ವಿಟ್ಲ: ಖಾಸಗಿ ವ್ಯಕ್ತಿಯಿಂದ ಸಾರ್ವಜನಿಕ ರಸ್ತೆ ಬಂದ್ – ಜಿಲ್ಲಾಧಿಕಾರಿಗಳ ಆದೇಶ ಮೇರೆಗೆ ಪಟ್ಟಣ ಪಂಚಾಯತ್ ಅಧಿಕಾರಿಗಳಿಂದ ತೆರವು

0

ವಿಟ್ಲ: ಕಳೆದ ಹಲವಾರು ವರ್ಷಗಳಿಂದ ಸಾರ್ವಜನಿಕರು ಉಪಯೋಗಿಸುತ್ತಿದ್ದ ರಸ್ತೆಯೊಂದನ್ನು ವಿಟ್ಲ ಪಟ್ಟಣ ಪಂಚಾಯತ್ ವ್ಯಾಪ್ತಿಯ ಪುರಭವನದ ಬಳಿಯ ಖಾಸಗಿ ವ್ಯಕ್ತಿಯೋರ್ವರು ಮಣ್ಣು ಹಾಕಿ ಬಂದ್ ಮಾಡಿದ್ದ ಹಿನ್ನೆಲೆಯಲ್ಲಿ, ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ವಿಟ್ಲ ಪಟ್ಟಣ ಪಂಚಾಯತ್ ಅಧಿಕಾರಿಗಳು ತೆರವುಗೊಳಿಸಿದ ಘಟನೆ ನಡೆದಿದೆ.

ಪುರಭವನ ಬಳಿ ಇರುವ ರಸ್ತೆಯನ್ನು ಇತ್ತೀಚೆಗೆ ವಿಟ್ಲ ಪಟ್ಟಣ ಪಂಚಾಯತ್ ಅಭಿವೃದ್ಧಿಗೊಳಿಸಿತ್ತು. ಈ ಭಾಗದಲ್ಲಿ ನೂರಕ್ಕಿಂತಲೂ ಅಧಿಕ ಮನೆಗಳಿವೆ. ಬ್ರಹ್ಮಶ್ರೀ ನಾರಾಯಣ ಗುರು ಸಭಾಭವನಕ್ಕೂ ಇದೇ ರಸ್ತೆ ಸಂಪರ್ಕ ಕಲ್ಪಿಸುತ್ತದೆ. ಕೆಲ ದಿನಗಳ ಹಿಂದೆ ಖಾಸಗಿ ವ್ಯಕ್ತಿಯೊಬ್ಬರು ಈ ರಸ್ತೆ ನನ್ನ ವರ್ಗ ಜಾಗದಲ್ಲಿದೆ ಎಂದು ಆರೋಪಿಸಿ ರಸ್ತೆಯನ್ನು ಬಂದ್ ಮಾಡಿದ್ದರು. ಇದರಿಂದ ಈ ಭಾಗದ ಜನರು ಭಾರೀ ತೊಂದರೆ ಅನುಭವಿಸಿದ್ದರು. ಈ ಬಗ್ಗೆ ವಿಟ್ಲ ಬಿಲ್ಲವ ಸಂಘ, ವಿಟ್ಲ ಪಟ್ಟಣ ಪಂಚಾಯತ್ ಸದಸ್ಯರ ಮತ್ತು ನಾಗರೀಕರ ನಿಯೋಗ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗಿತ್ತು.

ಈ ಬಗ್ಗೆ ಸ್ಪಂದಿಸಿದ ಜಿಲ್ಲಾಧಿಕಾರಿಗಳು ತೆರವುಗೊಳಿಸುವಂತೆ ಆದೇಶ ನೀಡಿದ್ದರು.‌

ಈ ಸಂದರ್ಭ ಜಿಲ್ಲಾ ನಗರಾಭಿವೃದ್ಧಿ ಕೋಶದ ಎಂಜಿನಿಯರ್ ಪುರಂದರ, ಸಹಾಯಕ ಎಂಜಿನಿಯರ್ ಅರುಣ್, ವಿಟ್ಲ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಗೋಪಾಲ ನಾಯ್ಕ, ಎಂಜಿನಿಯರ್ ದಿನೇಶ್, ಸದಸ್ಯರಾದ ಸಂಗೀತ ಜಗದೀಶ ಪಾಣೆಮಜಲು, ಅರುಣ ಎಂ. ವಿಟ್ಲ, ಹರೀಶ್ ಸಿ.ಎಚ್ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here