




ರೆಂಜಿಲಾಡಿ ಗ್ರಾಮದ ನೈಲ ಎಂಬಲ್ಲಿ ಇಬ್ಬರನ್ನು ಬಲಿ ಪಡೆದುಕೊಂಡ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ನಡೆಸುತ್ತಿರುವ ಆನೆ ಸೆರೆ ಕಾರ್ಯಾಚರಣೆ ಮೂರನೇ ದಿನವಾದ ಫೆ.23ರಂದು ನಡೆಯಿತು.




ರೆಂಜಿಲಾಡಿ ಪೇರಡ್ಕ ಶಿಬಿರದಿಂದ ಸಾಕಾನೆಗಳನ್ನು ಸುಂಕದಕಟ್ಟೆಗೆ ಕೊಂಡೊಯ್ಯಲಾಗಿದೆ. ಕೊಂಬಾರು ಗ್ರಾಮದ ಮಂಡೆಕರ ವ್ಯಾಪ್ತಿಯ ಅರಣ್ಯ ಪ್ರದೇಶದಲ್ಲಿ ಆನೆ ಸೆರೆ ಕಾರ್ಯಾಚರಣೆ ನಡೆಸಲಾಗುತ್ತಿದೆ.





ಈ ಹಿನ್ನೆಲೆಯಲ್ಲಿ ಮಧ್ಯಾಹ್ನದ ವೇಳೆಗೆ ಬೋಲ್ನಡ್ಕ- ಸುಂಕದಕಟ್ಟೆ ರಸ್ತೆಯನ್ನು ಸುರಕ್ಷತೆ ದೃಷ್ಟಿಯಿಂದ ಅರಣ್ಯ ಇಲಾಖೆ ಬಂದ್ ಮಾಡಿದೆ.







