ಕೆ.ಎಸ್.ಟಿ.ಎ. ದ.ಕ ಜಿಲ್ಲಾ ಸಮಿತಿ ವತಿಯಿಂದ ’ಬೆಳ್ಳಿ ಬೆಳಕು’ ಟೈಲರ್ ಸಂಸ್ಥಾಪನಾ ದಿನಾಚರಣೆಯ ಟೈಲರ್ಸ್ ಡೇ ಸಂಚಿಕೆ ಬಿಡುಗಡೆ

0

ಪುತ್ತೂರು: ಕರ್ನಾಟಕ ಸ್ಟೇಟ್ ಟೈಲರ್ ಅಸೋಸಿಯೇಷನ್ ಇದರ ಸಂಸ್ಥಾಪನಾ ದಿನಾಚರಣೆಯ ಅಂಗವಾಗಿ ಮಾ.7ರಂದು 24 ವರ್ಷ ಕಳೆದು 25 ವರ್ಷಕ್ಕೆ ಬೆಳಕು ಚೆಲ್ಲುವ ಕಾರ್ಯಕ್ರಮ ’ಬೆಳ್ಳಿ ಬೆಳಕು’ ಎಂಬ ಸಂಚಿಕೆಯನ್ನು ಜಿಲ್ಲಾಧ್ಯಕ್ಷ ಜಯಂತ ಉರ್ಲಾಂಡಿಯವರ ನೇತೃತ್ವದಲ್ಲಿ ಮಂಗಳೂರಿನ ಟೈಲರ್ ಭವನದಲ್ಲಿ ಬಿಡುಗಡೆ ಮಾಡಲಾಯಿತು.

ಮಂಗಳೂರಿನ ಪುರಭವನದಲ್ಲಿ ನಡೆಯಲಿರುವ ಟೈಲರ್ಸ್ ಡೇ ಕಾರ್ಯಕ್ರಮದಲ್ಲಿ ಜಿಲ್ಲೆಯ ಎಲ್ಲಾ ಶಾಸಕರು, ಸಚಿವರುಗಳು, ಇನ್ನಿತರ ಅತಿಥಿಗಳ ಸಮ್ಮುಖದಲ್ಲಿ ಜಿಲ್ಲೆಯ ಎಲ್ಲಾ 8 ತಾಲೂಕು ಸಮಿತಿಯ ಹಿರಿಯ ವೃತ್ತಿ ಬಾಂಧವರಿಗೆ ಸನ್ಮಾನ ಹಾಗೂ ಸಹಾಯಧನ, ತೀರ ಬಡ ವೃತ್ತಿಬಾಂಧವರಿಗೆ ಸಹಾಯಧನ ಹಾಗೂ ಇನ್ನಿತರ ಕಾರ್ಯಕ್ರಮಗಳು ಜರಗಲಿರುವುದು.

ಈ ಸಂದರ್ಭದಲ್ಲಿ ರಾಜ್ಯಾಧ್ಯಕ್ಷರಾದ ನಾರಾಯಣ ಬಿ.ಎ., ಪ್ರಧಾನ ಕಾರ್ಯದರ್ಶಿ ಪ್ರಜ್ವಲ್ ಕುಮಾರ್, ನಿಕಟಪೂರ್ವ ಕಾರ್ಯದರ್ಶಿ ವಸಂತ್ ಬಿ., ರಾಜ್ಯ ಉಪಾಧ್ಯಕ್ಷ ಸುರೇಶ್ ಸಾಲಿಯಾನ್, ದ.ಕ ಜಿಲ್ಲಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಲಿಗೋಧರ್ ಸುಳ್ಯ, ಕೋಶಾಧಿಕಾರಿ ಈಶ್ವರ್ ಕುಲಾಲ್, ರಾಜ್ಯ ಆಂತರಿಕ ಲೆಕ್ಕ ಪರಿಶೋಧಕರಾದ ರಘುನಾಥ್ ಬಿ. ಪುತ್ತೂರು, ಜಿಲ್ಲಾ ಜೊತೆ ಕಾರ್ಯದರ್ಶಿ ಚಿತ್ರಾ ಕುಂಬ್ರ, ಜಿಲ್ಲಾ ಸದಸ್ಯ ಶಂಭು ಬಲ್ಯಾಯ ನರಿಮೊಗರು, ವಿಶ್ವನಾಥ್ ರೈ ಕುಂಬ್ರ, ಪುತ್ತೂರು ಕ್ಷೇತ್ರ ಸಮಿತಿ ಅಧ್ಯಕ್ಷ ಜಯರಾಮ್ ಬಿ.ಎನ್, ಪ್ರಧಾನ ಕಾರ್ಯದರ್ಶಿ ಉಮಾ ಯು ನಾಯ್ಕ್ ಹಾಗೂ ಜಿಲ್ಲೆಯ 8 ತಾಲೂಕಿನ ಪದಾಧಿಕಾರಿಗಳು ಸದಸ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here