ಇರ್ದೆ-ಪಳ್ಲಿತ್ತಡ್ಕ 47 ನೇ ಉರೂಸ್ ಮುಬಾರಕ್- ನೂರೇ ಅಜ್ಮೀರ್ ಆಧ್ಯಾತ್ಮ ಸಂಗಮ

0

ಆಧ್ಯಾತ್ಮಿಕ ಮಜ್ಲಿಸ್‌ನಿಂದ ಮನಸ್ಸಿಗೆ ಶಾಂತಿ, ನೆಮ್ಮದಿ ಉಂಟಾಗುತ್ತದೆ: ವಲಿಯುದ್ದೀನ್ ಫೈಝಿ ವಾಝಕ್ಕಾಡ್


ಪುತ್ತೂರು: ಇರ್ದೆ-ಪಳ್ಳಿತ್ತಡ್ಕ ದರ್ಗಾ ಶರೀಫ್ ಇದರ 47 ನೇ ಉರೂಸ್ ಕಾರ್ಯಕ್ರಮದ ಮೂರನೇ ದಿನವಾದ ಫೆ. 21 ರಂದು ಪಳ್ಳಿತ್ತಡ್ಕದಲ್ಲಿ ನೂರೇ ಅಜ್ಮೀರ್ ಆಧ್ಯಾತ್ಮಿಕ ಸಂಗಮ ನಡೆಯಿತು. ವಲಿಯುದ್ದೀನ್ ಫೈಝಿ ವಾಝಕ್ಕಾಡ್ ಇವರ ನೇತೃತ್ವದಲ್ಲಿ ನೂರೇ ಅಜ್ಮೀರ್ ಆಧ್ಯಾತ್ಮ ಮಜ್ಲಿಸ್ ನಡೆಯಿತು. ಮಜ್ಲಿಸ್‌ನಲ್ಲಿ ಸಾವಿರಾರು ಮಂದಿ ಭಕ್ತಾದಿಗಳು ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ವಲಿಯುದ್ದೀನ್ ಫೈಝಿ ಆಧ್ಯಾತ್ಮಿಕ ಮಜ್ಲಿಸ್‌ಗಳು ಮನಸ್ಸಿಗೆ ಶಾಂತಿ ಮತ್ತು ನೆಮ್ಮದಿಯನ್ನು ಕರುಣಿಸುತ್ತದೆ. ಅಲ್ಲಾಹನ ನಾಮ ಉಚ್ಚರಣೆ ಮತ್ತು ಪವಿತ್ರ ಕುರ್‌ಆನ್ ನಿರ್ದೇಶಿಸಿದ ಸೂಕ್ತಗಳನ್ನು ಹೇಳಿ ಸಾಮೂಹಿಕವಾಗಿ ಪ್ರಾರ್ಥನೆ ಮಾಡಲಾಗುತ್ತದೆ. ಸಾಮೂಹಿಕ ಪ್ರಾರ್ಥನೆಗೆ ಇಸ್ಲಾಮಿನಲ್ಲಿ ಹೆಚ್ಚಿನ ಮಹತ್ವ ಇದ್ದು ಎಲ್ಲರೂ ನೂರೇ ಅಜ್ಮೀರ್ ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ಇಹ, ಪರದಲ್ಲಿ ವಿಜಯಿಗಳಾಗಬೇಕು ಎಂದು ಹೇಳಿದರು.ಸುಮಾರು ಎರಡು ಗಂಟೆಗಳ ಕಾಲ ಭಕ್ತಾದಿಗಳು ಆಧ್ಯಾತ್ಮಿಕತೆಯ ಮಜ್ಲಿಸ್‌ನಲ್ಲಿ ಭಾಗವಹಿಸಿದರು.


ಪ್ರಾಸ್ತಾವಿಕವಾಗಿ ಮಾತನಡಿದ ಸುನ್ನಿ ಮುಖಂಢರಾದ ಕೆ ಆರ್ ಹುಸೈನ್ ದಾರಿಮಿ ರೆಂಜಲಾಡಿ ಮಾತನಾಡಿ ನೂರೇ ಅಜ್ಮೀರ್ ನಂತ ಕಾರ್ಯಕ್ರಮಗಳು ಈ ಕಾಲಘಟ್ಟದ ಅನಿವಾರ್ಯತೆಯಾಗಿದೆ. ನೂರಾರು ಸಮಸ್ಯೆಗಳಿಂದ ಬಳಲುತ್ತಿರುವ ಮಂದಿ ಮಜ್ಲಿಸ್‌ನಲ್ಲಿ ಭಾಗವಹಿಸಿ ತಮ್ಮ ಕಷ್ಟ ಕಾರ್ಪಣ್ಯಗಳನ್ನು ದೂರೀಕರಿಸಿದ್ದಾರೆ. ದ್ಸಿಕ್ರ್ ಮಜ್ಲಿಸ್‌ಗಳು ನಮ್ಮ ಮನಸ್ಸನ್ನು ಶುದ್ದಗೊಳಿಸುತ್ತದೆ ಎಂಬುದಕ್ಕೆ ಈ ಹಿಂದೆ ನಡೆದ ನೂರಾರು ಮಜ್ಲಿಸ್‌ಗಳಲ್ಲಿ ಭಾಗವಹಿಸಿರುವ ಮಂದಿಯೇ ಸಾಕ್ಷಿಯಾಗಿದ್ದಾರೆ. ಪ್ರತಿ ನಿತ್ಯ ನಡೆಯುವ ಈ ಮಜ್ಲಿಸ್ ಕಾರ್ಯಕ್ರಮದಲ್ಲಿ ಸಾವಿರಾರು ಮಂದಿ ಭಾಗವಹಿಸಿದ್ದರೆ ಮತ್ತೆ ಕೆಲವರು ಆನ್‌ಲೈನ್ ಮೂಲಕ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿದ್ದಾರೆ. ವಲಿಯುದ್ದೀನ್ ಫೈಝಿಯವರು ನಡೆಸಿಕೊಂಡು ಬರುವ ಅಜ್ಮೀರ್ ಖ್ವಾಜಾ ಅವರ ಹೆಸರಿನಲ್ಲಿರುವ ಈ ನೂರೇ ಅಜ್ಮೀರ್ ಆಧ್ಯಾತ್ಮ ಮಜ್ಲಿಸ್ ನಮ್ಮ ನಾಳೆಯ ಒಳಿತಿಗಾಗಿ ನಡೆಯುತ್ತಿದೆ ಎಲ್ಲರೂ ಭಾಗವಹಿಸುವಂತೆ ಕರೆ ನೀಡಿದರು.


ಎಸ್ಕೆಎಸ್ಸೆಸ್ಸಫ್ ಮುಖಂಡರಾದ ಇಕ್ಬಾಲ್ ಬಾಳಿಲ ಮಾತನಾಡಿ ನೂರೇ ಅಜ್ಮೀರ್ ಮಹತ್ವ ತಿಳಿಯಬೇಕಾದರೆ ಆ ಮಜ್ಲಿಸ್‌ನಲ್ಲಿ ನಾವು ಭಾಗವಹಿಸಬೇಕಾಗುತ್ತದೆ. ಇದುವರೆಗೆ ನಡೆದ ಮಜ್ಲಿಸ್‌ನಲ್ಲಿ ಭಾಗವಹಿಸಿದ ಅನೇಕ ಮಂದಿ ಅದರಿಂದ ಪ್ರತಿಫಲವನ್ನು ಅನುಭವಿಸಿದ್ದಾರೆ. ಮಕ್ಕಳಿಲ್ಲದ ಅನೇಕರಿಗೆ ದೇವರು ಮಕ್ಕಳನ್ನು ಕರುಣಿಸಿದ್ದಾರೆ, ರೋಗರುಜಿನಗಳು ವಾಸಿಯಾಗಿದೆ. ಉತ್ತಮ ಸಂಕಲ್ಪದಿಂದ ಮಜ್ಲಿಸ್‌ನಲ್ಲಿ ಹೆಚ್ಚು ಮಂದಿ ಭಾಗವಹಿಸುತ್ತಿದ್ದಾರೆ. ಆನ್‌ಲೈನ್ ಮೂಲಕ ದಿನವೊಂದಕ್ಕೆ ಒಂದು ಲಕ್ಷಕ್ಕೂ ಮಿಕ್ಕಿ ಮಂದಿ ಮಜ್ಲಿಸ್‌ನಲ್ಲಿ ನೇರವಾಗಿ ಭಾಗವಹಿಸುತ್ತಿರುವುದು ಉತ್ತಮ ವಿಚಾರವಾಗಿದ್ದು ಆಧ್ಯಾತ್ಮ ಮಜ್ಲಿಸ್ ಮತ್ತು ದುವಾ ಮಜ್ಲಿಸ್‌ಗಳು ಈ ಕಾಲಘಟ್ಟದ ಅನಿವಾರ್ಯತೆಯಾಗಿದೆ ಎಂದು ಹೇಳಿದರು.


ಕೊರಿಂಗಿಲ ಜಮಾತ್ ಕಮಿಟಿ ಅಧ್ಯಕ್ಷರಾದ ಮಹಮ್ಮದ್ ಕುಂಞಿ ಹಾಜಿ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ಕೂರ್ನಡ್ಕ ರೇಂಜ್ ಮದ್ರಸ ಮೆನೆಜ್‌ಮೆಂಟ್ ಅಧ್ಯಕ್ಷರಾದ ಅಬೂಬಕ್ಕರ್ ಮುಲಾರ್, ಉದ್ಯಮಿ ಅಬ್ಬಾಸ್ ಪಾಲ್ತಾಡ್‌ಮ ನೂರ್ ಮಹಮ್ಮದ್ ನೀರ್ಕಜೆ ವಿಟ್ಲ, ಏಂಪೆಕಲ್ಲು ಮದ್ರಸ ಅಧ್ಯಾಪಕ ಫಾರೂಕ್ ಹಿಮಮಿ, ಕೊರಿಂಗಿಲ ಮದ್ರಸ ಅಧ್ಯಾಪಕ ಫಾರೂಕ್ ಉಸ್ತಾದ್, ಅಶ್ರಫ್ ಖಾನ್ ಮಾಂತೂರು, ಹುಸೈನಾರ್ ಸಂತೋಷ್, ಇಬ್ರಾಹಿಂ ಸಾಗರ್‌ಮ ನಾಕಪ್ಪಾಡಿ ರಫೀಕ್ ಹಾಜಿ, ಮಹಮ್ಮದ್ ಹಾಜಿ ಕುಕ್ಕುವಳ್ಳಿ, ಕೊರಿಂಗಲ ಜಮಾತ್ ಕಾರ್ಯದರ್ಶಿ ಖಾಸಿಂ ಕೇಕನಾಜೆ, ಮಾಜಿ ಕಾರ್ಯದರ್ಶಿ ಶಾಹುಲ್ ಹಮೀದ್ ಕೊರಿಂಗಿಲ, ಉರೂಸ್ ಕಮಿಟಿ ಅಧ್ಯಕ್ಷ ಅಲಿ ಶಾಲಾ ಬಳಿ, ಕಾರ್ಯದರ್ಶಿ ಅಶ್ರಫ್ ಕುಕ್ಕುಪುಣಿ, ಕೊರಿಂಗಿಲ ಜಮಾತ್ ಉಪಾಧ್ಯಕ್ಷರಾದ ಇಸ್ಮಾಯಿಲ್ ಹಾಜಿ ಏಂಪೆಕಲ್ಲು, ಮಹಮ್ಮದ್ ಹಾಜಿ ಶಾಲಾ ಬಳಿ ಮೊದಲಾದವರು ಉಪಸ್ತಿತರಿದ್ದರು. ಅಬ್ದುಲ್ಲ ಮೌಲವಿ ಬೇಂಗತ್ತಡ್ಕ ಸ್ವಾಗತಿಸಿ ವಂದಿಸಿದರು.

LEAVE A REPLY

Please enter your comment!
Please enter your name here