ಪುತ್ತೂರು: ಸೇವೆ ಮಾಡಿ ಎಂಬ ಭಗವಾನ್ ಅವರ ಸಂದೇಶದಂತೆ ನಿರಂತರ ಆರೋಗ್ಯ ಸೇವೆ ಮಾಡುತ್ತಿರುವ ಪುತ್ತೂರಿನ ಶ್ರೀ ಸತ್ಯಸಾಯಿ ಮಂದಿರದಲ್ಲಿ ಫೆ.21 ರಂದು 52 ನೇ ಉಚಿತ ನೇತ್ರ ಚಿಕಿತ್ಸಾ ಶಿಬಿರದ ಉದ್ಘಾಟನೆ ಬೆಳಿಗ್ಗೆ ನಡೆಯಿತು.
ಶ್ರೀ ಸತ್ಯಸಾಯಿ ಸೇವಾ ಸಮಿತಿ, ಶ್ರೀ ಬೈಂದೂರು ಪ್ರಭಾಕರ ರಾವ್ ಮೆಮೋರಿಯಲ್ ಟ್ರಸ್ಟ್ ಪುತ್ತೂರು, ದ.ಕ.ಜಿಲ್ಲಾ ಅಂಧತ್ವ ಹತೋಟಿ ಸಂಸ್ಥೆ ಮಂಗಳೂರು, ಜಿಲ್ಲಾ ವೆನ್ ಲಾಕ್ ಸಂಚಾರಿ ನೇತ್ರ ಚಿಕಿತ್ಸಾ ಘಟಕ ಮಂಗಳೂರು, ಕೆ.ಎಂ.ಸಿ ಆಸ್ಪತ್ರೆ ಮಂಗಳೂರು, ಸರಕಾರಿ ಆಸ್ಪತ್ರೆ ಪುತ್ತೂರು ಇದರ ಸಹಯೋಗದಲ್ಲಿ ನಡೆದ ಶಿಬಿರವನ್ನು ಕೆ ಎಂ ಸಿ ಆಸ್ಪತ್ರೆ ಡಾ. ಊರ್ಜಾ ಶರ್ಮ ಅವರು ದೀಪ ಪ್ರಜ್ವಲಿಸುವ ಮೂಲಕ ಉದ್ಘಾಟಿಸಿದರು.

ನೇತ್ರಾಧಿಕಾರಿ ಡಾ. ಶಾಂತರಾಜ್ ಶಿಬಿರದ ಕುರಿತು ಸಲಹೆ ಸೂಚನೆ ನೀಡಿ ಕನ್ನಡಕ ಅಗತ್ಯತೆ ಇರುವವರಿಗೆ ಮಾ.12 ಕ್ಕೆ ಬೆಳಿಗ್ಗೆ ಕನ್ನಡ ಕೊಡಲಾಗುತ್ತದೆ. ಸಣ್ಣ ಪುಟ್ಟ ಸಮಸ್ಯೆಗೆ ಔಷದೋಪಚಾರ ನೀಡಿ, ಪೊರೆ ಶಸ್ತ್ರಚಿಕಿತ್ಸೆಗೆ ಮಂಗಳೂರು ವೆನ್ ಲಾಕ್ ಆಸ್ಪತ್ರೆಗೆ ಕರೆದೊಯ್ಯಲಾಗುತ್ತದೆ ಎಂದು ಮಾಹಿತಿ ನೀಡಿದರು.
ನೇತ್ರಾಧಿಕಾರಿ ಅನಿಲ್ ರಾಮಾನುಜಮ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪ್ರಮುಖಾ ಟಿ ರೈ , ಚಿತ್ರಾ ರೈ ಪ್ರಾರ್ಥಿಸಿದರು. ಟ್ರಸ್ಟಿನ ಅಧ್ಯಕ್ಷ ಡಾ.ಸತ್ಯ ಸುಂದರ ರಾವ್ ಸ್ವಾಗತಿಸಿದರು. ಆದ್ಯಾತ್ಮಿಕ ಸಂಯೋಜಕ ದಯಾನಂದ ಕೆ.ಎಸ್ ವಂದಿಸಿದರು. ಮಂದಿರದ ಸಂಚಾಲಕ ರಘುನಾಥ್ ರೈ ಕಾರ್ಯಕ್ರಮ ನಿರೂಪಿಸಿದರು. ಪದ್ಮನಾಭ ನಾಯಕ್ ವಿವಿಧ ಕಾರ್ಯಕ್ರಮ ನಿರ್ವಹಿಸಿದರು.