ಫೆ.21- ಪುಣ್ಚಪ್ಪಾಡಿ ಕುದ್ರೋಳಿ ಮಾಡ ಶ್ರೀ ಧರ್ಮರಸು ಉಳ್ಳಾಕುಲು ಪಿಲಿ ಭೂತ, ಕುಕ್ಕಳ ಪಂಜುರ್ಲಿ ದೈವಸ್ಥಾನದ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಪ್ರಾರಂಭ

0

ಪುತ್ತೂರು: ಪುಣ್ಚಪ್ಪಾಡಿ ಕುದ್ರೋಳಿ ಮಾಡ ಶ್ರೀ ಧರ್ಮರಸು ಉಳ್ಳಾಕುಲು ಪಿಲಿ ಭೂತ, ಕುಕ್ಕಳ ಪಂಜುರ್ಲಿ ದೈವಸ್ಥಾನದ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಫೆ. 21 ರಿಂದ 23 ರತನಕ ವಿವಿಧ ಕಾರ್‍ಯಕ್ರಮಗಳೊಂದಿಗೆ ನಡೆಯಲಿದೆ.


ಫೆ. 21 ರಂದು ಬೆಳಿಗ್ಗೆ ಸವಣೂರು ಪದ್ಮಾವತಿ ಬಸದಿ ಬಳಿಯಿಂದ ಮತ್ತು ಕುಮಾರಮಂಗಲ ಗಣೇಶ್ ನಿಡ್ವಣ್ಣಯರವರ ಮನೆಯಿಂದ ಹಸಿರು ಹೊರೆ ಕಾಣಿಕೆ ಮೆರವಣಿಗೆ ನಡೆಯಲಿದೆ. ಸಂಜೆ ಕ್ಷೇತ್ರಕ್ಕೆ ತಂತ್ರಿಗಳ ಆಗಮನ, ಬಳಿಕ ವಿವಿಧ ವೈದಿಕ ಕಾರ್‍ಯಕ್ರಮಗಳು ನಡೆಯಲಿದೆ.

ಫೆ. 22 ರಂದು ಪೂರ್ವಹ್ನ 6 ರಿಂದ ಗಣಹೋಮ, ಬೆಳಗ್ಗೆ 8.03 ಕ್ಕೆ ಶ್ರೀ ಧರ್ಮರಸು ಉಳ್ಳಾಕುಲು ಪಿಲಿ ಭೂತ, ಕುಕ್ಕಳ ಪಂಜುರ್ಲಿ ದೈವಗಳ ಪ್ರತಿಷ್ಠೆ ನಡೆಯಲಿದೆ. ಬೆಳಿಗ್ಗೆ 9 ರಿಂದ 12 ರತನಕ ವಿವಿಧ ಭಜನಾ ತಂಡಗಳಿಂದ ಭಜನೆ, ಸಂಜೆ 3 ರಿಂದ ಧಾರ್ಮಿಕ ಸಭಾ ಕಾರ್‍ಯಕ್ರಮದಲ್ಲಿ ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿಯವರು ಆಶೀರ್ವಚನ ನೀಡಲಿದ್ದಾರೆ. ಸಚಿವ ಎಸ್.ಅಂಗಾರ ಅಧ್ಯಕ್ಷತೆ ವಹಿಸಲಿದ್ದಾರೆ. ಅತಿಥಿಗಳಾಗಿ ಸವಣೂರು ಗ್ರಾ.ಪಂ. ಅಧ್ಯಕ್ಷೆ ರಾಜೀವಿ.ವಿ.ಶೆಟ್ಟಿ ಕೆಡೆಂಜಿ, ಕಡಬ ಠಾಣಾ ಪೊಲೀಸ್ ಉಪನಿರೀಕ್ಷಕ ಆಂಜನೇಯ ರೆಡ್ಡಿ, ಕಡಬ ತಾಲೂಕು ಶ್ರೀ.ಕ್ಷೇ.ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಮೇದಪ್ಪ ಗೌಡ, ದೈವಸ್ಥಾನದ ಸ್ಥಳ ದಾನಿ ದಯಾನಂದ ನಾಯಕ್ ಬೆಂಗಳೂರುರವರು ಭಾಗವಹಿಸಲಿದ್ದಾರೆ. ಸಂಜೆ 5 ರಿಂದ ಪುಣ್ಚಪ್ಪಾಡಿ ತಳಮನೆಯಿಂದ ಶ್ರೀ ಧರ್ಮರಸು ಉಳ್ಳಾಕಲು ಪಿಲಿ ಭೂತ, ಕುಕ್ಕಲ ಪಂಜುರ್ಲಿ ದೈವಗಳ ಭಂಡಾರ ಕುದ್ರೋಳಿ ಮಾಡ ಸಾನಿಧ್ಯಕ್ಕೆ ಆಗಮಿಸಲಿದೆ. ಸಂಜೆ 6 ರಿಂದ ಬಪ್ಪನಾಡು ಮೇಳದವರಿಂದ ಭಂಡಾರ ಚಾವಡಿ ಯಕ್ಷಗಾನ ಬಯಲಾಟ ನಡೆಯಲಿದೆ.


ಫೆ. 23 ರಂದು ಬೆಳಿಗ್ಗೆ 9 ರಿಂದ ಶ್ರೀ ಧರ್ಮರಸು ಉಳ್ಳಾಕುಲು ನೇಮೋತ್ಸವ, ಮಧ್ಯಾಹ್ನ ಅನ್ನಸಂತರ್ಪಣೆ, ಬಳಿಕ ಪಿಲಿ ಭೂತ ನೇಮೋತ್ಸವ ಹಾಗೂ ಸಂಜೆ 5 ರಿಂದ ಕುಕ್ಕಳ ಪಂಜುರ್ಲಿ ನೇಮೋತ್ಸವ ನಡೆಯಲಿದೆ ಎಂದು ದೈವಸ್ಥಾನದ ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷ ಅರಿಯಡ್ಕ ಕೃಷ್ಣ ರೈ ಪುಣ್ಚಪ್ಪಾಡಿ ತಳಮನೆ, ಗೌರವಾಧ್ಯಕ್ಷ ಗಣೇಶ್ ನಿಡ್ವಣ್ಣಾಯ ಕುಮಾರಮಂಗಲ. ಕಾರ್‍ಯದರ್ಶಿ ಹರೀಶ್ ತೋಟದಡ್ಕ,,ದೈವಸ್ಥಾನದ ಶ್ರೇಯೋಭಿವೃದ್ಧಿ ಟ್ರಸ್ಟ್‌ನ ಅಧ್ಯಕ್ಷ ಜಯರಾಮ ರೈ, ಪುಣ್ಚಪ್ಪಾಡಿ, ಕಾರ್‍ಯದರ್ಶಿ ಗಿರಿಶಂಕರ್ ಸುಲಾಯ ದೇವಸ್ಯ, ಕೋಶಾಧಿಕಾರಿ ಸುಧಾಕರ್ ರೈ ದೇವಸ್ಯ, ಪುಣ್ಚಪ್ಪಾಡಿ ತಳಮನೆಯ ಯಾಜಮಾನ ಬಾಲಕೃಷ್ಣ ರೈರವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here