ಕೃಷ್ಣನಗರ ಹಿ.ಪ್ರಾ.ಶಾಲೆಯಲ್ಲಿ ವಿದ್ಯಾರ್ಥಿಗಳಿಂದ ವ್ಯಾಪಾರ ಮೇಳ

0

ಪುತ್ತೂರು: ಕೃಷ್ಣನಗರ ಹಿ.ಪ್ರಾ.ಶಾಲೆಯಲ್ಲಿ ವಿದ್ಯಾರ್ಥಿಗಳಿಂದ ವ್ಯಾಪಾರ ಮೇಳ ನಡೆಯಿತು. ನಗರಸಭಾ ಸದಸ್ಯೆ ಲೀಲಾವತಿ ವಿದ್ಯಾರ್ಥಿಗಳಿಂದ ವಸ್ತುಗಳನ್ನು ಖರೀದಿ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಮೇಳದಲ್ಲಿನ ವಿವಿಧ ಬಗೆಯ ತಿಂಡಿ ತಿನಿಸುಗಳು, ಸಾವಯವ ತರಕಾರಿಗಳು, ಸಪ್ತ ಕಂಪೆನಿಯ ಆಹಾರ ಉತ್ಪನ್ನಗಳು, ಕಂಪನಿಯಿಂದಲೇ ನೇರ ಖರೀದಿಸಿದ ರೆಡಿಮೇಡ್ ಬಟ್ಟೆಗಳು ಗ್ರಾಹಕರನ್ನು ಆಕರ್ಷಿಸಿತು. ಕಾರ್ಯಕ್ರಮದಲ್ಲಿ ಎಸ್ ಡಿಎಂಸಿ ಅಧ್ಯಕ್ಷ ಗೋಪಾಲ ಪೂಜಾರಿ, ಉಪಾಧ್ಯಕ್ಷ ರೆಹಮತ್, ಮುಖ್ಯಗುರು ಮರಿಯಮ್ಮ, ಸಹಶಿಕ್ಷಕಿ ನಾಗವೇಣಿ, ಶ್ರುತಿ, ಪೋಷಕರು ಉಪಸ್ಥಿತರಿದ್ದರು. ಶಿಕ್ಷಕಿ ಪ್ರತಿಭಾ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here