ಸವಣೂರು ಸೀತಾರಾಮ ರೈಯವರ ರಶ್ಮಿ ನಿವಾಸದಲ್ಲಿ 17 ನೇ ವರುಷದ “ಸ್ನೇಹ ರಶ್ಮಿ”

0

ಪುತ್ತೂರು: ಸಹಕಾರ ರತ್ನ ಸವಣೂರು ಸೀತಾರಾಮ ರೈಯವರ ಅತಿಥ್ಯದಲ್ಲಿ ಸವಣೂರು ರಶ್ಮಿ ನಿವಾಸದಲ್ಲಿ 17 ನೇ ವರುಷದ “ಸ್ನೇಹ ರಶ್ಮಿ” ರೋಟರಿ ಇಂಟರ್ ಕ್ಲಬ್ ಫೆಲೋಶೀಫ್ ಮೀಟ್ ಫೆ. 18 ರಂದು ಜರಗಿತು.


ಸಮಾಜಕ್ಕೆ ಮಾದರಿ- ಪ್ರಕಾಶ್ ಕಾರಂತ್‌


ರೋಟರಿ ಕ್ಲಬ್ ಸುಳ್ಯ, ಸುಳ್ಯ ಸಿಟಿ, ಸುಬ್ರಹ್ಮಣ್ಯ, ಬೆಳ್ಳಾರೆ, ಪುತ್ತೂರು ಈಸ್ಟ್, ಲಯನ್ಸ್ ಕ್ಲಬ್ ಮತ್ತು ಇನ್ನರ್ ವೀಲ್ ಕ್ಲಬ್ ಸುಳ್ಯ ಇದರ ಸಹಯೋಗದಲ್ಲಿ ಜರಗಿದ ಈ ಕಾರ್‍ಯಕ್ರಮವನ್ನು ರೋಟರಿ ಜಿಲ್ಲಾ ಗವರ್ನರ್ ಪ್ರಕಾಶ್ ಕಾರಂತ್‌ರವರು ಉದ್ಘಾಟಿಸಿ, ಮಾತನಾಡಿ 118 ವರುಷಗಳ ಇತಿಹಾಸವನ್ನು ಹೊಂದಿರುವ ರೋಟರಿ ಸಂಸ್ಥೆಯು ಜನಮಾನಸದಲ್ಲಿ ತಮ್ಮದೇ ಅದ ಸ್ಥಾನವನ್ನು ವಿವಿಧ ಸೇವಾ ಕಾರ್‍ಯಗಳ ಮೂಲಕ ಉಳಿಸಿಕೊಂಡಿದೆ. ಸಹಕಾರ ರತ್ನ ಸವಣೂರು ಸೀತಾರಾಮ ರೈಯವರು ಸಾಮಾಜಿಕ ಕಳಕಳಿಯ ವ್ಯಕ್ತಿತ್ವದ ನಾಯಕರಾಗಿದ್ದು, ಇವರ ನೇತ್ರತ್ವದಲ್ಲಿ ನಡೆಯುವ ಸ್ನೇಹ ರಶ್ಮಿ ಕಾರ್‍ಯಕ್ರಮ ಸಮಾಜಕ್ಕೆ ಮಾದರಿಯಾಗಿದೆ ಎಂದರು.


ಸಮಾಜಮುಖಿ ಕಾರ್‍ಯ- ಕೇಶವ


ರೋಟರಿ ಡಿಜಿಇ ಎಚ್.ಆರ್.ಕೇಶವರವರು ಮಾತನಾಡಿ ರೋಟರಿ ಸಂಸ್ಥೆಯ ಮೂಲಕ ಸಮಾಜಮುಖಿ ಕಾರ್‍ಯ ನಡೆಯುತ್ತಿದೆ ಎಂದು ಹೇಳಿದರು.
ರೋಟರಿ ಡಿಜಿಎನ್ ವಿಕ್ರಮ್ ದತ್ತರವರು ಮಾತನಾಡಿ ಸೀತಾರಾಮ ರೈಯವರ ಸಮಾಜಮುಖಿ ಕಾರ್‍ಯದಿಂದ ಅವರ ಹೆಸರು ಪ್ರಸಿದ್ಧಿ ಪಡೆದಿದೆ ಎಂದು ಸಂತಸವನ್ನು ವ್ಯಕ್ತಪಡಿಸಿದರು.
ಸುಳ್ಯ ರೋಟರಿ ಅಧ್ಯಕ್ಷ ಚಂದ್ರಶೇಖರ್ ಪೇರಾಲು ಅಧ್ಯಕ್ಷತೆ ವಹಿಸಿದ್ದರು.


ರೋಟರಿ 25-26 ನೇ ಸಾಲಿನ ಡಿಜಿಎನ್ ರಾಮಕೃಷ್ಣ, ರೋಟರಿ ಆಸಿಸ್ಟೆಂಟ್ ಗವರ್ನರ್ ಶಿವರಾಂ ಏನೇಕಲ್, ರೋಟರಿ ಆಸಿಸ್ಟೆಂಟ್ ಗವರ್ನರ್ ಜಗಜೀವನ್‌ದಾಸ್ ರೈ ಎ, ರವರುಗಳು ಸಂದರ್ಭೋಚಿತವಾಗಿ ಮಾತನಾಡಿದರು.


ಸನ್ಮಾನ


ವೈದ್ಯರತ್ನ ಪ್ರಶಸ್ತಿ ಪುರಸ್ಕೃತ ಸವಣೂರಿನ ನಾಟಿ ವೈದ್ಯ ಇ.ಎಸ್.ವಾಸುದೇವ ಇಡ್ಯಾಡಿ, ಪಿಎಚ್‌ಡಿ ಪದವಿ ಪುರಸ್ಕೃತರಾದ ಹರಿಣಾಕ್ಷಿ ಕೇವಳ, ಹಾಗು ಕಾರ್‍ಯಕ್ರಮದ ಸಂಘಟಕ ಸವಣೂರು ಕೆ.ಸೀತಾರಾಮ ರೈ ದಂಪತಿಯನ್ನು ಸನ್ಮಾನಿಸಲಾಯಿತು.


ವೇದಿಕೆಯಲ್ಲಿ ರೋಟರಿ ಸುಳ್ಯ ಅಧ್ಯಕ್ಷ ಮುರಳಿಧರ್ ರೈ, ರೋಟರಿ ಸುಬ್ರಹ್ಮಣ್ಯ ಅಧ್ಯಕ್ಷ ಗೋಪಾಲ್ ಎಣ್ಣೆಮಜಲು, ಬೆಳ್ಳಾರೆ ರೋಟರಿ ಉಪಾಧ್ಯಕ್ಷ ಶಶಿಧರ್, ರೋಟರಿ ಪುತ್ತೂರು ಈಸ್ಟ್ ಅಧ್ಯಕ್ಷ ಶರತ್ ಕುಮಾರ್ ರೈ ದೇವಸ್ಯ, ಸುಳ್ಯ ಲಯನ್ಸ್ ಕ್ಲಬ್ ಅಧ್ಯಕ್ಷ ರೂಪಶ್ರೀ ಜೆ.ರೈ, ಸುಳ್ಯ ಇನ್ನರ್ ವೀಲ್ ಕ್ಲಬ್ ಅಧ್ಯಕ್ಷ ನಯನ ಹರಿಪ್ರಸಾದ್, ರೋಟರಿ ಸುಲ್ಯ ಕಾರ್‍ಯದರ್ಶಿ ಮಧುರಾ, ಲಯನ್ಸ್ ಕ್ಲಬ್ ಸುಳ್ಯ ಕಾರ್‍ಯದರ್ಶಿ ದೀಪಕ್ ಕುತ್ತಮುಟ್ಟೆ, ರೋಟರಿ ಸುಳ್ಯ ಸಿಟಿ ಕಾರ್‍ಯದರ್ಶಿ ಶಿವಪ್ರಸಾದ್, ರೋಟರಿ ಸುಬ್ರಹ್ಮಣ್ಯ ಕಾರ್‍ಯದರ್ಶಿ ರವಿ ಕಕ್ಕೆಪದವು, ರೋಟರು ಬೆಳ್ಳಾರೆಯ ಕಾರ್‍ಯದರ್ಶಿ ರವೀಂದ್ರ ಗೌಡ, ರೋಟರಿ ಪುತ್ತೂರು ಈಸ್ಟ್ ಕಾರ್‍ಯದರ್ಶಿ ಶಶಿಕಿರಣ್ ರೈ, ಸುಳ್ಯ ಇನರ್ ವೀಲ್ ಕ್ಲಬ್ ಕಾರ್‍ಯದರ್ಶಿ ಸವಿತಾ ನಾರ್ರ್‍ಅಕೋಡು, ಸವಣೂರು ಸೀತಾರಾಮ ರೈಯವರ ಪತ್ನಿ ಕಸ್ತೂರು ಕಲಾ ಎಸ್.ರೈ, ವಿದ್ಯಾರಶ್ಮಿ ವಿದ್ಯಾಲಯದ ಆಡಳಿತಾಧಿಕಾರಿ ಆಶ್ವಿನ್ ಎಲ್ ಶೆಟ್ಟಿ, ರಶ್ಮಿ ಆಶ್ವಿನ್ ಶೆಟ್ಟಿ, ವಿದ್ಯಾರಶ್ಮಿ ವಿದ್ಯಾಲಯದ ಪ್ರಾಂಶುಪಾಲ ಸೀತಾರಾಮ ಕೇವಳರವರುಗಳು ಉಪಸ್ಥಿತರಿದ್ದರು.


ಕಾರ್‍ಯಕ್ರಮದ ಆತಿಥ್ಯ ವಹಿಸಿದ್ದ, ಸವಣೂರು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಸವಣೂರು ಸೀತಾರಾಮ ರೈ ಸ್ವಾಗತಿಸಿ, ನ್ಯಾಯವಾದಿ ಜಯಪ್ರಕಾಶ್ ರೈ ಸುಳ್ಯ ವಂದಿಸಿದರು. ದಳ ಸುಬ್ರಾಯ ಭಟ್ ಕಾರ್‍ಯಕ್ರಮ ನಿರೂಪಿಸಿದರು. ಸಭಾ ಕಾರ್‍ಯಕ್ರಮದ ಮೊದಲು ಜಗದೀಶ್ ಆಚಾರ್ಯ ಮತ್ತು ಬಳಗದವರಿಂದ ಸಂಗೀತ ಗಾನ ಸಂಗಮ ಒಂದು ತಾಸು ನಡೆಯಿತು.


ಪ್ರೀತಿ- ಸ್ನೇಹವನ್ನು ಉಳಿಸುವ ಕಾರ್‍ಯಕ್ರಮ
ಸವಣೂರು ರಶ್ಮಿ ನಿವಾಸದಲ್ಲಿ ಸ್ನೇಹ ರಶ್ಮಿ ಕಾರ್‍ಯಕ್ರಮವನ್ನು ಕಳೆದ 16 ವರುಷಗಳಿಂದ ಹಮ್ಮಿಕೊಳ್ಳುತ್ತಿದ್ದೇನೆ. ಇದು 17 ನೇ ವರುಷದ ಕಾರ್‍ಯಕ್ರಮವಾಗಿದ್ದು, ರೋಟರಿ ಮತ್ತು ಲಯನ್ಸ್ ಸಂಸ್ಥೆಯ ಸದಸ್ಯರುಗಳನ್ನು ಮತ್ತು ಊರವರನ್ನು ಸೇರಿಸಿಕೊಂಡು, ಸಮಾಜದಲ್ಲಿ ಸ್ನೇಹ-ಪ್ರೀತಿಯನ್ನು ಉಳಿಸುವ ಉದ್ದೇಶದಿಂದ ಸ್ನೇಹ ರಶ್ಮಿ ಕಾರ್‍ಯಕ್ರಮ ನಡೆಸುತ್ತಿದ್ದೇನೆ. ಜಾತಿ ಮತ್ತು ರಾಜಕೀಯ ಭೇದವಿಲ್ಲದೇ ಎಲ್ಲರು ಕಾರ್‍ಯಕ್ರಮದಲ್ಲಿ ಸೇರುವುದು ತುಂಬಾ ಸಂತೋಷದ ಕ್ಷಣವಾಗಿದೆ.
-ಸವಣೂರು ಕೆ.ಸೀತಾರಾಮ ರೈ ,ಸಂಚಾಲಕರು ವಿದ್ಯಾರಶ್ಮಿ ವಿದ್ಯಾಲಯ ಸವಣೂರು

ಚಿತ್ರ- ಕೃಷ್ಣ ಪುತ್ತೂರು:

LEAVE A REPLY

Please enter your comment!
Please enter your name here