ರೆಂಜಿಲಾಡಿ ಆನೆ ದಾಳಿ ಪ್ರಕರಣ; ಸಚಿವರು,ಜಿಲ್ಲಾಧಿಕಾರಿ ಸ್ಥಳಕ್ಕೆ ಬಾರದೆ ಶವ ತೆಗೆಯಲು ಬಿಡುವುದಿಲ್ಲ…

0

ಅರಣ್ಯಾಧಿಕಾರಿ, ಪೊಲೀಸ್ ಇಲಾಖೆಯ ವಿರುದ್ಧ ಸ್ಥಳೀಯರ ಆಕ್ರೋಶ-ತುಸು ಉದ್ವಿಘ್ನ ಸ್ಥಿತಿ ನಿರ್ಮಾಣ

ಕಡಬ: ರೆಂಜಿಲಾಡಿ ಗ್ರಾಮದ ಇಬ್ಬರು ಆನೆ ದಾಳಿಗೆ ಒಳಗಾಗಿ ಮೃತಪಟ್ಟ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯ ವಿರುದ್ಧ ಮತ್ತು ಆನೆ ಸಮಸ್ಯೆಯ ಬಗ್ಗೆ ವ್ಯಕ್ತಿಯೋರ್ವರು ಈ ಹಿಂದೆ ಮಾಡಿದ್ದ ವೀಡಿಯೋವನ್ನು ಕಡಬ ಪೊಲೀಸರು ಡಿಲೀಟ್ ಮಾಡಿರುವ ಹಿನ್ನಲೆಯಲ್ಲಿ ಮಾತಿನ ಚಕಮಕಿ ನಡೆದು ತುಸು ಉದ್ಘಿಘ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಸ್ಥಳಕ್ಕೆ ಸಚಿವರು, ಜಿಲ್ಲಾಧಿಕಾರಿ ಬಾರದೆ ಶವ ಸಂಸ್ಕಾರಕ್ಕೆ ಅವಕಾಶ ನೀಡಲಾಗುವುದಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಈ ಭಾಗದಲ್ಲಿ ನಿರಂತರ ಆನೆ ಹಾವಳಿ ಆಗುತ್ತಿದ್ದರೂ ಅರಣ್ಯ ಇಲಾಖೆ ತೀವ್ರ ನಿರ್ಲಕ್ಷ್ಯ ವಹಿಸುತ್ತಿದೆ ಎಂಬ ಆರೋಪ ಸಾರ್ವಜನಿಕರಿಂದ ವ್ಯಕ್ತವಾಗುತ್ತಿದೆ.

ವೀಡಿಯೋ ಡಿಲಿಟ್ ಮಾಡಿದ ಪೋಲಿಸರು!
ಕೆಲ ದಿನಗಳ ಹಿಂದೆ ಮರ್ದಾಳದ ಸಂತೋಷ್ ಎಂಬವರು ಆನೆ ಸಮಸ್ಯೆಯ ಬಗ್ಗೆ ವರದಿ ತಯಾರಿಸಿ ವೀಡಿಯೋ ಮಾಡಿ ಯೂಟ್ಯೂಬ್ ನಲ್ಲಿ ಅಪ್ಲೋಡ್ ಮಾಡಿದ್ದರು. ಈ ಬಗ್ಗೆ ಐತ್ತೂರು ಪಿಡಿಓ ಅವರು ದೂರು ನೀಡಿದ್ದ ಹಿನ್ನೆಲೆಯಲ್ಲಿ ಕಡಬ ಪೋಲಿಸರು ವೀಡಿಯೋ ಡಿಲೀಟ್ ಮಾಡಿದ್ದರು. ಈ ವಿಚಾರವೂ ಪ್ರಸ್ತಾಪವಾಗಿ ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಸ್ಥಳದಲ್ಲಿ ಎಲ್ಲರೂ ಇಲಾಖಾ ಅಧಿಕಾರಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸುತ್ತಿದ್ದು, ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.

ಮೃತ ರಂಜಿತಾ
ಮೃತ ರಮೇಶ್ ರೈ

LEAVE A REPLY

Please enter your comment!
Please enter your name here