗಳಿಂದ ಗುರುತಿಸಿಕೊಂಡಿರುವ ಸಾಧನಾ ರಾಷ್ಟ್ರೀಯ ಸಾಂಸ್ಕೃತಿಕ ಪ್ರತಿಷ್ಠಾನ ಮಂಗಳೂರು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ದ.ಕ. ಇದರ ವತಿಯಿಂದ ಫೆ.26ರಂದು ಮಂಗಳೂರು ಜಿಲ್ಲಾ ಅಂಬೇಡ್ಕರ್ ಭವನದಲ್ಲಿ ನಡೆಯುವ ನಾಡು ನುಡಿ ಸಾಹಿತ್ಯ ಸಮ್ಮೇಳನ 2023 ‘ಕಾವ್ಯ ದಶಾವತಾರ’ ಕಾರ್ಯಕ್ರಮಕ್ಕೆ ಯುವ ಬರಹಗಾರ ಸಮ್ಯಕ್ತ್ ಜೈನ್ ಆಯ್ಕೆಗೊಂಡಿರುತ್ತಾರೆ. ಮಂಡಳಿಯು ರಾಜ್ಯದ ವಿವಿಧ ಭಾಗಗಳಿಂದ ಸುಮಾರು ನೂರು ಜನ ಸಾಹಿತ್ಯ ದಿಗ್ಗಜರನ್ನು ಆಯ್ಕೆಮಾಡಿಕೊಂಡಿದೆ.


ಕಡಬ ತಾಲೂಕು ನೂಜಿಬಾಳ್ತಿಲ ಗ್ರಾಮದ ಹೊಸಂಗಡಿ ಬಸದಿ ಶ್ರೀಧರಣೇಂದ್ರ ಇಂದ್ರ ಹಾಗೂ ಮಂಜುಳಾ ದಂಪತಿ ಪುತ್ರರಾಗಿರುವ ಸಮ್ಯಕ್ತ್ ಜೈನ್ ಚಿಕ್ಕ ವಯಸ್ಸಿನಿಂದಲೇ ಸಾಹಿತ್ಯದ ಅಭಿರುಚಿಯನ್ನು ಹೊಂದಿದ್ದು ಈವರೆಗೆ ಮೂರು ಕೃತಿಗಳನ್ನು ಪ್ರಕಟಗೊಳಿಸಿರುತ್ತಾರೆ. ಅಲ್ಲದೆ ತಾಲೂಕು-ರಾಜ್ಯ-ಅಂತರ್ರಾಜ್ಯ-ಅಂತರಾಷ್ಟ್ರೀಯ ಮಟ್ಟದ ಸಾಹಿತ್ಯ ಗೋಷ್ಠಿಗಳಲ್ಲಿ ಭಾಗವಹಿಸಿ ಬಹುಮಾನ-ಸನ್ಮಾನಗಳಿಗೂ ಭಾಜನರಾಗಿರುತ್ತಾರೆ. ಇವರು ಪ್ರಸ್ತುತ ನೆಲ್ಯಾಡಿ ಸಾಫಿಯೆನ್ಶಿಯಾ ಬೆಥನಿ ಪ್ರಥಮ ದರ್ಜೆ ಕಾಲೇಜುನಲ್ಲಿ ಅಂತಿಮ ವರ್ಷದ ಪದವಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.

LEAVE A REPLY

Please enter your comment!
Please enter your name here