ಪಡುಮಲೆ ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನದ ಬ್ರಹ್ಮಕಲಶೋತ್ಸವ ಅಂಗವಾಗಿ ಫೆ. 25 ರಂದು ಬೆಳಗ್ಗೆ 9.3೦ ಕ್ಕೆ ಸಾಮೂಹಿಕ ಪ್ರಾರ್ಥನೆ, ಬಳಿಕ ಉಗ್ರಾಣ ಮುಹೂರ್ತ ನಡೆಯಲಿದೆ. ಉಗ್ರಾಣ ಮುಹೂರ್ತ ಕಾರ್ಯಕ್ರಮಕ್ಕೆ ಗಣಪತಿ ಗೌಡ ಕೋಡಿಯಡ್ಕ ಹಾಗೂ ಪ್ರಗತಿ ಪರ ಕೃಷಿಕ ಜಯಂತ ರೈ ಕುದ್ಕಾಡಿ ಚಾಲನೆ ನಿಡಲಿದ್ದಾರೆ.
ಪಾಕಶಾಲೆಯನ್ನು ವಾಸುದೇವ ಭಟ್ ಕನ್ನಡ್ಕ ಹಾಗೂ ನಾರಾಯಣ ಭಟ್ ಬಿರ್ನೊಡಿ ಉದ್ಘಾಟನೆ ಮಾಡಲಿದ್ದಾರೆ.
ನೀರಿನ ಟ್ಯಾಂಕ್ ನ್ನು ಬಡಗನ್ನೂರು ಗ್ರಾ.ಪಂ ಅಧ್ಯಕ್ಷೆ ಶ್ರೀಮತಿ ಕೆ ಮತ್ತು ಸದಸ್ಯ ರವಿರಾಜ ರೈ ಸಜಂಕಾಡಿ ಉದ್ಘಾಟನೆ ಮಾಡಲಿದ್ದಾರೆ. ಗಣಪತಿ ಭಟ್ ಕನ್ನಡ್ಕ ಕಾರ್ಯಾಲಯ ಉದ್ಘಾಟನೆ ಮಾಡಲಿದ್ದಾರೆ.
ಮುಖ್ಯ ವೇದಿಕೆಯನ್ನು ನಾರಾಯಣ ಭಟ್ ಚಂದುಕೂಡ್ಲು ಮತ್ತು ಗುರುಸಂದೇಶ್ ಭಂಡಾರಿ ಹಾಗೂ ಗುರು ವಚನ್ ಭಂಡಾರಿ ಉದ್ಘಾಟಿಸಲಿದ್ದಾರೆ.
ಪೂರ್ವಾಹ್ನ ಗಂ. 11.30 ರಿಂದ ವಿವಿಧ ಭಜನಾ ಮಂಡಳಿ ಸದಸ್ಯರಿಂದ ಭಜನಾ ಕಾರ್ಯಕ್ರಮ, ಮಧ್ಯಾಹ್ನ 12.30 ಕ್ಕೆ ಮಹಾ ಪೂಜೆ ಬಳಿಕ ಅನ್ನಸಂತರ್ಪಣೆ ನಡೆಯಲಿದೆ.
ಸಂಜೆ ಗಂ 6 ಕ್ಕೆ ಶ್ರೀ ಕ್ಷೇತ್ರದ ತಂತ್ರಗಳಿಗೆ ಪೂರ್ಣ ಕುಂಭ ಸ್ವಾಗತ ಬಳಿಕ ವೈದಿಕ ಕಾರ್ಯಕ್ರಮ ನಡೆಯಲಿದೆ. ರಾತ್ರಿ ಗಂ 7 ರಿಂದ ಸಾಂಸ್ಕೃತಿಕ ಕಾರ್ಯಕ್ರಮ ಅಂಗವಾಗಿ ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿ ಪುತ್ತೂರು ಇದರ ಗುರುಗಳಾದ ದೀಪಕ್ ಕುಮಾರ್ ಮತ್ತು ಶಿಷ್ಯ ವರ್ಗದವರಿಂದ ಭರತನಾಟ್ಯ ಕಾರ್ಯಕ್ರಮ . ರಾತ್ರಿ ಗಂ 9 ರಿಂದ ಕುದ್ರೋಳಿ ಗಣೇಶ್ ಮತ್ತು ಬಳಗದಿಂದ ಮಾಸ್ತ್ ಮ್ಯಾಜಿಕ್, ಅದ್ಭುತ ಹಾಸ್ಯಮಯ ವಿನೂತನ ಹಾಡು ಕಾರ್ಯಕ್ರಮ ನಡೆಯಲಿದೆ.